• Home
  • »
  • News
  • »
  • state
  • »
  • K S Eshwarappa: ಸೋನಿಯಾ, ರಾಹುಲ್​ ಹಗಲು ರಾತ್ರಿ ಸರ್ಕಸ್​ ಮಾಡಿದ್ರು ಅಧಿಕಾರಕ್ಕೆ ಬರಲು ಆಗಲ್ಲ; ಸಿದ್ದುಗೂ ಸವಾಲ್ ಹಾಕಿದ ಈಶ್ವರಪ್ಪ

K S Eshwarappa: ಸೋನಿಯಾ, ರಾಹುಲ್​ ಹಗಲು ರಾತ್ರಿ ಸರ್ಕಸ್​ ಮಾಡಿದ್ರು ಅಧಿಕಾರಕ್ಕೆ ಬರಲು ಆಗಲ್ಲ; ಸಿದ್ದುಗೂ ಸವಾಲ್ ಹಾಕಿದ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ನಾನು ಪರಮೇಶ್ವರ ಅವರನ್ನು ಸೋಲಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡಿ ತಾಯಿ ಮೇಲೆ ಆಣೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ಎಂದ್ರು.

  • Share this:

ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ (Bharth Jodo Yatre) ಬಗ್ಗೆ ಅನೇಕ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ.  ಇದೀಗ ಕಲಬುರ್ಗಿಯಲ್ಲಿ ಮಾತಾಡಿದ ಸಚಿವ ಕೆ.ಎಸ್​ ಈಶ್ವರಪ್ಪ (K S Eshwarappa) ಸಹ ಯಾತ್ರೆ ಬಗ್ಗೆ ಕಿಡಿಕಾರಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ (Rahul Gandhi) ಇಬ್ಬರು ಹಗಲು ರಾತ್ರಿ ಸರ್ಕಸ್ ಮಾಡಿದ್ರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರನ್ನ ಎಐಸಿಸಿ ಅಧ್ಯಕ್ಷ ಮಾಡಿದ್ರೆ ಅಧಿಕಾರಕ್ಕೆ ಬರುತ್ತೆ ಅನ್ನೊದು ಕನಸು, ಪರಮೇಶ್ವರ ಅವರನ್ನು ಸೋಲಿಸಿದ್ದು ಇದೇ ಸಿದ್ದರಾಮಯ್ಯ (Siddaramaiah), ಪರಮೇಶ್ವರ್​ ಸಿಎಂ ರೇಸ್‌ನಲ್ಲಿದ್ದ ಕಾರಣ ಅವರನ್ನ ಸಿದ್ದರಾಮಯ್ಯ ಸೋಲಿಸಿದ್ರು ಎಂದು ಈಶ್ವರಪ್ಪ ಹೇಳಿದ್ದಾರೆ.


ಚಾಮುಂಡಿ ತಾಯಿ ಮೇಲೆ ಆಣೆ ಮಾಡಲಿ


ನಾನು ಪರಮೇಶ್ವರ ಸೋಲಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡಿ ತಾಯಿ ಮೇಲೆ ಆಣೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ಎಂದ್ರು. ಅ 30 ರಂದು ಕಲಬುರಗಿಯಲ್ಲಿ ಓಬಿಸಿ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದೆ. ಈಗಾಗಲೇ ಸಮಾವೇಶ ಕುರಿತು ಪೂರ್ವಿಭಾವಿ ಸಭೆ ನಡೆಸಲಾಗ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ.  ಸಮಾವೇಶಕ್ಕೆ 5 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗೋ ನಿರೀಕ್ಷೆ ಇದೆ ಎಂದ್ರು.


ಖರ್ಗೆ ಬಲಿ ಕೊಡಲು ಅಧ್ಯಕ್ಷ ಸ್ಥಾನ


ಇದು ಕಾಂಗ್ರೆಸ್‌ಗೆ ಟಕ್ಕರ್ ಕೊಡುವುದಕ್ಕೆ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನ ಬಲಿ ಕೊಡುವುದಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಖಾಡಕ್ಕೆ ಇಳಿಸಿದ್ದಾರೆ. ರಾಹುಲ್, ಸೋನಿಯಾ ಕಾಲಿಟ್ಟಲ್ಲಿ ಪಕ್ಷ ಧೂಳಿಪಟವಾಗ್ತಿದೆ. ಭಾರತ್ ಜೋಡೋ ಯಾರು ಮಾಡಬೇಕು? ಭಾರತ್ ಜೋಡೊ ತೋಡೊ ಮಾಡಿದ್ಯಾರು? ಪಾಕ್/ಹಿಂದೂಸ್ಥಾನ ವಿಭಜನೆ ಮಾಡಿದ್ದು ಯಾರು? ಮುಸ್ಲಿಂ ರಿಗಾಗಿ ಪಾಕಿಸ್ತಾನ ದೇಶ ಮಾಡಿದ್ರು. ದೇಶದಲ್ಲಿ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ. ದೇಶದಲ್ಲಿ ನಡೆಯುವ ಗಲಭೆ, ದೊಂಬಿಗಳಿಗೆ ಕಾಂಗ್ರೆಸ್ ಕಾರಣ ಎಂದು ಈಶ್ವರಪ್ಪಹೇಳಿದ್ದಾರೆ.


ಇದನ್ನೂ ಓದಿ: Bharat Jodo Yatra: ‘ಭಾರತ್‌ ಜೋಡೋ’ಗೆ ಸೋನಿಯಾ ‘ಬಲ’; ಅಕ್ಟೋಬರ್ 7ರಂದು ಮಂಡ್ಯಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ


ರಾಷ್ಟ್ರಪ್ರೇಮಿಗಳನ್ನಾಗಿ ಆರ್‌ಎಸ್‌ಎಸ್


ದೇಶದ್ರೋಹಿ ಚಟುವಟಿಕೆಗಳನ್ನ ಮಾಡ್ತಿರೋದು ಪಿಎಫ್‌ಐ, ಎಸ್‌ಡಿಪಿಐ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ. ಚುನಾವಣೆ ಆಯೋಗದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರ್‌ಎಸ್‌ಎಸ್ ಸಹ ಬ್ಯಾನ್ ಮಾಡಬೇಕು ಎಂದ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದ್ದಾರೆ. ಎಲ್ಲಾ ಹೆಣ್ಣನ್ನ ತಾಯಿ ಅಂತಾ ಕರೆಯೊಕೆ ಆಗಲ್ಲ. ಕೋಟ್ಯಾಂತರ ಜನರನ್ನು ರಾಷ್ಟ್ರಪ್ರೇಮಿಗಳನ್ನಾಗಿ ಆರ್‌ಎಸ್‌ಎಸ್ ಮಾಡ್ತಿದೆ ಎಂದು ಮಾಜಿ‌ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ರು.


ಪಿಎಫ್‌ಐ ತಾಯಿ ಕಾಂಗ್ರೆಸ್, ಕಾಂಗ್ರೆಸ್‌ಗೆ ಮುಸಲ್ಮಾನರ ವೋಟ್​ಬೇಕು, ಅವರೇ ಬೆಳೆಸಿದ್ದು, ಹಿಂದುಳಿದ ವರ್ಗಗಳ ಜನರನ್ನ ಸಾಯಿಸುವುದಕ್ಕೆ ಮುಂದೆ ಬಿಡಲಾಗ್ತಿದೆ. ಪಿಎಫ್‌ಐ ಮೇಲಿದ್ದ ಕೇಸ್‌ಗಳನ್ನ ಹಿಂದಕ್ಕೆ ಪಡೆದಿದ್ದು ಕಾಂಗ್ರೆಸ್, ಕಾಂಗ್ರೆಸ್‌ನ ದ್ವಿಮುಖ ನೀತಿ ಸರಿಯಲ್ಲ. ಪಿಎಫ್‌ಐ ಯುವಕರಿಗೆ ಬಾಂಬ್ ಬ್ಲಾಸ್ಟ್ ಮಾಡುವ ಬಗ್ಗೆ ತರಬೇತಿ ನೀಡಿದೆ. ಆದರೆ ಆರ್‌ಎಸ್‌ಎಸ್ ಇಂತಹ ಕೆಲಸ ಎಲ್ಲಾದರೂ ಮಾಡಿದೆಯಾ ಎಂದು ಪ್ರಶ್ನೆ ಮಾಡಿದ್ರು. ಆರ್‌ಎಸ್‌ಎಸ್‌ಗೆ ರಾಷ್ಟ್ರ ಭಕ್ತಿ ಬಿಟ್ಟು ಬೇರೆನು ಗೊತ್ತಿಲ್ಲ.  ಪಿಎಫ್‌ಐಗೆ ರಾಷ್ಟ್ರದ್ರೋಹ ಬಿಟ್ಟು ಬೇರೆನು ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.


ಇದನ್ನೂ ಓದಿ:  Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್


ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಕೊಂಡಿಲ್ಲ


ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಕೊಂಡಿಲ್ಲ. ಸಚಿವ ಸ್ಥಾನ ಕೊಡೋದು ಬಿಡೋದು ವರಿಷ್ಟರಿಗೆ ಬಿಟ್ಟಿದ್ದು, ನನಗೆ ಕ್ಲಿನ್‌ಚಿಟ್ ಸಿಕ್ಕ ನಂತರ ಬಸವರಾಜ ಬೊಮ್ಮಾಯಿ‌, ಬಿಎಸ್‌ ಯಡಿಯೂರಪ್ಪ, ನಳೀನ್​ ಕುಮಾರ್​ ಕಟೀಲ್ ಕಾಲ್ ಮಾಡಿ ಅಭಿನಂದಿಸಿದ್ರು ಎಂದ್ರು. ಇನ್ನು ಸಿಎಂ ಬೊಮ್ಮಾಯಿ‌ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಈಶ್ವರಪ್ಪ, ಬೊಮ್ಮಾಯಿ‌ ಏನು ಸಿದ್ದರಾಮಯ್ಯ ಅವರ ಹಾಗೇ ಕೆಟ್ಟೊಗಿದ್ದಾರಾ? ಬೊಮ್ಮಾಯಿ‌ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದ್ರು.ಇದೇ ವೇಳೆ ನಾನು ಸಾಯೋವರೆಗೂ ರಾಜಕೀಯದಲ್ಲೇ ಇರುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: