ಕಾಂಗ್ರೆಸ್ ಮನೆ ಕೊಟ್ಟರೆ, ಬಿಜೆಪಿ ಅದನ್ನು ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ ; ಈಶ್ವರ್ ಖಂಡ್ರೆ ಕಿಡಿ

ರಾಜ್ಯದಲ್ಲಿ ಸಾಲವನ್ನು ಮಾಡಿ ಮನೆ ಕಟ್ಟಿಕೊಂಡಿರುವ 3 ಲಕ್ಷ 60 ಸಾವಿರ ಫಲಾನುಭವಿಗಳು ಆತಂಕದಲ್ಲಿದ್ದಾರೆ. ಕೂಡಲೇ ಆ ಬಡವರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

G Hareeshkumar | news18-kannada
Updated:January 11, 2020, 3:47 PM IST
ಕಾಂಗ್ರೆಸ್ ಮನೆ ಕೊಟ್ಟರೆ, ಬಿಜೆಪಿ ಅದನ್ನು ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ ; ಈಶ್ವರ್ ಖಂಡ್ರೆ ಕಿಡಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ.
  • Share this:
ಬೀದರ್(ಜ.11) : ಕಾಂಗ್ರೆಸ್ ಸರಕಾರ ಬಡವರಿಗೆ ಮನೆ ಕೊಟ್ಟರೆ ಬಿಜೆಪಿ ಅಂತಹ ಮನೆಗಳಿಗೆ ಹಣ ನೀಡದೆ ದ್ವೇಷದ ರಾಜಕೀಯ ಮಾಡುತ್ತಿದೆ. ಬಡವರ ಹೊಟ್ಟೆಯ ಮೇಲೆ ಒಡೆದು ಅವರ ಬದುಕನ್ನು ನಾಶ ಮಾಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಾಲ ಸೋಲವನ್ನು ಮಾಡಿ ಮನೆ ಕಟ್ಟಿಕೊಂಡಿರುವ 3 ಲಕ್ಷ 60 ಸಾವಿರ ಫಲಾನುಭವಿಗಳು ಆತಂಕದಲ್ಲಿದ್ದಾರೆ. ಕೂಡಲೇ ಆ ಬಡವರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ತಡವಾಗಿರುವ ಬಗ್ಗೆ ಮಾತನಾಡಿದ ಅವರು, ಶಾಸಕರಿಗೆ ಆಸೆ, ಆಮಿಷಗಳನ್ನು ಒಡ್ಡಿ ರಚನೆಯಾದಂತಹ ಸರಕಾರ ಇದು. ಬಿಜೆಪಿಗೆ ಹೋಗಿ ಗೆದ್ದವರಿಗೆ ಉತ್ತಮ ಖಾತೆಗಳು ಬೇಕಾಗಿವೆ. ಎಲ್ಲರನ್ನೂ ತೃಪ್ತಿಪಡಿಸಲು ಆಗುತ್ತಾ? ಹೀಗಾಗಿ ಆಡಳಿತ ಯಂತ್ರ ಕುಸಿಯುತ್ತದೆ.

ಇದನ್ನೂ ಓದಿ : ಮೈ ಕೊರೆವ ಚಳಿಗೆ ಬೀದರ್ ಜನ ತತ್ತರ - ವಾರದಿಂದ ಕನಿಷ್ಠ ತಾಪಮಾನ ದಾಖಲು

ಮಂಗಳೂರು ಗೋಲಿಬಾರ್​​​​ ನಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸತ್ಯ ಹೊರ ಬರಬೇಕಾದರೆ ನ್ಯಾಯಾಂಗ ತನಿಖೆಯಾಗಲೆಬೇಕಿದೆ ಎಂದು ರಾಜ್ಯ ಸರ್ಕಾರವನ್ನು ಈಶ್ವರ್​​ ಖಂಡ್ರೆ ಆಗ್ರಹಿಸಿದರು.

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ