• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೆಪಿಸಿಸಿ ಪಟ್ಟಗಾಗಿ ಕಸರತ್ತು: ಡಿಕೆಶಿ ಕುಟುಂಬದ ಸದಸ್ಯರಿಂದಲೂ ಟೆಂಪಲ್ ರನ್

ಕೆಪಿಸಿಸಿ ಪಟ್ಟಗಾಗಿ ಕಸರತ್ತು: ಡಿಕೆಶಿ ಕುಟುಂಬದ ಸದಸ್ಯರಿಂದಲೂ ಟೆಂಪಲ್ ರನ್

ಮಾಜಿ ಸಚಿವ ಡಿಕೆ ಶಿವಕುಮಾರ್​ ಹೆಂಡತಿ

ಮಾಜಿ ಸಚಿವ ಡಿಕೆ ಶಿವಕುಮಾರ್​ ಹೆಂಡತಿ

ಡಿಕೆಶಿವಕುಮಾರ್ ವಿಮಾನದ ಮೂಲಕ ಬೆಂಗಳೂರಿಗೆ ಮುಖ ಮಾಡುತ್ತಿದ್ದಂತೆಯೇ ಗಾಣಗಾಪುರಕ್ಕೆ ಭೇಟಿ ನೀಡಿದ ಕುಟುಂಬದ ಸದಸ್ಯರು, ನಿರ್ಗುಣ ಪಾದುಕೆ ಪೂಜೆ ನೆರವೇರಿಸಿದ್ದಾರೆ.

  • Share this:

ಕಲಬುರ್ಗಿ(ಜ.31) :  ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಬೆನ್ನ ಹಿಂದೆಯೇ ಪತ್ನಿ ಮತ್ತು ಮಗಳಿಂದಲೂ ಟೆಂಪಲ್ ರನ್ ನಡೆದಿದೆ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಭೇಟಿ ನೀಡಿದ ಡಿಕೆಶಿ ಪತ್ನಿ ಮತ್ತು ಪುತ್ರಿ ವಿಶೇಷ ಪೂಜೆ ನೆರವೇರಿಸಿದರು.


ನಿನ್ನೆ ಬೆಳಿಗ್ಗೆಯಷ್ಟೇ ಗಾಣಗಾಪುರಕ್ಕೆ ಭೇಟಿ ನೀಡಿದ್ದ ಡಿಕೆಶಿ, ನಿರ್ಗುಣ ಪಾದುಕೆ ಪೂಜೆ ನೆರೇವೇರಿಸಿದ್ದರು. ನಂತರ ಭೂಸನೂರು ಗ್ರಾಮಕ್ಕೆ ತೆರಳಿ ವಿರಕ್ತ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು.


ಡಿಕೆಶಿವಕುಮಾರ್ ವಿಮಾನದ ಮೂಲಕ ಬೆಂಗಳೂರಿಗೆ ಮುಖ ಮಾಡುತ್ತಿದ್ದಂತೆಯೇ ಗಾಣಗಾಪುರಕ್ಕೆ ಭೇಟಿ ನೀಡಿದ ಕುಟುಂಬದ ಸದಸ್ಯರು, ನಿರ್ಗುಣ ಪಾದುಕೆ ಪೂಜೆ ನೆರವೇರಿಸಿದ್ದಾರೆ. ತಮ್ಮ ಕುಟುಂಬಕ್ಕೆ ಒದಗಿ ಬಂದಿರೋ ಸಂಕಷ್ಟಗಳಿಂದ ಪಾರು ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ.


ಡಿಕೆಶಿ ಜೊತೆ ಜೊತೆಗೆ ಕುಟುಂಬದ ಸದಸ್ಯರಿಂದಲೂ ಟೆಂಪಲ್ ರನ್ ನಡೆದಿದೆ. ಗಾಣಗಾಪುರ ಭೇಟಿ ವೇಳೆ ಡಿಕೆಶಿ ಕುಟುಂಬಕ್ಕೆ ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿರಸಗಿ ಮತ್ತಿತರರು ಜೊತೆಯಾದದರು.


ಇದನ್ನೂ ಓದಿ :  ನನಗೆ ತೊಂದ್ರೆ ಕೊಡೋದ್ರಲ್ಲಿ ಕೆಲವರಿಗೆ ಖುಷಿಯಿದೆ - ನೋವು ಎಲ್ಲಿರುತ್ತೋ ಅಲ್ಲಿ ಲಾಭ ಇರುತ್ತೆ; ಡಿಕೆ ಶಿವಕುಮಾರ್


ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಟೆಂಪಲ್ ರನ್ ಮುಂದುವರೆಸಿದ್ದಾರೆ. ಯಾದಗಿರಿ ಜಿಲ್ಲೆ ಗೋನಾಳದ ಗಡಿ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನಿನ್ನೆ ಗಾಣಗಾಪುರದ ದತ್ತನ ದರ್ಶನ ಪಡೆದರು. ಅಫಜಲಪುರ ತಾಲೂಕಿನಲ್ಲಿರುವ ಗಾಣಗಾಪುರಕ್ಕೆ ತೆರಲಿ, ದತ್ತಾತ್ರೇಯ ಪಾದುಕೆ ದರ್ಶನ ಮಾಡಿದರು. ನಿರ್ಗುಣ ಪಾದುಕೆ ಪೂಜೆ ನೆರವೇರಿಸಿದ ಡಿಕೆಶಿ, ಇಷ್ಟಾರ್ಧ ಸಿದ್ಧಿಗೆ ಪ್ರಾರ್ಥಿಸಿದರು. ತಮಗಿರುವ ಅಡ್ಡಿ ಆತಂಕಗಳು ನಿವಾರಣೆಯಾಗಲೆಂದು ಪ್ರಾರ್ಥಿಸಿದರು.

First published: