ಬಿಜೆಪಿಯವರೇ ನಮ್ಮವರನ್ನು ನಾಯಕರು ಅಂತಿದ್ದಾರೆ; ಯಡಿಯೂರಪ್ಪ ಈಗ ಒಬ್ಬ ಲೀಡರ್​ ಆಗಿ ಉಳಿದಿಲ್ಲ​; ಮಾಜಿ ಸಚಿವ ಡಿಕೆಶಿ

ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ದೇಶವನ್ನು ಉಳಿಸಬೇಕಿದೆ. ನಮ್ಮ ನಾಯಕರೆಲ್ಲ ಸಮರ್ಥರೇ ಇದ್ದಾರೆ. ದಿನೇಶ್ ಗುಂಡೂರಾವ್ ಸಮರ್ಥರಲ್ವಾ? ಸಿದ್ದರಾಮಯ್ಯ ಸಮರ್ಥರಲ್ವಾ?  ಎಲ್ಲರೂ ಸಮರ್ಥ ನಾಯಕರೇ. 

news18-kannada
Updated:December 16, 2019, 7:24 PM IST
ಬಿಜೆಪಿಯವರೇ ನಮ್ಮವರನ್ನು ನಾಯಕರು ಅಂತಿದ್ದಾರೆ; ಯಡಿಯೂರಪ್ಪ ಈಗ ಒಬ್ಬ ಲೀಡರ್​ ಆಗಿ ಉಳಿದಿಲ್ಲ​; ಮಾಜಿ ಸಚಿವ ಡಿಕೆಶಿ
ಡಿಕೆ ಶಿವಕುಮಾರ್
  • Share this:
ಬೆಂಗಳೂರು(ಡಿ.16): ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಡಿಕೆ ಶಿವಕುಮಾರ್​ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ಲಾಬಿ ಮಾಡುತ್ತಿಲ್ಲ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ನನಗೆ ಯಾರ ಬೆಂಬಲವೂ ಬೇಡ. ಕೆಪಿಸಿಸಿ ಅಧ್ಯಕ್ಷ ಅಂತ ನನ್ನ ಹೆಸರು ಹೇಳಬೇಡಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್​ನಲ್ಲಿ ನಾನು ಮಾತ್ರ ಸಮರ್ಥ ಅಲ್ಲ. ಪಕ್ಷದಲ್ಲಿರುವ ಎಲ್ಲರೂ ಸಮರ್ಥರೇ. ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆ, ಸಿದ್ದರಾಮಯ್ಯನವರ ಭಾವನೆ ಕೂಡ ಅತ್ಯಂತ ಸಹಜ. ಚುನಾವಣೆ ಸಂದರ್ಭದಲ್ಲಿ ನಾನು ಕೂಡ ಹಲವು ಕ್ಷೇತ್ರಗಳಲ್ಲಿ ಓಡಾಡಿದ್ದೆ. ಜನರು ಸೇರಿದ್ದು ನೋಡಿ ಬಹಳ ಖುಷಿಯಾಗಿತ್ತು. ಆದರೆ ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ನನಗೂ ಕೂಡ ನೋವಾಗಿದೆ ಎಂದರು.

ಬೆಳಗಾವಿ ಬಾಲಕಿಯ ಅತ್ಯಾಚಾರ ಪ್ರಕರಣ; ಸಂತ್ರಸ್ತೆಯ ಅಪಹರಣಕ್ಕೆ ಯತ್ನಿಸಿದ್ದ ಆರೋಪಿ ತಂದೆಯ ಬಂಧನ

ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ದೇಶವನ್ನು ಉಳಿಸಬೇಕಿದೆ. ನಮ್ಮ ನಾಯಕರೆಲ್ಲ ಸಮರ್ಥರೇ ಇದ್ದಾರೆ. ದಿನೇಶ್ ಗುಂಡೂರಾವ್ ಸಮರ್ಥರಲ್ವಾ? ಸಿದ್ದರಾಮಯ್ಯ ಸಮರ್ಥರಲ್ವಾ?  ಎಲ್ಲರೂ ಸಮರ್ಥ ನಾಯಕರೇ.  ಸಿದ್ದರಾಮಯ್ಯ ಅತ್ಯಂತ ಲಕ್ಕಿಯೆಸ್ಟ್, ಸಮರ್ಥ ಸಿಎಂ ಆಗಿದ್ದರು. 11 ವರ್ಷಗಳಿಂದ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ ಎಂದು ಶ್ಲಾಘಿಸಿದರು.

ಯಡಿಯೂರಪ್ಪ ಒಬ್ಬ ನಾಯಕನಾಗಿ ಉಳಿದಿಲ್ಲ

ಬಿಜೆಪಿಗೆ ಹೋಗಿ ಗೆದ್ದ ಶಾಸಕರೇ ಬಂದು ನಮ್ಮವರನ್ನು ನೀವೇ ನಮ್ಮ ನಾಯಕರು ಅಂತಿದ್ದಾರೆ. ಇದನ್ನು ಕೇಳಿದರೆ ನನಗೆ ಬಹಳ ಖುಷಿಯಾಗುತ್ತದೆ. ಅವರ ಪಕ್ಷದ ಶಾಸಕರು ನಮ್ಮ ನಾಯಕರು ಅಂತ ಸಿದ್ದರಾಮಯ್ಯ ಗೆ ಹೇಳುತ್ತಾರೆ. ಹೀಗಾಗಿ ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್. ಅಷ್ಟೇ ಸಾಕು ನಮಗೆ ಎಂದರು.

ಕೊನೆಯಲ್ಲಿ, ನಾನು ಮತ್ತೆ ದೆಹಲಿಗೆ ಹೋಗಬೇಕಿದೆ. ಪತ್ನಿಯ ಕೇಸ್​ ಸಂಬಂಧ ಕೆಲ ದಾಖಲೆಗಳಿವೆ. ಅವುಗಳನ್ನೆಲ್ಲ ಕೋರ್ಟ್​ಗೆ ನೀಡಬೇಕಿದೆ. ಹೀಗಾಗಿ ನಾನು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದರು. 

‘ನನ್ನ ಸರ್ಕಾರ ಬೇಕಾದರೆ ವಜಾಗೊಳಿಸಿ, ಪೌರತ್ವ ಕಾಯ್ದೆ ಮಾತ್ರ ಅನುಷ್ಠಾನ ಮಾಡುವುದಿಲ್ಲ‘: ಕೇಂದ್ರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಖಡಕ್​​ ಸಂದೇಶ
First published:December 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ