ಸಿಬಿಐ ಒಂದು ಒಳ್ಳೆಯ ಸಂಸ್ಥೆ; ಇಡಿಯಂತೆ ನಿಯಮಾವಳಿ ಮೀರಲ್ಲ; ಯಾರ ಮಾತೂ ಕೇಳಲ್ಲ: ಡಿಕೆ ಶಿವಕುಮಾರ್​

ಸಿಬಿಐ ಒಂದು ಒಳ್ಳೆಯ ಸಂಸ್ಥೆ. ಅದರ ದುರುಪಯೋಗದ ಬಗ್ಗೆ ನಾನು ಮಾತನಾಡಲ್ಲ. ಸಿಬಿಐನವರು ಕಾನೂನು ಪ್ರಕಾರವೇ ಹೋಗುತ್ತಾರೆ. ಅವರು ನಿಯಮ ಮೀರಿ ತನಿಖೆ ಮಾಡಲ್ಲ ಎಂಬ ನಂಬಿಕೆ ನನಗೆ ಇದೆ. ನನ್ನ ಅನೇಕ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು.

Latha CG | news18-kannada
Updated:November 8, 2019, 1:42 PM IST
ಸಿಬಿಐ ಒಂದು ಒಳ್ಳೆಯ ಸಂಸ್ಥೆ; ಇಡಿಯಂತೆ ನಿಯಮಾವಳಿ ಮೀರಲ್ಲ; ಯಾರ ಮಾತೂ ಕೇಳಲ್ಲ: ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
  • Share this:
ಮೈಸೂರು(ನ.08): ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ಬಂಧನದಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್​, ಜೈಲಿನಿಂದ ಬಿಡುಗಡೆಯಾದ ಬಳಿಕ ನಿನ್ನೆ ಮೈಸೂರಿಗೆ ತೆರಳಿದ್ದರು. ಇಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ಧಾರೆ. ಜಾರಿ ನಿರ್ದೇಶನಾಲಯ(ಇಡಿ)ದ ವಿರುದ್ಧ ಕಿಡಿಕಾರಿದ್ದಾರೆ. 

ಈ ವೇಳೆ ಡಿಕೆಶಿ ಇಡಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸಿಬಿಐ ಬಗ್ಗೆ ಮೃದು ಧೋರಣೆ ತೋರಿದ ಅವರು, ಇಡಿ ಹೇಗೆ ಬೇಕಾದರೂ ಹೋಗಬಹುದು. ಆದರೆ ಸಿಬಿಐ ಒಂದು ಜವಾಬ್ದಾರಿಯುತ ಸಂಸ್ಥೆ ಎಂದು ಹೇಳಿದ್ದಾರೆ.

ಸಿಬಿಐ ಒಂದು ಒಳ್ಳೆಯ ಸಂಸ್ಥೆ. ಅದರ ದುರುಪಯೋಗದ ಬಗ್ಗೆ ನಾನು ಮಾತನಾಡಲ್ಲ. ಸಿಬಿಐನವರು ಕಾನೂನು ಪ್ರಕಾರವೇ ಹೋಗುತ್ತಾರೆ. ಅವರು ನಿಯಮ ಮೀರಿ ತನಿಖೆ ಮಾಡಲ್ಲ ಎಂಬ ನಂಬಿಕೆ ನನಗೆ ಇದೆ. ನನ್ನ ಅನೇಕ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದಲ್ಲಿ ಡಿಕೆಶಿ- ಸಾ.ರಾ.ಮಹೇಶ್ ಗೌಪ್ಯ ಮಾತುಕತೆ!

ಸಿಬಿಐನವರು  ನನ್ನ ಬಗ್ಗೆ ತನಿಖೆ ಮಾಡಲಿ. ಆದರೆ ಕಾನೂನು ಮೀರಿ ಏನೂ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ. ಸಿಬಿಐ ಕಾನೂನು ಮೀರಿ ಹೋಗಲ್ಲ ಎಂದು ನಂಬಿದ್ದೇನೆ. ಸಿಬಿಐನವರು ಎಷ್ಟಾದರೂ ತನಿಖೆ ಮಾಡಲಿ. ಎಲ್ಲದಕ್ಕೂ ಉತ್ತರ ಕೊಡಲು ನಾನು ಸಿದ್ಧನಿದ್ದೇನೆ ಎಂದರು.

ಸಿಬಿಐ ಅಧಿಕಾರಿಗಳು ಯಾರ ಮಾತನ್ನೂ ಕೇಳಲ್ಲ. ಅವರು ನಿಯಾಮವಳಿ ಪ್ರಕಾರವೇ ಹೋಗುತ್ತಾರೆ. ಸಿಬಿಐ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ತಯಾರಿದ್ದೇನೆ. ನನ್ನ ಬಗ್ಗೆ ನನಗೆ ಸ್ಪಷ್ಟತೆ ಇರುವಾಗ ನನಗೇನು ಭಯ? ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 48 ದಿನ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಅ.23ರಂದು ದೆಹಲಿ ಹೈಕೋರ್ಟ್​​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇಡಿ ಕಂಟಕದಿಂದ ಪಾರಾದ ಬೆನ್ನಲ್ಲೇ, ಡಿಕೆಶಿಗೆ ಸಿಬಿಐ ಆತಂಕ ಎದುರಾಗಿತ್ತು. ಡಿಕೆ ಶಿವಕುಮಾರ್​ ಅವರ ಆಸ್ತಿ, ಸೋಲಾರ್​ ಟೆಂಡರ್​ ದುರ್ಬಳಕೆ ವಿಚಾರದಲ್ಲಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಶಿಫಾರಸು ಮಾಡಿತ್ತು.ಭಾರತದ ಪ್ರಧಾನಿ ಮೋದಿ ವಿಶ್ವದ ಅತ್ಯುತ್ತಮ ನಾಯಕ: ಯುಎಸ್​​ ಬಿಲೇನಿಯರ್​ ರೇ ಡಾಲಿಯೋ​

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading