16ನೇ ಶತಮಾನದಿಂದಲೂ ಕಪಾಲಿ ಬೆಟ್ಟಕ್ಕೆ ಒಂದು ಇತಿಹಾಸ ಇದೆ; ಶಿಲೆ, ಪ್ರತಿಮೆ ಎಲ್ಲವೂ ಇದೆ: ಡಿಕೆ ಶಿವಕುಮಾರ್

ನಮ್ಮ ಕ್ಷೇತ್ರದ ಶಿವಗಿರಿ ಬೆಟ್ಟವನ್ನು ಕೂಡ ಅಭಿವೃದ್ಧಿ ಮಾಡಿದ್ದೇನೆ. ಸಾಕಷ್ಟು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದೇನೆ. ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ವಾಕ್ಯ ನನಗೂ ಗೊತ್ತಿದೆ. ಯಾವ ದೇವರು ಯಾವ ಧರ್ಮ ಯಾರನ್ನು ಆರಾಧನೆ ಮಾಡಬೇಕು ಅಂತ ಜನರಿಗೆ ಗೊತ್ತಿದೆ

G Hareeshkumar | news18-kannada
Updated:December 28, 2019, 7:06 PM IST
16ನೇ ಶತಮಾನದಿಂದಲೂ ಕಪಾಲಿ ಬೆಟ್ಟಕ್ಕೆ ಒಂದು ಇತಿಹಾಸ ಇದೆ; ಶಿಲೆ, ಪ್ರತಿಮೆ ಎಲ್ಲವೂ ಇದೆ: ಡಿಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
  • Share this:
ರಾಮನಗರ(ಡಿ. 28): ನನ್ನ ಮೇಲೆ ಬಿಜೆಪಿ ನಾಯಕರಿಗೆ ಸಾಕಷ್ಟು ಪ್ರೀತಿ ಇದೆ. ಅವರು ಬೇರೆ ಬೇರೆ ಕಡೆ ಏನೇನೋ ಮಾತನಾಡ್ತಾ ಇದ್ದಾರೆ. ನಾನು ಹಳ್ಳ ತೋಡಿಕೊಂಡು ಇದ್ದೀನಿ. ಅವರು ಬಂದು ನನ್ನ ಸಮಾಧಿ ಮಾಡಲಿ ಎಂದು ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ಧಾರೆ. ಜೈನ್ ಕಾಲೇಜಿನಲ್ಲಿ ಉತ್ತಮ ಅಂಕ ಪಡೆದ ಎಸ್​ಎಸ್​ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿಮಾತನಾಡುತ್ತಿದ್ದ ಅವರು ಎಂಎಲ್ಸಿ ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಯೇಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಿದ್ದಾರೆ ಎಂದು ನಿನ್ನೆ ಎಂಎಲ್ಸಿ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದರು.ಆರ್ ಅಶೋಕ್ ಅವರು ಕಂದಾಯ ಮಂತ್ರಿಗಳು. ಅವರು ಬಂದು ಹಾರೋಹಳ್ಳಿಗೆ ಭೇಟಿ ನೀಡಲಿ. ಅಧಿಕಾರಿಗಳನ್ನು ಮಾತ್ರ ಯಾಕೆ ಕಳಿಸುತ್ತಾರೆ? 16ನೇ ಶತಮಾನದಿಂದಲೂ  ಕಪಾಲ ಬೆಟ್ಟದ ಆ ಜಾಗಕ್ಕೆ ಒಂದು ಇತಿಹಾಸ ಇದೆ. ಶಿಲೆ, ಪ್ರತಿಮೆ ಎಲ್ಲವೂ ಆ ಸ್ಥಳದಲ್ಲಿ ಇದೆ. ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿದಿದೆಯೋ ಏನೋ ಗೊತ್ತಿಲ್ಲ ಎಂದರು.

ಸಚಿವರಾದ ಸಿಟಿ ರವಿ, ಆರ್ ಅಶೋಕ್, ಹಾಗೂ ಈಶ್ವರಪ್ಪ ಅವರಿಗೆ ಒತ್ತಡ ಇದೆ. ದೊಡ್ಡವರು ಅವರು ಏನು ಏನೋ ಮಾತಾಡುತ್ತಾರೆ. ಮಾತನಾಡಲು ಸಂಸದ ಅನಂತ್ ಕುಮಾರ್ ಹೆಗಡೆ ಸಾಹೇಬರು ಹೇಳಿದ್ದಾರೆ. ಬಿಜೆಪಿ ನಾಯಕರು ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಲಿ ಎಂದು ಡಿಕೆಶಿ ಆಗ್ರಹಿಸಿದರು.

ನಮ್ಮ ಕ್ಷೇತ್ರದ ಶಿವಗಿರಿ ಬೆಟ್ಟವನ್ನು ಕೂಡ ಅಭಿವೃದ್ಧಿ ಮಾಡಿದ್ದೇನೆ. ಸಾಕಷ್ಟು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದೇನೆ. 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಎಂಬ ವಾಕ್ಯ ನನಗೂ ಗೊತ್ತಿದೆ. ಯಾವ ದೇವರು ಯಾವ ಧರ್ಮ ಯಾರನ್ನು ಆರಾಧನೆ ಮಾಡಬೇಕು ಅಂತ ಜನರಿಗೆ ಗೊತ್ತಿದೆ ಎಂದರು.

ಬಿಜೆಪಿ ಸರ್ಕಾರ ಪ್ರತಿಮೆ ನಿರ್ಮಾಣ ಸ್ಥಳ ವಾಪಸ್ ಪಡೆದುಕೊಂಡ್ರೆ ಎಂಬ ಪ್ರಶ್ನೆಗೆ ಡಿಕೆಶಿ, ಆ ವಿಚಾರ ಊಹೆ ಮಾಡಿಕೊಂಡು ನಾನು ಯಾಕೆ ಮಾತನಾಡಬೇಕು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಕೊಟ್ಟ ವಾಚ್​ಗಳಲ್ಲಿ ಡಿಕೆಶಿ ಫೋಟೋ; ಸರ್ಕಾರಿ ಕಾರ್ಯಕ್ರಮ ದುರುಪಯೋಗಿಸಿದ ಆರೋಪ

ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಡಿಕೆಶಿ ಅವರು ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ 114 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಮಾಡಲು 10 ಎಕರೆ ಪ್ರದೇಶವನ್ನು ಕ್ರೈಸ್ತ ಸಮುದಾಯಕ್ಕೆ ಕೊಡಿಸಿದ್ದರು. ಇದು ಸರ್ಕಾರದ ಗೋಮಾಳವಾಗಿದೆ. ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂಬುದು ಬಿಜೆಪಿಯವರ ಆಕ್ಷೇಪ. ಅಷ್ಟೇ ಅಲ್ಲ, ಈ ಬೆಟ್ಟವು ಹಿಂದೂಗಳ ಪವಿತ್ರ ಭೂಮಿಯಾಗಿದ್ದು, ಇದನ್ನು ಬೇರೆ ಸಮುದಾಯಕ್ಕೆ ಕೊಡುವುದು ಸರಿಯಲ್ಲ ಎಂದು ಬಿಜೆಪಿಯವರು ವಾದಿಸುತ್ತಿದ್ದಾರೆ.

ಈ ಸ್ಥಳ ಹಾಗೂ ಕ್ರೈಸ್ತರಿಗೆ ಭೂಮಿ ಮಂಜೂರಾಗಿರುವ ದಾಖಲೆಗಳನ್ನು ಸರ್ಕಾರ ಪರಿಶೀಲಿಸುತ್ತಿದ್ದು, ಅದರ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

(ವರದಿ: ಎ.ಟಿ. ವೆಂಕಟೇಶ್​)
Published by: G Hareeshkumar
First published: December 28, 2019, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading