ಅಪೋಲೋ ಆಸ್ಪತ್ರೆಗೆ ದಾಖಲಾದ ಮಾಜಿ ಸಚಿವ ಡಿಕೆ ಶಿವಕುಮಾರ್​

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ಆಗಮಿಸಿ, ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ. ಡಿಕೆಶಿ ಈ‌ ಹಿಂದೆಯೂ ಸಹ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

Latha CG | news18-kannada
Updated:November 1, 2019, 9:27 PM IST
ಅಪೋಲೋ ಆಸ್ಪತ್ರೆಗೆ ದಾಖಲಾದ ಮಾಜಿ ಸಚಿವ ಡಿಕೆ ಶಿವಕುಮಾರ್​
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು,(ನ.01): ಅನಾರೋಗ್ಯ ಹಿನ್ನೆಲೆ ಮಾಜಿ ಸಚಿವ ಡಿಕೆ ಶಿವಕುಮಾರ್​ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಪಿ, ಶುಗರ್​ನಲ್ಲಿ ವ್ಯತ್ಯಾಸವಾದ ಹಿನ್ನೆಲೆ, ಡಿಕೆಶಿ ಇಂದು ಶೇಷಾದ್ರಿಪುರಂನಲ್ಲಿರುವ ಆಸ್ಪತ್ರೆಗೆ ಸೇರಿದ್ದಾರೆ. 

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ಆಗಮಿಸಿ, ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ. ಡಿಕೆಶಿ ಈ‌ ಹಿಂದೆಯೂ ಸಹ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಇಡಿ ವಿಚಾರಣೆ ನಡೆಯುವಾಗ ಹಾಗೂ ತಿಹಾರ್​ ಜೈಲಿನಲ್ಲಿದ್ಧಾಗಲೂ ಡಿಕೆಶಿವಕುಮಾರ್​ ಅವರಿಗೆ ಆರೋಗ್ಯ ಏರುಪೇರಾಗಿತ್ತು. ಆಗ ದೆಹಲಿಯ ಆಸ್ಪತ್ರೆಯಲ್ಲೇ ಡಿಕೆಶಿ ಚಿಕಿತ್ಸೆ ಪಡೆದಿದ್ದರು.

64 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಯಡಿಯೂರಪ್ಪ

ಜಾಮೀನು ಸಿಕ್ಕಿದ ಬಳಿಕ ಬಿಡುಗಡೆಯಾದ ಡಿಕೆಶಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನನಗೆ ಆರೋಗ್ಯ ಸರಿಯಾಗಿಲ್ಲ, ಮೊದಲು ಆರೋಗ್ಯ ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಇಂದು ಬಿಪಿ, ಶುಗರ್​ನಲ್ಲಿ ವ್ಯತ್ಯಯವಾದ ಹಿನ್ನೆಲೆ, ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಬಿಪಿ, ಶುಗರ್ ಚೆಕ್​ ಮಾಡಿ, ಬಳಿಕ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ.

ಡಿಕೆಶಿ ಇಂದು ಸಂಜೆ ವಿನಯ್​ ಗುರೂಜಿ ಅವರನ್ನು ಭೇಟಿಯಾಗಿ ಬಂದಿದ್ದರು. ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದ ಅವಧೂತರು ಮತ್ತೆ ಸಂಕಷ್ಟ ಎದುರಾಗಲಿದೆ ಎಂದಿದ್ದರು. ಈ ಬೆನ್ನಲ್ಲೇ ಡಿಕೆಶಿವಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಡಿಕೆಶಿ ಆರೋಗ್ಯವನ್ನು ವಿಚಾರಿಸಲು ಕಾಂಗ್ರೆಸ್​ ಮುಖಂಡರು ಅಪೋಲೋ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಮಾಜಿ ಸಚಿವ ಕೃಷ್ಣ ಭೈರೇಗೌಡ ಆಸ್ಪತ್ರೆಗೆ ತೆರಳಿ ಡಿಕೆಶಿ ಆರೋಗ್ಯ ವಿಚಾರಿಸಿದ್ದಾರೆ.

ಡಿಕೆಶಿಗೆ ಮತ್ತೆ ಕಾದಿದೆ ಸಂಕಷ್ಟ; ಇದರ ಬೆನ್ನಲ್ಲೇ ಸಿಗಲಿದೆ ಉನ್ನತ ಹುದ್ದೆ; ವಿನಯ್​ ಗುರೂಜಿ ಭವಿಷ್ಯ

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ