ಕೊಪ್ಪಳ(ಜೂ.06): ಚುನಾವಣಾ (Karnataka Elections) ಭರಾಟೆ ಸದ್ಯ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು ಸರ್ಕಾರವನ್ನೂ ರಚಿಸಿದೆ. ಹೀಗಿದ್ದರೂ ರಾಜ್ಯ ರಾಜಕೀಯದಲ್ಲಿ (Karnataka Politics) ಹೈಡ್ರಾಮಾಗಳು ಮಾತ್ರ ಮುಂದುವರೆಯುತ್ತಲೇ ಇವೆ. ಒಂದೆಡೆ ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ ಜಾರಿಗೊಳಿಸುವಲ್ಲಿ ಸಿಎಂ ಹಾಗೂ ತಂಡ ಬ್ಯುಸಿಯಾಗಿದ್ದರೆ, ಇತ್ತ ಮಾಜಿ ಸಚಿವರೊಬ್ಬರು ಪಕ್ಷದ ಕೆಲ ನಾಯಕರನ್ನು ಉಚ್ಛಾಟಿಸುವಂತೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ.
ಹೌದು ಜನಾರ್ದನ ರೆಡ್ಡಿ ಗೆಲುವಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆಂದು ಆರೋಪಿಸಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೆಲ ಕಾಂಗ್ರೆಸ್ ಮುಖಂಡರನ್ನು ಉಚ್ಛಾಟಿಸಲು ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಅಲ್ಲದೇ ಕೈ ನಾಯಕರು ರೆಡ್ಡಿಗೆ ಬೆಂಬ ನೀಡಿರುವುದಕ್ಕೆ ದಾಖಲೆಗಳನ್ನೂ ನೀಡಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರೆಡ್ಡಿ ವಿರುದ್ಧ ಸೋಲನುಭವಿಸಿದ್ದಾರೆಂಬುವುದು ಉಲ್ಲೇಖನೀಯ. ಈ ಸೋಲಿಗೆ ಕೆಲ ಮುಖಂಡರು ರೆಡ್ಡಿಗೆ ಪರೋಕ್ಷ ಬೆಂಬಲ ನೀಡಿರುವುದೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Chikkaballapura: ಕ್ಷೇತ್ರದ ಜನತೆಗೆ 6ನೇ ಗ್ಯಾರಂಟಿ ಘೋಷಿಸಿದ ಶಾಸಕ ಪ್ರದೀಪ್ ಈಶ್ವರ್!
ಜನಾರ್ದನ ರೆಡ್ಡಿ ಜೊತೆಗೆ ಸಭೆ, ಸನ್ಮಾನದಲ್ಲಿ ಕೈ ನಾಯಕರ ಪೋಟೋವನ್ನು ದಾಖಲೆಯಾಗಿ ಇಕ್ಬಾಲ್ ಅನ್ಸಾರಿ ಒದಗಿಸಿದ್ದು, ವಿಧಾನಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ವಿರುದ್ದ ಅನ್ಸಾರಿ ದೂರು ನೀಡಿದ್ದಾರೆ.
ಸಿದ್ದರಾಮಯ್ಯನವರ ಆಪ್ತರಾಗಿರೋ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೆಲ ಅಧಿಕಾರಿಗಳ ವರ್ಗಾವಣೆ ಮಾಡಲೂ ಪಟ್ಟಿ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆನ್ನಲಾಗಿದ್ದು, ಶಾಸಕ ಜನಾರ್ದನ ರೆಡ್ಡಿಯನ್ನೇ ಬದಿಗೊತ್ತಿ ಅನ್ಸಾರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ