ಸಿಡಿ ಯುವತಿಗೂ ನನಗೂ ಸಂಬಂಧವಿಲ್ಲ, ನಾನು‌ ಒಂದು‌ ರೂಪಾಯಿ ಕೂಡಾ ಕೊಟ್ಟಿಲ್ಲ; ಮಾಜಿ ‌ಸಚಿವ ಡಿ.ಸುಧಾಕರ್ ಸ್ಪಷ್ಟನೆ

ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಜೊತೆ ನನಗೆ ಯಾವುದೇ ಹಣದ ವ್ಯವಹಾರ ಇಲ್ಲ, ಯಾವುದೇ ಹಣವನ್ನು ನಾನು ಯಾರಿಗೂ ಕೊಟ್ಟಿಲ್ಲ. ಈ ವಿಚಾರವಾಗಿ ಎಸ್​ಐಟಿ ನನಗೆ ಯಾವುದೇ ಕರೆಯನ್ನ ಮಾಡಿಲ್ಲ, ಈ ಕೇಸ್ ಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಡಿ.ಸುಧಾಕರ್

ಮಾಜಿ ಸಚಿವ ಡಿ.ಸುಧಾಕರ್

  • Share this:
ಚಿತ್ರದುರ್ಗ(ಏ.05): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎರಡು ಮೂರು ತಿಂಗಳಿಂದ ಚಿತ್ರದುರ್ಗ ರಾಜಕಾರಣಿ, ಮಾಜಿ ಸಚಿವ ಅಂತ ಹೆಸರು ಬರುತ್ತಿತ್ತು. ಆ ರೀತಿ ಭಯ ಇದ್ದರೆ ನಾನು ಕೋರ್ಟ್ ನಲ್ಲಿ ಇಂಜೆಕ್ಷನ್ ಆರ್ಡರ್ ತರುತ್ತಿದ್ದೆ. ಮಾಜಿ ಸಚಿವ ಆಗಿದ್ದೇನೆ, ನನಗೆ ಸಾವಿರಾರು ಫೋನ್ ಗಳು ಬರುತ್ತವೆ. ಹಾಗೆ ನಾನು ಮಾತನಾಡಿರಬಹುದು, ಇಲ್ಲ ಎಂದು ಹೇಳುವುದಿಲ್ಲ. ಆದರೆ ಯಾರು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ, ಯಾವುದೇ ಹಣದ ವ್ಯವಹಾರ ಇಲ್ಲ, ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೂ ಅತೀರೇಕಕ್ಕೆ  ಹೋಗಬಾರದು ಎಂದು ಚಳ್ಳಕೆರೆಯಲ್ಲಿ ಮಾಜಿ ಸಚಿವ, ಹಿರಿಯೂರು ಮಾಜಿ ಶಾಸಕ, ಡಿ ಸುಧಾಕರ್ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಜೊತೆ ನನಗೆ ಯಾವುದೇ ಹಣದ ವ್ಯವಹಾರ ಇಲ್ಲ, ಯಾವುದೇ ಹಣವನ್ನು ನಾನು ಯಾರಿಗೂ ಕೊಟ್ಟಿಲ್ಲ. ಈ ವಿಚಾರವಾಗಿ ಎಸ್​ಐಟಿ ನನಗೆ ಯಾವುದೇ ಕರೆಯನ್ನ ಮಾಡಿಲ್ಲ, ಈ ಕೇಸ್ ಗೂ ನನಗೂ ಸಂಬಂಧವಿಲ್ಲ ಎಂದಿರುವ ಡಿ.ಸುಧಾಕರ್, ಈ ವಿಚಾರದಲ್ಲಿ ತಪ್ಪು  ಸಂದೇಶ ಹೋಗಬಾರದು ಎಂದು ಹೇಳಿದ್ದಾರೆ.

Sam Bahadur: ಸ್ಯಾಮ್ ಬಹದ್ದೂರ್ ಟೈಟಲ್ ಫೈನಲ್; ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಬಯೋಪಿಕ್

ಇನ್ನೂ ಈ ಪ್ರಕರಣದಲ್ಲಿ 2-3 ತಿಂಗಳಿಂದ ಚಿತ್ರದುರ್ಗ ರಾಜಕಾರಣಿ ಮಾಜಿ ಸಚಿವ ಅಂತ ಹೆಸರು ಕೇಳಿ ಬರುತ್ತಿತ್ತು. ಆ ರೀತಿ ಭಯ ನನಗೆ ಇದ್ದಿದ್ದರೆ ನಾನು ಕೋರ್ಟ್ ನಲ್ಲಿ ಇಂಜೆಕ್ಷನ್ ಆರ್ಡರ್ ತರುತ್ತಿದ್ದೆ. ಆ ರೀತಿ ಇಲ್ಲ, ಮಾಜಿ ಸಚಿವ ಆಗಿದ್ದೇನೆ. ಸಾವಿರಾರು ಜನರ ಫೋನ್ ಗಳು ಬರುತ್ತವೆ, ಹಾಗೆ ನಾನು ಮಾತನಾಡಿರಬಹುದು ಇಲ್ಲ ಎಂದು ಹೇಳುವುದಿಲ್ಲ.ಯಾರು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ, ಯಾವುದೇ ಹಣದ ವ್ಯವಹಾರ ಇಲ್ಲ, ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೂ ಅತೀರೇಕಕ್ಕೆ  ಹೋಗಬಾರದು ಎಂದು ಹೇಳಿದ್ದಾರೆ.

ಅಲ್ಲದೇ ಈ ವಿಚಾರವಾಗಿ ಎಸ್​ಐಟಿ ಬಗ್ಗೆ ಹೇಳುತ್ತಾ ಹೋದರೆ ಕಾನ್ಪೇಟ್ ಆಗುತ್ತದೆ. ಎಸ್​ಐಟಿ ವಿಚಾರಣೆಗೆ ಕರೆದರೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.   ಆಗಸ್ಟ್ ನಲ್ಲಿ ಯುವತಿಯ  ಸಂಪರ್ಕ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಈಗ ಎಂಟು ತಿಂಗಳಾಗಿದೆ. ನೂರಾರು ಫೋನ್ ಬರುತ್ತದೆ. ಇದು ನನಗೆ ಸಂಬಂಧವಿಲ್ಲದ ವಿಚಾರ,ಒಂದು ರೂಪಾಯಿ ಕೂಡಾ ನಾನು ಹಾಕಿಲ್ಲ ಎಂದರು.

ಇನ್ನೂ ಡಿಕೆ ಶಿವಕುಮಾರ್ ಅವರಿಗೂ ನಾನು ಆಪ್ತ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ನಾನು ಆಪ್ತ, ಯಾರು ನನಗೆ ಬ್ಲಾಕ್ ಮೇಲ್ ಮಾಡಿಲ್ಲ, ಇದೆಲ್ಲಾ ಸುಳ್ಳು. ದಿನಕ್ಕೆ ಸಾವಿರ ಕಾಲ್ ಬರುತ್ತದೆ, ಯಾರನ್ನ ನೆನಪಿಟ್ಟುಕೊಳ್ಳಬೇಕು. ನೂರಕ್ಕೆ ನೂರು ಎಸ್​ಐಟಿ ಕರೆದರೆ ತನಿಖೆಗೆ ಹೋಗುತ್ತೇನೆ. ನರೇಶ್ ಸೇರಿ ಯಾರು ಕೂಡಾ ಭೇಟಿ ಆಗಿಲ್ಲ,ಇದು ಎಲೆಕ್ಟ್ರಾನಿಕ್ ಯುಗ ಎಲ್ಲವೂ ಗೊತ್ತಾಗುತ್ತದೆ. 1995 ರಿಂದ ಡಿಕೆಶಿಗೆ ಪರಿಚಯ, ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಪರಿಚಯ ಎಂದಿದ್ದಾರೆ.
Published by:Latha CG
First published: