ದೇವೇಗೌಡರ ಕುಟುಂಬಕ್ಕೆ ವಾರ್ನಿಂಗ್​​ ನೀಡಿದ ಬಿಜೆಪಿ ಶಾಸಕ ನಾರಾಯಣಗೌಡರಿಗೆ ಸಿ.ಎಸ್​​ ಪುಟ್ಟರಾಜು ವಾರ್ನಿಂಗ್​​​

ಜತೆಗೆ ಚುನಾವಣಾ ಸಂದರ್ಭದಲ್ಲಿ ನಡೆದ ಹೊಡೆದಾಟ ಬಿಟ್ಟುಬಿಡಿ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದೀರಿ. ನನಗೂ ಚೆಪ್ಪಲು ತೂರಾಟ ಮಾಡಿದ್ದೀರಿ. ಇದೆಲ್ಲಾ ಆದರೂ ಸಾಕಾಗೋದಿಲ್ವಾ ಎಂದು ಜೆಡಿಎಸ್‌ ಮುಖಂಡರನ್ನು ಕೆ.ಸಿ ನಾರಾಯಣ ಗೌಡ ಪ್ರಶ್ನಿಸಿದ್ದರು.

news18-kannada
Updated:December 15, 2019, 7:26 PM IST
ದೇವೇಗೌಡರ ಕುಟುಂಬಕ್ಕೆ ವಾರ್ನಿಂಗ್​​ ನೀಡಿದ ಬಿಜೆಪಿ ಶಾಸಕ ನಾರಾಯಣಗೌಡರಿಗೆ ಸಿ.ಎಸ್​​ ಪುಟ್ಟರಾಜು ವಾರ್ನಿಂಗ್​​​
ಸಿಎಸ್​ ಪುಟ್ಟರಾಜು
  • Share this:
ಬೆಂಗಳೂರು(ಡಿ.15): ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್​​​.ಡಿ ದೇವೇಗೌಡರ ಕುಟುಂಬಕ್ಕೆ ವಾರ್ನಿಂಗ್​​ ನೀಡಿದ್ದ ಮಂಡ್ಯದ ಕೆ.ಆರ್​​​​ ಪೇಟೆ ಬಿಜೆಪಿ ಶಾಸಕ ಕೆ.ಸಿ ನಾರಾಯಣಗೌಡ ವಿರುದ್ಧ ಮಾಜಿ ಸಚಿವ ಸಿ.ಎಸ್​​ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಮಾತಾಡಿದ ಸಿ.ಎಸ್​​ ಪುಟ್ಟರಾಜು, ಎಚ್​​​.ಡಿ ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದ ಎಷ್ಟೋ ಜನ ಮಣ್ಣಾಗಿ ಹೋಗಿದ್ದಾರೆ. ಹಾಗಾಗಿ ಏನೇ ಮಾತಾಡುವ ಮುನ್ನ ಶಾಸಕ ಕೆ.ಸಿ ನಾರಾಯಣಗೌಡ ಯೋಚಿಸಿ ಮಾತಾಡಲಿ ಎಂದು ಕಿವಿಮಾತು ಹೇಳಿದ್ಧಾರೆ.

ಬಿಜೆಪಿ ಶಾಸಕ ಕೆ.ಸಿ ನಾರಾಯಣಗೌಡಗೆ ಎರಡು ಬಾರಿ ಭಿ ಪಾರಂ ಕೊಡಿಸಿದ್ದೇನೆ. ನಾನಿಲ್ಲದೆ ಹೋಗಿದ್ದರೆ ಭಿ ಪಾರಂ ಸಿಗುತ್ತಿರಲಿಲ್ಲ, ಅವನು ದೊಡ್ಡ ಉದ್ಯಮಿಯೂ ಆಗುತ್ತಿರಲಿಲ್ಲ. ನಾರಾಯಣಗೌಡ ನನ್ನ ಸಹಪಾಠಿ, ಅವನಿಗೂ ನನಗೂ ಯಾವುದೇ ಜಿದ್ದಿಲ್ಲ. ನಾನು ಸಚಿವನಾಗಿದ್ದಾಗಿ ಅವರ ಕ್ಷೇತ್ರಕ್ಕೆ ನೀಡಿದಷ್ಟು ಅನುದಾನ ಅವನು ಮಂತ್ರಿಯಾದಾಗ ನನ್ನ ಕ್ಷೇತ್ರಕ್ಕೆ ನೀಡಿದರೆ ಸಾಕು ಎಂದು ಏಕವಚನದಲ್ಲೇ ಸಿ.ಎಸ್​​ ಪುಟ್ಟರಾಜು ತಪರಾಕಿ ಬಾರಿಸಿದರು.

ಈ ಮುನ್ನ ಮಾತಾಡಿದ್ದ ಬಿಜೆಪಿ ಶಾಸಕ ಕೆ.ಸಿ ನಾರಾಯಣಗೌಡ ಮಾಜಿ ಸಚಿವ ಎಚ್‌.ಡಿ ರೇವಣ್ಣರಿಂದ ಪಾಠ ಕಲಿಯಬೇಕಾದ ಅಗತ್ಯ ನನಗಿಲ್ಲ ಎಂದಿದ್ದರು. ಹಾಗೆಯೇ ಜೆಡಿಎಸ್ ಪಕ್ಷದಲ್ಲಿದ್ದಾಗ ಎಚ್‌.ಡಿ ರೇವಣ್ಣ ನಮ್ಮ ಮುಖಂಡರಾಗಿದ್ದರು. ಆಗ ಅವರ ಮಾತು ಕೇಳಬೇಕಿತ್ತು. ಆದರೀಗ ಕಾಲ ಬದಲಾಗಿದೆ. ನನಗೆ ನನ್ನ ಪಕ್ಷದ ಹೈ ಕಮಾಂಡ್ ಇದೆ. ನನ್ನ ಹೈಕಮಾಂಡ್​ ಮಾತು ಕೇಳಬೇಕೇ ಹೊರತು ರೇವಣ್ಣರ ಪಾಠವಲ್ಲ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪೌರತ್ವ ಕಾಯ್ದೆ ವಿರುದ್ಧ ತೀವ್ರಗೊಂಡ ಪ್ರತಿಭಟನೆ: ಹಲವೆಡೆ ಹಿಂಸಾಚಾರ; ಇಂಟರ್​​ನೆಟ್​ ಸ್ಥಗಿತ

ಜತೆಗೆ ಚುನಾವಣಾ ಸಂದರ್ಭದಲ್ಲಿ ನಡೆದ ಹೊಡೆದಾಟ ಬಿಟ್ಟುಬಿಡಿ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದೀರಿ. ನನಗೂ ಚೆಪ್ಪಲು ತೂರಾಟ ಮಾಡಿದ್ದೀರಿ. ಇದೆಲ್ಲಾ ಆದರೂ ಸಾಕಾಗೋದಿಲ್ವಾ ಎಂದು ಜೆಡಿಎಸ್‌ ಮುಖಂಡರನ್ನು ಕೆ.ಸಿ ನಾರಾಯಣ ಗೌಡ ಪ್ರಶ್ನಿಸಿದ್ದರು.
Published by: Ganesh Nachikethu
First published: December 15, 2019, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading