ವಿಜಯಪುರ: ವಿಧಾನಸಭೆ ಚುನಾವಣೆ (Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ಗಾಗಿ ಫೈಟ್ ಶುರುವಾಗಿದೆ. ರಾಜ್ಯ ಬಿಜೆಪಿಯಲ್ಲಿಯೂ (Karnataka BJP) ಟಿಕೆಟ್ ಫೈಟ್ ಜೋರಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP National General Secretary CT ravi) ಯಾರ ಮನೆಯಲ್ಲಿಯೂ ಟಿಕೆಟ್ ಅಂತಿಮ ಆಗಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಮಾಜಿ ಸಿಎಂ ಯಡಿಯೂರಪ್ಪ (Former CM BS Yediyurappa) ಅವರಿಗೆ ಟಾಂಗ್ ನೀಡಿದ್ದರು. ಪಕ್ಷ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವರೆಗೂ ಯಾರೂ ಯಾರ ಹೆಸರನ್ನು ಘೋಷಿಸಬಾರದು ಎಂದು ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶವನ್ನು ರವಾನಿಸಿದೆ ಎನ್ನಲಾಗಿದೆ.
ಈ ಎಚ್ಚರಿಕೆ ನಡುವೆಯೂ ಸಚಿವ ಗೋವಿಂದ ಕಾರಜೋಳ (Minister Govind Karjol) ಭಿನ್ನಮತದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಸಚಿವರ ಹೇಳಿಕೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ (Former Minister Appasaheb Pattanashetty ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ವಿಜಯಪುರ ಕಮಲ ಅಂಗಳದಲ್ಲಿ ಭಿನ್ನಮತ
ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದ ಸಚಿವ ಗೋವಿಂದ ಕಾರಜೋಳ ವಿಜಯಪುರ ನಗರದ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಘೋಷಣೆ ಮಾಡಿದರು. ನಮ್ಮ ಪಕ್ಷದ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಗೋವಿಂದ ಕಾರಜೋಳ ಹೇಳಿಕೆ ಬೆನ್ನಲ್ಲೇ ವಿಜಯಪುರ ಕಮಲ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ.
ನೋವಾಗಿದೆ ಎಂದ ಪಟ್ಟಣಶೆಟ್ಟಿ
ಇನ್ನು ಕಾರಜೋಳ ಹೇಳಿಕೆಗೆ ವಿಜಯಪುರದ ಆಲಮಟ್ಟಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಅವರು ಯಾಕೆ ಹೀಗೆ ಹೇಳಿದ್ರು ಅಂತ ಗೊತ್ತಿಲ್ಲ. ಈ ಬಗ್ಗೆ ವರಿಷ್ಠರನ್ನು ಕೇಳಿದಾಗ ಯಾವುದೇ ಟಿಕೆಟ್ ಫೈನಲ್ ಆಗಿಲ್ಲ ಎಂದು ಹೇಳಿದರು. ಕಾರಜೋಳ ಅವರು ಹಿರಿಯರಾಗಿದ್ದು, ಯತ್ನಾಳ್ ಅವರೇ ಅಭ್ಯರ್ಥಿ ಎಂದು ಹೇಳಿದ್ದಕ್ಕೆ ವೈಯಕ್ತಿಕವಾಗಿ ನೋವು ಆಗಿದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.
ಕಾರಜೋಳ ಹೇಳಿಕೆಗೆ ಟಾಂಗ್
ಕಾರಜೋಳ ಅವರು ವಯಸ್ಸು ಮತ್ತು ರಾಜಕಾರಣದಲ್ಲಿ ನಮಗಿಂತ 10 ವರ್ಷ ಹಿರಿಯರು. ವಿಜಯಪುರ ನಗರ ಕ್ಷೇತ್ರಕ್ಕೆ ನಾನು ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರವನ್ನು ನನಗೆ ನೀಡಿ ಎಂದು ಕೇಳಿಕೊಂಡಿದ್ದೇನೆ. ಕಾರಜೋಳ ಹಿರಿಯರಾಗಿದ್ದು ನಮ್ಮಂತಹ ಸಣ್ಣವರನ್ನು ಸಹ ನೋಡಲಿ ಎಂದು ಟಾಂಗ್ ನೀಡಿದರು.
ಇನ್ನು ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೋವಿಂದ ಕಾರಜೋಳ, ಪಕ್ಷದ ಚುನಾವಣೆ ಕಮೀಟಿಯೇ ಟಿಕೆಟ್ ಫೈನಲ್ ಮಾಡುತ್ತದೆ. ಶೇ.99ರಷ್ಟು ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುತ್ತದೆ. ಅದೇ ರೀತಿ ನಾನು ಸಹ ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸಿ.ಟಿ.ರವಿಗೆ ಬಿಎಸ್ ಯಡಿಯೂರಪ್ಪ ತಿರುಗೇಟು
ವಿಜಯೇಂದ್ರ ಟಿಕೆಟ್ ಅವರ ಮನೆಯಲ್ಲಿ ಫಿಕ್ಸ್ ಆಗಲ್ಲ ಎಂದಿದ್ದ ಸಿ.ಟಿ ರವಿ ಹೇಳಿಕೆ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಹೌದು ಸಿ.ಟಿ. ರವಿ ಹೇಳಿದ್ದು ಸರಿ ಇದೆ. ಯಾರ ಟಿಕೆಟ್ ಕೂಡಾ ಅವರ ಮನೆಯಲ್ಲಿ ಡಿಸೈಡ್ ಆಗಲ್ಲ. ಚುನಾವಣಾ ಸಮಿತಿ ಟಿಕೆಟ್ ಬಗ್ಗೆ ಡಿಸೈಡ್ ಮಾಡುತ್ತೆ. ನಾವು ಸಲಹೆ ಕೊಡಬಹುದು ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: Basanagowda Patil Yatnal: ಪಾಕ್ನಲ್ಲಿರೋ ಹಿಂದೂಗಳನ್ನ ಭಾರತಕ್ಕೆ ಕರೆ ತನ್ನಿ: ಯತ್ನಾಳ್
ವಿಜಯೇಂದ್ರ ಪರೋಕ್ಷ ತಿರುಗೇಟು
ಕೊಪ್ಪಳದಲ್ಲಿ ಸಿ.ಟಿ ರವಿಗೆ ಬಿ.ವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯೊಕೆ ಸಾಧ್ಯ. ಬಿಎಸ್‌ವೈ ಎಷ್ಟು ಹಿರಿಯರಿದ್ದಾರೆ. ಬಿಜೆಪಿ ಕಟ್ಟಿದ್ದು ಬಿಎಸ್‌ವೈ ಅಂತ ಅವರಿಗೂ ಗೊತ್ತಿದೆ. ಈ ರೀತಿ ಹೇಳಿಕೆಗಳಿಗೆ ನಾನು ಉತ್ತರ ಕೊಡೋಡಲ್ಲ ಅಂತ ಪರೋಕ್ಷವಾಗಿ ಕಿಡಿಕಾರಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ