Anjana Murthy: ಮಾಜಿ ಸಚಿವ ಅಂಜನ ಮೂರ್ತಿ ಇನ್ನಿಲ್ಲ

ಅಂಜನಮೂರ್ತಿ, ಮಾಜಿ ಸಚಿವ

ಅಂಜನಮೂರ್ತಿ, ಮಾಜಿ ಸಚಿವ

ಅಂಜನ ಮೂರ್ತಿ  ಅವರು ವಸತಿ ಸಚಿವ, ಉಪ ಸಭಾಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು. 10ನೇ ಏಪ್ರಿಲ್ 1941ರಂದು ಜನಿಸಿದ್ದ ಅಂಜನಮೂರ್ತಿ ಅವರು ಮೂರು ಬಾರಿ ಶಾಸಕರಾಗಿ (MLA) ಆಯ್ಕೆಯಾಗಿದ್ದರು.

  • Share this:

ಬೆಂಗಳೂರು: ಮಾಜಿ ಸಚಿವ ಅಂಜನ ಮೂರ್ತಿ (Former Minister Anajanmurthy) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂಜನ ಮೂರ್ತಿ ಅವರಿಗೆ 72 ವರ್ಷ ಆಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ  ನೆಲಮಂಗಲ (Nelamangala, Bengaluru) ನಗರದ ಇಂದಿರಾನಗರದಲ್ಲಿ ಅಂಜನ ಮೂರ್ತಿ ಅವರು ವಾಸವಾಗಿದ್ದರು. ಇಂದು ಬೆಳಗ್ಗೆ ಹೃದಯಾಘಾತ (Heart Attack) ಆಗಿದೆ. ಎರಡು ದಿನಗಳ ಹಿಂದೆ ಅಂಜನಮೂರ್ತಿ ಅವರನ್ನು ಮಲ್ಲೇಶ್ವರಂ‌ನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಜನ ಮೂರ್ತಿ  ಅವರು ವಸತಿ ಸಚಿವ, ಉಪ ಸಭಾಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು. 10ನೇ ಏಪ್ರಿಲ್ 1941ರಂದು ಜನಿಸಿದ್ದ ಅಂಜನಮೂರ್ತಿ ಅವರು ಮೂರು ಬಾರಿ ಶಾಸಕರಾಗಿ (MLA) ಆಯ್ಕೆಯಾಗಿದ್ದರು.


1989-1994,  1999-2004,  2004-2007 ಮೂರು ಅವಧಿಗೆ ಅಂಜನ ಮೂರ್ತಿ ಅವರು ಶಾಸಕರಾಗಿದ್ದರು. ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ವಿಧಾನಸಬಾ ಉಪಸಭಾಪತಿ ಆಗಿ ಸೇವೆ ಸಲ್ಲಿಸಿದ್ದರು. 2003 ರಿಂದ 2004 ಎಸ್​​ಸಿ ಮತ್ತು ಎಸ್​ಟಿ ಆಯೋಗದ ಮುಖ್ಯಸ್ಥರಾಗಿದ್ದರು. 2005 ರಿಂದ 2006 ಅವಧಿಯಲ್ಲಿ ವಸತಿ ಸಚಿವರು ಆಗಿದ್ದರು.


ಹಲವು ವಿಭಾಗಗಳಲ್ಲಿ ಕೆಲಸ


2005 ರಿಂದ 06 ರವರೆಗೆ ಪ್ರಧಾನ ಕಾರ್ಯದರ್ಶಿ- ನೆಲಮಂಗಲ ತಾಲೂಕು ಯುವ ಕಾಂಗ್ರೆಸ್,  1972-76ಸದಸ್ಯರು-ತಾಲೂಕು ಅಭಿವೃದ್ಧಿ ಮಂಡಳಿ [ಟಿಡಿಬಿ), 1983-88 ಅಧ್ಯಕ್ಷರು, ವಕೀಲರ ವಕೀಲರ ಸಂಘ, ನೆಲಮಂಗಲ 1985-88 ಅಧ್ಯಕ್ಷರು, ಅರುಂಧತಿ ವಿದುವಾ ಸಂಸ್ಥೆ ನೆಲಮಂಗಲ,  ನೆಲಮಂಗಲ 1978-83 ಲ್ಯಾಂಡ್ ಟ್ರಿಬ್ಯೂನಲ್ ಸದಸ್ಯರಾಗಿದ್ದರು.




ನವದೆಹಲಿಯಲ್ಲಿ ನಡೆದ 89 ಅಂತರ ಸಂಸದೀಯ ಸಮ್ಮೇಳನದಲ್ಲಿ ಅಂಜನ ಮೂರ್ತಿ ಭಾಗವಹಿಸಿದ್ದರು.  1994ರಲ್ಲಿ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಪೀಠಾಧಿಪತಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: Karnataka Politics: ಬಾಬುರಾವ್ ಚಿಂಚನಸೂರ್ ಪಕ್ಷ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಬಿರುಗಾಳಿ!


ಪ್ರಶಸ್ತಿಗಳು


ಶಿರೋಮಣಿ ವಿಕಾಸ್ ಪ್ರಶಸ್ತಿ 93, ಮಾನವ ಸೇವಾ ಪುರಸ್ಕಾರ, ವಿಶೇಷ ಸ್ಕ್ರಾಲ್ ಆಫ್ ಆನರ್, ಇಂಟರ್‌ನ್ಯಾಶನಲ್‌ನಿಂದ ಎಕ್ಸಲೆನ್ಸ್-94 ಪ್ರಶಸ್ತಿಗೆ ಭಾಜನರಾಗಿದ್ದರು.

First published: