• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಥರ್ಡ್ ಕ್ಲಾಸ್ ಪದ ಬಳಕೆ ಹೆಚ್.ಡಿ. ರೇವಣ್ಣರಿಗೆ ಶೋಭೆ ತರುವುದಿಲ್ಲ: ಮಾಜಿ ಸಚಿವ ಎ ಮಂಜು

ಥರ್ಡ್ ಕ್ಲಾಸ್ ಪದ ಬಳಕೆ ಹೆಚ್.ಡಿ. ರೇವಣ್ಣರಿಗೆ ಶೋಭೆ ತರುವುದಿಲ್ಲ: ಮಾಜಿ ಸಚಿವ ಎ ಮಂಜು

ಮಾಜಿ ಸಚಿವ ಎ ಮಂಜು

ಮಾಜಿ ಸಚಿವ ಎ ಮಂಜು

ಹೆಚ್​ ಡಿ ರೇವಣ್ಣ ಮತ್ತು ಹೆಚ್ ಡಿ ದೇವೆಗೌಡರಿಗೆ ಗೌರವ ಮತ್ತು ಅಧಿಕಾರ ಸಿಕ್ಕಿದ್ದರೆ. ಅದು ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ. ಅವರಿಗೆ ಸ್ವತಂತ್ರವಾಗಿ ಯಾವಾಗಲು ಅಧಿಕಾರ ಪಡೆದಿಲ್ಲ ಎಂದು ತಿಳಿಸಿದರು.

  • Share this:

ಹಾಸನ(ಡಿಸೆಂಬರ್​.29): ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿಯನ್ನು ಥರ್ಡ್ ಕ್ಲಾಸ್ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎ ಮಂಜು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಜೊತೆ ಹೋಗುವುದಿಲ್ಲ ಎಂದವರು ಹಿಂದೆ ಮಂತ್ರಿಯಾಗಿ ಕೆಲಸ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ​ಹಾಸನದಲ್ಲಿ ಮಾತನಾಡಿದ ಅವರು, ಮಾಜಿ ಸಚಿವರ ಹೇಳಿಕೆಯನ್ನು ನಾನು ಗಮನಿಸಿದ್ದು, ಮಾಜಿ ಸಚಿವ ರೇವಣ್ಣನವರು ಮಾಜಿ ಮಂತ್ರಿಯಾಗಿದ್ದಾರೆ. ಆ ಪದ ಬಳಕೆ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಪತ್ರಿಕೆ ಮಾಧ್ಯಮಗಳಲ್ಲಿ ನಾವೆಂದು ಬಿಜೆಪಿ ಪಕ್ಷದ ಜೊತೆ ಹೊಗಲ್ಲ ಎನ್ನುತ್ತಾರೆ. ಹೋಗುವುದು ಬಿಡುವುದು ಆ ಪಕ್ಷಕ್ಕೆ ಬಿಟ್ಟ ವಿಷಯ. ಬಿಜೆಪಿಗೆ ಹೊಗಲ್ಲ ಅನ್ನುವರು ತಮ್ಮ ಹಿಂದಿನ ರಾಜಕೀಯ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. 


ಈ ಹಿಂದೆ ಬಿಜೆಪಿ ಸರ್ಕಾರದ ಜೊತೆ ಮಂತ್ರಿಯಾಗಿ ಕೆಲಸ ಮಾಡಿದವರಿಗೆ ನಾಚಿಕೆಯಾಗಲ್ವ ಎಂದು ಜರಿದರು. ರಾಜಕೀಯದಲ್ಲಿ ಶತ್ರುಗಳು ಇಲ್ಲ ಮಿತ್ರರು ಇಲ್ಲ. ನಾನು ಮುಖ್ಯಮಂತ್ರಿಗಳ ಮನೆಗೆ ಹೊಗಿದ್ದು, ಅಭಿವೃದ್ಧಿಗೊಸ್ಕರ ಎಂದಿದ್ದು, ಅವರು ಬರಿ ಹೊಳೆನರಸೀಪುರ ಕ್ಷೇತ್ರಕ್ಕೆ ಶಾಸಕ ಅಂದುಕೊಂಡಿದ್ದಾರೆ. ಶಾಸಕರು ರಾಜ್ಯದ ಪ್ರತಿನಿಧಿ ಎನ್ನುವ ವಿಚಾರ ರೇವಣ್ಣನವರಿಗೆ ಇದು ಗೊತ್ತಿಲ್ಲ. ರಾಜ್ಯದ ಆಗುಹೋಗುಗಳ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಎಲ್ಲಾ ಶಾಸಕರಿಗಿದೆ. ಅದರೆ ಇವರು ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರ ಸಿಮಿತರಾಗಿದ್ದಾರೆ ಎಂದರು.


​ಬಿಜೆಪಿ ಜೊತೆ ಜೆಡಿಎಸ್ ವಿಲಿನವಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಹಿಂದೆ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿದ್ದರು. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ತಕ್ಷಣ ಅವರ ಬಳಿ ಅಪ್ಪ ಮತ್ತು ಮಕ್ಕಳು ಪಂಚೆ ಬಿಟ್ಟು ಪ್ಯಾಂಟ್ ದರಿಸಿ, ಕೈ ಕಟ್ಟೆ ದರಸಿ ಪೋಟೊ ತೆಗೆಸಿಕೊಂಡಿದ್ದಾರೆ. ರೇವಣ್ಣ ಮತ್ತು ದೇವೆಗೌಡರಿಗೆ ಗೌರವ ಮತ್ತು ಅಧಿಕಾರ ಸಿಕ್ಕಿದ್ದರೆ. ಅದು ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ. ಅವರಿಗೆ ಸ್ವತಂತ್ರವಾಗಿ ಯಾವಾಗಲು ಅಧಿಕಾರ ಪಡೆದಿಲ್ಲ ಎಂದು ತಿಳಿಸಿದರು.


ಹಿಂದೆ ಜನತಾ ಪರಿವಾರದ ಸರ್ಕಾರದಲ್ಲಿ ಬಿಜೆಪಿ ಪಕ್ಚದ ಬೆಂಬಲವಿತ್ತು. ಅದು ರಾಮಕೃಷ್ಣ ಹೆಗಡೆ, ರಾಚಯ್ಯನವರ ಶ್ರಮವಿತ್ತು. ಆದಾದ ನಂತರ ಜೆಡಿಎಸ್ ಪಕ್ಷ 6 ಮತ್ತು 18 ಸ್ಥಾನಗಳನ್ನು ಪಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾಗಿದ್ದಾಗ ಮಾತ್ರ 58 ಸ್ಥಾನ ಜಯಗಳಿಸಿತ್ತು. ಸಿದ್ದರಾಮಯ್ಯರವರು ಹೋದ ನಂತರ ಎಷ್ಟು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ? ದೇವೆಗೌಡರು ಪ್ರಧಾನಿಯಾಗಿದ್ದು ಕಾಂಗ್ರೆಸ್ ಪಕ್ಷದ ಸಹಕಾರದಿಂದ ಮಾತ್ರ. ಎಂದರು.


ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಬಿಜೆಪಿ ಪಕ್ಷದ ಸಹಕಾರದಿಂದ, ಹೆಚ್.ಡಿ. ರೇವಣ್ಣನವರು ಮಂತ್ರಿಯಾಗಿದ್ದು ಎರಡು ಪಕ್ಷಗಳ ಸಹಕಾರದಿಂದ. ಇವರು ಹೊಂದಾಣಿಕೆ ರಾಜಕೀಯ ಮಾಡಿ ಅಧಿಕಾರ ಪಡೆದಿದ್ದಾರೆ. 131 ಸೀಟ್ ಗೆದ್ದು ಅಧಿಕಾರ ಹೊಂದಿಲ್ಲ. ನಾವು ಬಿಜೆಪಿ ಸೇರಿ ಎಂದು ಕರೆದಿಲ್ಲ. ಕುಮಾರಸ್ವಾಮಿ​ ಬಿಜೆಪಿ ಪಕ್ಷದ ಬಗ್ಗೆ ಮೃದು ಧೋರಣೆ ಅದು ಅವರ ವೈಯಕ್ತಿಕ ವಿಚಾರ. ಮಾಜಿ ಪ್ರಧಾನಿ ದೇವೆಗೌಡರು ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶ ಬಿಡುತ್ತೇನೆಂದು ಹೇಳಿದರು. ಇನ್ನೂ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರು.


ಇದನ್ನೂ ಓದಿ : ಹುಟ್ಟು ಹಬ್ಬದ ದಿನದಂದೇ ದೇಹದಾನ ; ಅರುಣ ಕುಲಕರ್ಣಿ ದಂಪತಿಗಳ ಕಾರ್ಯಕ್ಕೆ ಮೆಚ್ಚುಗೆ


ರೇವಣ್ಣನವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ವಿಲಿನವಾಗುವುದರ ಬಗ್ಗೆ ನಮ್ಮದೇನು ತಕರಾರು ಇಲ. ವಿಲಿನ ನೆಪದಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಜಿಲ್ಲೆಯ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತು ಕೇಳದಿದ್ದರೆ ಅವರ ವಿರುದ್ಧ ಮಾತನಾಡಿ, ಅಧಿಕಾರಿಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳು ಕೆಲಸ ಮಾಡಲು ಆಂತಕವನ್ನುಂಟು ಮಾಡಿದ್ದಾರೆ.


ರಾಜಕಾರಣ ಯಾರಿಗೂ ಶಾಶ್ವತವಲ್ಲ. ಅಧಿಕಾರಿಗಳು ಮತ್ತು ಶಾಸಕರಿಗೆ ರೇವಣ್ಣ ಗೌರವ ಕೊಡುವುದನ್ನು ಕಲಿಯಲಿ. ಶಾಸಕರನ್ನು ಅವನು ಇವನು ಎಂದು ಕರೆದರೆ ಅವರಿಗೆ ತಿರುಗು ಬಾಣವಾಗುತ್ತದೆ ಎಂದು ಎಚ್ಚರಿಸಿದರು.

Published by:G Hareeshkumar
First published: