T N Chaturvedi Passes Away: ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್​​ ಚತುರ್ವೇದಿ ನಿಧನ

Former Karnataka Governor T N Chaturvedi passes away: ಜನವರಿ 18, 1929ರಂದು ಜನಿಸಿದ ಟಿ.ಎನ್​​​ ಚತುರ್ವೇದಿ ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿ ಹೆಸರು ಕೇಳಿ ಬಂದಿತ್ತು.

news18-kannada
Updated:January 6, 2020, 11:20 AM IST
T N Chaturvedi Passes Away: ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್​​ ಚತುರ್ವೇದಿ ನಿಧನ
ಟಿ.ಎನ್​​​ ಚತುರ್ವೇದಿ ನಿಧನ
  • Share this:
ಬೆಂಗಳೂರು(ಜ.06): ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ(90) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಭಾನುವಾರ(ನಿನ್ನೆ) ರಾತ್ರಿ ಉತ್ತರಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು.

ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ತ್ರಿಲೋಕ ನಾಥ ಚತುರ್ವೇದಿ 1991ರಲ್ಲಿ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಆಗಸ್ಟ್ 2002-2007ವರೆಗೂ ರಾಜ್ಯಪಾಲರಾಗಿದ್ದರು.

ಜನವರಿ 18, 1929ರಂದು ಜನಿಸಿದ ಟಿ.ಎನ್​​​ ಚತುರ್ವೇದಿ ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿ ಹೆಸರು ಕೇಳಿ ಬಂದಿತ್ತು.

ಟಿ.ಎನ್​​​​ ಚತುರ್ವೇದಿ ನಿಧನಕ್ಕೆ ಗಣ್ಯರ ಸಂತಾಪ
ಇದನ್ನೂ ಓದಿ: JNU Violence: ‘ಅಭಿಪ್ರಾಯ ಭೇದದ ಮೇಲಿನ ದಾಳಿ; ಭಯದ ಪ್ರತಿಬಿಂಬ‘: ಪ್ರತಿಪಕ್ಷಗಳ ಆರೋಪ

 
Published by: Ganesh Nachikethu
First published: January 6, 2020, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading