ಜೆಡಿಎಸ್ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಪರಿಷತ್ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಮತದಾನ

ಪರಿಷತ್​ ಚುನಾವಣಾ ಮತದಾನದಿಂದ ಕಾಂಗ್ರೆಸ್​ - ಜೆಡಿಎಸ್​ ಪಕ್ಷಗಳು ಹಿಂದೆ ಸರಿಯುವ ನಿರ್ಧಾರ ತಳೆದಿತ್ತು. ಆದರೆ ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ಮಾತ್ರ ಮತದಾನ ಮಾಡುವ ಮೂಲಕ ಜೆಡಿಎಸ್​ ಜೊತೆಗಿರುವ ಬಿನ್ನಾಭಿಪ್ರಾಯವನ್ನು ಹೊರ ಚೆಲ್ಲಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ.

ಹೆಚ್​.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ.

  • Share this:
ಬೆಂಗಳೂರು(ಫೆ. 17): ವಿಧಾನ ಪರಿಷತ್​ ಚುನಾವಣಾ ಮತದಾನದಲ್ಲಿ ಭಾಗವಹಿಸುವುದು ಬೇಡ ಎಂದು ಕಾಂಗ್ರೆಸ್​ - ಜೆಡಿಎಸ್​ ಪಕ್ಷಗಳು ನಿರ್ಧರಿಸಿವೆ. ಪಕ್ಷದ ನಿರ್ಧಾರದ ಹೊರತಾಗಿಯೂ ಜೆಡಿಎಸ್​ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಪರಿಷತ್​ ಚುನಾವಣೆಯಲ್ಲಿ ಮತಚಲಾಯಿಸಿದ್ದಾರೆ. ಈ ಮೂಲಕ ಪಕ್ಷದ ಜೊತೆಗಿರುವ ವೈಮನಸ್ಸನ್ನು ಮತ್ತೆ ಹೊರಹಾಕಿದ್ದಾರೆ. 

ಅಧಿವೇಶನ ಹಿನ್ನೆಲೆ ಕರೆಯಲಾಗಿದ್ದ ಜೆಡಿಎಸ್​ ಸಭೆಗೆ ಗೈರಾದ ಅವರು, ಪರಿಷತ್​ ಚುನಾವಣೆಯಲ್ಲಿ ಭಾಗಿಯಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು.

ಮೈತ್ರಿ ಸರ್ಕಾರ ಪತನವಾದಾಗಿನಿಂದಲೂ ಬಿಜೆಪಿ ನಾಯಕರ ಜೊತೆ ಮೃದು ಧೋರಣೆ ತಾಳುವ ಮೂಲಕ ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಜಿಟಿ ದೇವೇಗೌಡ ಅವರ ನಡೆ ಕುರಿತು ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ ಎಚ್​ ಡಿ ಕುಮಾರಸ್ವಾಮಿ, ಅವರು ಮತಚಲಾಯಿಸಿರುವುದು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ, ಜಿಟಿ ದೇವೇಗೌಡ ನಮ್ಮ ಪಕ್ಷದಲ್ಲಿಯೇ ಇದ್ದಾರಾ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾದ ಬಳಿಕ ಮಾತನಾಡಿದ ಅವರು, ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​ನವರು ಮತದಾನದಲ್ಲಿ ಭಾಗವಹಿಸಲ್ಲ ಎಂದಿದ್ದರು. ಅದು ಉಪಯೋಗಕ್ಕೆ ಬರಲ್ಲವೆಂದು ನಾವೂ ಭಾಗಿಯಾಗಿಲ್ಲ. ಜಿ.ಟಿ.ದೇವೇಗೌಡ ಮತದಾನ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಅವರು ಇಲ್ಲಿರುತ್ತಾರೋ, ಎಲ್ಲಿರುತ್ತಾರೋ ಗೊತ್ತಿಲ್ಲ. ಈ ಬಗ್ಗೆ ಕಾದು ನೋಡೋಣ ಎಂದರು.

ಇದನ್ನು ಓದಿ: ಜೆಡಿಎಸ್​ ಸಭೆಗೆ ಗೈರಾಗಿ, ಪರಿಷತ್​ ಚುನಾವಣೆಗೆ ಹಾಜರಾದ ಜಿಟಿ ದೇವೇಗೌಡ

ಇನ್ನು ಪರಿಷತ್​ ಚುನಾವಣೆಯಲ್ಲಿ ಮತದಾನದಲ್ಲಿ ಭಾಗಿವಹಿಸೋದು ಬೇಡ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ತಗೊಂಡಿದ್ದೇವೆ. ಶಾಸಕಾಂಗ ಪಕ್ಷಕ್ಕೆ ಅಗೌರವ ಕೊಟ್ಟಿರೋದು ಅವರಿಗೆ ಬಿಟ್ಟದ್ದು. ಜೆಡಿಎಸ್​ನಿಂದ ಯಾರೂ ಮತದಾನ ಮಾಡಿಲ್ಲ ಎಂದರು.

ಈ ಬಾರಿ  ಅಧಿವೇಶನದಲ್ಲಿ ಅನುದಾನ ಹಂಚಿಕೆ ತಾರತಮ್ಯ, ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರದ ವೈಫಲ್ಯ ಇವುಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸುತ್ತೇವೆ ಎಂದರು.

 
First published: