ಮಹದಾಯಿ ಯೋಜನೆಗೆ ಕೇಂದ್ರದ ತಡೆ ಆಘಾತಕಾರಿ; ಇದು ಬಿಜೆಪಿ ಸಂಸದರ ವೈಫಲ್ಯ: ಕೋನರೆಡ್ಡಿ

ನಿಮಗೆ ಮಾತನಾಡುವ ಧೈರ್ಯ ಇಲ್ಲದೇ ಇದ್ದರೆ ನಾವು ಪ್ರಧಾನಿಯವರ ಜತೆ ಮಾತನಾಡುತ್ತೇವೆ. ಹಾಗಾಗಿಯೇ ಮುಂದಿನ ಸೋಮವಾರ ಹುಬ್ಬಳ್ಳಿಯಲ್ಲಿ ಎಲ್ಲ ಹೋರಾಟಗಾರರು ಮತ್ತು ಸಂಘ ಸಂಸ್ಥೆಗಳ ಸಭೆ ಕರೆದಿದ್ದೇವೆ

news18-kannada
Updated:December 19, 2019, 6:23 PM IST
ಮಹದಾಯಿ ಯೋಜನೆಗೆ ಕೇಂದ್ರದ ತಡೆ ಆಘಾತಕಾರಿ; ಇದು ಬಿಜೆಪಿ ಸಂಸದರ ವೈಫಲ್ಯ: ಕೋನರೆಡ್ಡಿ
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ
  • Share this:
ಬೆಂಗಳೂರು(ಡಿ.19) : ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ಹಿಡಿದಿರೋದು ಆಘಾತ ತಂದಿದೆ. ನಮ್ಮ 25 ಸಂಸದರು ಪ್ರಧಾನಿಯವರಿಗೆ ಸರಿಯಾಗಿ ಮನವರಿಕೆ ಮಾಡಿಕೊಡದೇ ಇರುವುದು ಈ ಸಮಸ್ಯೆಗೆ ಕಾರಣ ಎಂದು ಮಾಜಿ ಶಾಸಕ ಎನ್​ ಎಚ್​​ ಕೋನರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ. ನಿಮಗೆ ಮಾತನಾಡುವ ಧೈರ್ಯ ಇಲ್ಲದೇ ಇದ್ದರೆ ನಾವು ಪ್ರಧಾನಿಯವರ ಜತೆ ಮಾತನಾಡುತ್ತೇವೆ. ಹಾಗಾಗಿಯೇ ಮುಂದಿನ ಸೋಮವಾರ ಹುಬ್ಬಳ್ಳಿಯಲ್ಲಿ ಎಲ್ಲ ಹೋರಾಟಗಾರರು ಮತ್ತು ಸಂಘ ಸಂಸ್ಥೆಗಳ ಸಭೆ ಕರೆದಿದ್ದೇವೆ ಎಂದರು.

ಇದನ್ನೂ ಓದಿ : ಎಂಟು ಬಾರಿ ಶಾಸಕನಾದ ನಾನು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ : ಶಾಸಕ ಉಮೇಶ್ ಕತ್ತಿ

ಹೋರಾಟ ಮುಂದುವರಿಸುವುದು ಅನಿವಾರ್ಯವಾಗುತ್ತದೆ. 25 ಸ್ಥಾನಗಳನ್ನು ಗೆದ್ದರೂ ಮುಖ್ಯಮಂತ್ರಿಯವರಿಗೆ ಪ್ರಧಾನಿ ಭೇಟಿಗೆ ಸಮಯ ಕೊಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಲಿಂಕ್ ಇಲ್ಲದಂತೆ ಆಗಿದೆ. ಗೋವಾ ಲಾಭಿಗೆ ಕೇಂದ್ರ ಸರ್ಕಾರವೂ ಮಣಿಯುವಂತೆ ಕಾಣಿಸುತ್ತಿದೆ. ಏಕಪಕ್ಷೀಯ ನಿರ್ಧಾರಗಳಾಗುತ್ತಿವೆ ಎಂದು ಹೇಳಿದರು.

ದರ ಹೆಚ್ಚಳದಿಂದ ರೈತರಿಗೆ ಲಾಭವಾಗುತ್ತಿಲ್ಲ

ಅತಿವೃಷ್ಟಿಯಿಂದ ಶೇಕಡಾ 60ರಷ್ಟು ಈರುಳ್ಳಿ ಬೆಳೆ ಕೊಳೆತು ಹೋಗಿದೆ. ಹಾಗಾಗಿಯೇ ಈರುಳ್ಳಿ ದರ ಹೆಚ್ಚಾಗಿದೆ. ದರ ಹೆಚ್ಚಳದಿಂದ ರೈತರಿಗೂ ಯಾವುದೇ ರೀತಿಯಲ್ಲಿ ಲಾಭವಾಗುತ್ತಿಲ್ಲ‌. ವಿದೇಶಗಳಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಜನ ಒಪ್ಪುತ್ತಿಲ್ಲ. ಮತ್ತೆ ರೈತರು ಹೆಚ್ಚು ಈರುಳ್ಳಿ ಬೆಳೆಯಬೇಕು. ಅದು ಬಿಟ್ಟು ಈ ಸಮಸ್ಯೆಗೆ ಬೇರೆ ಪರಿಹಾರವೇ ಇಲ್ಲ ಎಂದರು
First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ