ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್ ಮನೆಗೆ ಕನ್ನ ಹಾಕಿದ್ದ ಆರೋಪಿ ಪೊಲೀಸರ ವಶಕ್ಕೆ..!

ಗುಜರಾತ್ ಮೂಲದ ಮಂಗಲ್ ಭಾಯ್ 11 ವರ್ಷದಿಂದ ಬ್ರಿಜೇಶ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಮನೆಯವರ ನಂಬಿಕೆಗಳಿಸಿದ್ದ ಈತನನ್ನು ಮನೆ ಮಗನಂತೆ ನೋಡಿಕೊಂಡಿದ್ದರು.

news18
Updated:January 10, 2019, 5:30 PM IST
ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್ ಮನೆಗೆ ಕನ್ನ ಹಾಕಿದ್ದ ಆರೋಪಿ ಪೊಲೀಸರ ವಶಕ್ಕೆ..!
ಆರೋಪಿ ಮಂಗಲ್ ಭಾಯ್
news18
Updated: January 10, 2019, 5:30 PM IST
-ಕಿರಣ್ ಕೆ.ಎನ್​

ಬೆಂಗಳೂರು (ಜ. 10): ಕೆಎಸ್ ಸಿಎ ಕಾರ್ಯದರ್ಶಿ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ.ನಗರ ಪೊಲೀಸರು ಆರೋಪಿ ಮಂಗಲ್ ಭಾಯ್ ಎಂಬಾತನನ್ನು ಬಂಧಿಸಿದ್ದಾರೆ.

ಬ್ರಿಜೇಶ್ ಅವರ ಮನೆಕೆಲಸದವನಾಗಿದ್ದ ಮಂಗಲ್ ಭಾಯ್ ಠಾಕೂರ್​​ನಿಂದ 4.5 ಕೆ.ಜಿ‌ ಬೆಳ್ಳಿ ಹಾಗೂ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಪಿಂಟೋಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

ಕಳೆದ ಡಿಸೆಂಬರ್ 3 ರಂದು ತಮ್ಮ ಜಯಮಹಲ್​​​​ನಲ್ಲಿರುವ ಮನೆಯಲ್ಲಿ ಕಳ್ಳತನವಾಗಿತ್ತು ಎಂದು ಬ್ರಿಜೇಶ್ ಪಟೇಲ್ ಅವರು ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗುಜರಾತ್ ಮೂಲದ ಮಂಗಲ್ ಭಾಯ್ 11 ವರ್ಷದಿಂದ ಬ್ರಿಜೇಶ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಮನೆಯವರ ನಂಬಿಕೆ ಗಳಿಸಿದ್ದ ಈತನನ್ನು ಮನೆ ಮಗನಂತೆ ನೋಡಿಕೊಂಡಿದ್ದರು.

ಇದನ್ನೂ ಓದಿ: ಗೋಮಾಂಸಕ್ಕಾಗಿ ಹಸು ಕಳವು; ಚರ್ಮ ಬಿಟ್ಟು ಮಾಂಸ ಕೊಂಡೊಯ್ದ ದುಷ್ಕರ್ಮಿಗಳು

ರಜೆ ಮೇಲೆ ಊರಿಗೆ ಹೋಗುವೆ ಎಂದು ಹೇಳಿ ಮಂಗಲ್ ಭಾಯ್ ಇರಬರುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಬಳಿಕ ಅನುಮಾನಗೊಂಡ ಬ್ರಿಜೇಶ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು.
Loading...

ಆರೋಪಿ ಮಂಗಲ್ ಭಾಯ್ ಮನೆಯವರಿಗೆ ಗೊತ್ತಿಲ್ಲದಂತೆ ಎರಡು ವರ್ಷದಿಂದ ಚಿನ್ನಾಭರಣ ಬೆಳ್ಳಿ ಕದಿಯುತ್ತಿದ್ದ. ಅಲ್ಲದೆ ಬ್ರಿಜೇಶ್ ಪಟೇಲ್​ರಿಗೆ ಅತ್ಯಾಪ್ತರು ಉಡುಗೊರೆ ನೀಡಿದ್ದ ಬೆಳ್ಳಿ ಬಟ್ಟಲು ಕೂಡ ನಾಪತ್ತೆಯಾಗಿತ್ತು.

ಇನ್ನು ಮನೆಯಲ್ಲಿ ಪರಿಶೀಲಿಸಿದಾಗ 20 ಲಕ್ಷದ ಬೆಳ್ಳಿ ವಸ್ತುಗಳು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಡೈಮಂಡ್ , 1500 ಅಮೇರಿಕನ್ ಡಾಲರ್ , 2 ಲಕ್ಷದ ಹ್ಯಾಂಡ್ ಬ್ಯಾಗ್ ಕೂಡ ನಾಪತ್ತೆಯಾಗಿತ್ತು. ಸದ್ಯ ಪೊಲೀಸರು ಆರೋಪಿಯ ಕಾಲ್ ಡಿಟೈಲ್ಸ್ ಆಧರಿಸಿ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ