ಕೋಲಾರ: ಜಿಲ್ಲೆಯ ಬಂಗಾರಪೇಟೆ (Bangarapete) ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ ಚಾಕು ಇರಿತಕ್ಕೆ ಒಳಗಾಗಿ, ಆಸ್ಪತ್ರೆಗೆ (Hospital) ಸಾಗಿಸುವ ಮಾರ್ಗ ಮಧ್ಯೆ ಗ್ರಾಮ ಪಂಚಾಯತ್ (Grama Panchayat) ಮಾಜಿ ಸದಸ್ಯರೊಬ್ಬರು (Former Member) ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಕೃಷ್ಣಪ್ಪ ಗೌಡ ಎನ್ನುವವರೇ ಮೃತ ವ್ಯಕ್ತಿ. ಗ್ರಾಮದಲ್ಲಿಯೇ ಇರುವ ಬೋಸ್ ಕೃಷ್ಣಪ್ಪ ಹಾಗು ಮೃತ ಕೃಷ್ಣಪ್ಪಗೌಡ ತಮ್ಮನಾದ ಮುನಿಯಪ್ಪ ಎನ್ನುವರ ಮಧ್ಯೆ ಜಮೀನು (Land) ವಿಚಾರವಾಗಿ, ತಕರಾರು (Dispute) ಇದ್ದು ನ್ಯಾಯಾಲಯದಲ್ಲಿ (Court) ವಿಚಾರಣೆ ನಡೆಯುತ್ತಿದೆ. ಮೊನ್ನೆ ಶುಕ್ರವಾರ ಇದೇ ವಿಚಾರವಾಗಿ ಬಂಗಾರಪೇಟೆ ಪಟ್ಟಣದಲ್ಲಿ ಮುನಿಯಪ್ಪ ಬೈಕ್ ಹಾಗು ಬೋಸ್ ಕೃಷ್ಣಪ್ಪ ಕಾರಿಗೆ ಅಚಾನಕ್ಕಾಗಿ ಡಿಕ್ಕಿ ಹೊಡೆದಿದ್ದಾರೆ, ಬಳಿಕ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳವಾಡಿದ್ದಾರೆ. ಈ ಜಗಳ ತಪ್ಪಿಸಲು ಬಂದಿದ್ದವರೇ ಈಗ ಹೆಣವಾಗಿದ್ದಾರೆ.
ಬುದ್ಧಿ ಹೇಳಿದವರನ್ನೇ ಕೊಂದ ಹಂತಕರು
ಮುನಿಯಪ್ಪನಿಗೆ ಒಂದು ಬಾರಿಸಿದ್ದ ಬೋಸ್ ಕೃಷ್ಣಪ್ಪ, ಅಷ್ಟಾದರು ನಿನ್ನ ಗ್ರಾಮದಲ್ಲಿಯೇ ಬಂದು ಹೊಡೀತಿನಿ ಎಂದು ಲ್ಯಾಂಡ್ ಬ್ರೋಕರ್ ಬೋಸ್ ಕೃಷ್ಣಪ್ಪ ವಾರ್ನಿಂಗ್ ಕೊಟ್ಟಿದ್ದಾರೆ, ಅದರಂತೆ ಇದೇ ಗ್ರಾಮದವರೇ ಆದ ವೆಂಕಟೇಶ್, ಪಾಣಿ @ ವೆಂಕಿ, ಹಾಗು ಇನ್ನು ಕೆಲವರ ಜೊತೆಗೂಡಿ ಬೋಸ್ ಕೃಷ್ಣಪ್ಪ ಮಚ್ಚು ಹಿಡಿದುಕೊಂಡು, ಮುನಿಯಪ್ಪರ ಮೇಲೆ ಗಲಾಟೆಗೆ ಬಂದಿದ್ದಾರೆ, ಮೊನ್ನೆ ಸಂಜೆ 8 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಮುನಿಯಪ್ಪ ಮೇಲೆ ಬೋಸ್ ಕೃಷ್ಣಪ್ಪನ ಪುಂಡರ ಗುಂಪು ಹಲ್ಲೆ ಮಾಡಲು ಪ್ರಯತ್ನ ಮಾಡಿದೆ.
ತಡೆಯಲು ಬಂದವರಿಗೂ ಬಿತ್ತು ಏಟು
ಇನ್ನು ಮುನಿಯಪ್ಪ ರ ಮೇಲೆ ಹಲ್ಲೆ ತಡೆಯಲು ಮತ್ತೊಬ್ಬ ಸಹೋದರ ಆನಂದ್ ಪ್ರಯತ್ನಿಸಿದಾಗ ಅವರಿಗು ಮಚ್ಚಿನ ಏಟು ಬಿದ್ದು ಮುಖದ ಮೇಲೆ ಗಾಯಗಳಾಗಿದೆ, ಊರಿನಲ್ಲೆ ನಿನ್ನ ಮೇಲೆ ಕಾರ್ ಹತ್ತಿಸಿ ಕೊಲೆ ಮಾಡೋದಾಗಿ ಮುನಿಯಪ್ಪ ರಿಗೆ, ಬೋಸ್ ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಕ್ಕೆ, ಅವನ ಬಲಗೈ ಬಂಟ ಮೊದಲ ಆರೋಪಿ ವೆಂಕಟೇಶ್ ತಮ್ಮ ಸ್ಕಾರ್ಪ್ಯೂ ಕಾರಲ್ಲಿ ಕೆಲವರನ್ನ ಕರೆತಂದಿದ್ದಾನೆ.
ಇದನ್ನೂ ಓದಿ: Mysore Student Death: ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು.. ಹಾಸ್ಟೆಲ್ನಲ್ಲಿ ನಿಜಕ್ಕೂ ಆಗಿದ್ದೇನು?
ಚಾಕುವಿನಿಂದ ಇರಿದು ಕೊಂದ ಹಂತಕರು
ಗಲಾಟೆ ಬಿಡಿಸಲು ಆಗಮಿಸಿದ ಕೃಷ್ಣಪ್ಪಗೌಡ, ಯಾಕ್ರಪ್ಪ ಸುಮ್ನೆ ಗಲಾಟೆ ಮಾಡ್ಕೊತೀರಾ ಎಂದು ಬುದ್ದಿಮಾತು ಹೇಳಿದ್ದಾರೆ, ಗಲಾಟೆ ಮಾಡಿಸೊಕೆ ಕಾರಲ್ಲಿ ಜನರನ್ನ ಕರೆತಂದಿದ್ದೀಯ ಎಂದು ಬೋಸ್ ಕೃಷ್ಣಪ್ಪನಿಗೆ ಬೈದ ಮೃತ ಕೃಷ್ಣಪ್ಪಗೌಢ, ವೆಂಕಟೇಶ್ ಇದ್ದ ಕಾರಲ್ಲಿ ಯಾರಿದ್ದಾರೆ ಎಂದು ಬಗ್ಗಿ ನೋಡಿದ್ದಾರೆ, ಇದೇ ವೇಳೆ ಕೈಯಲ್ಲಿ ಚಾಕು ಇಟ್ಟುಕೊಂಡಿದ್ದ ವೆಂಕಟೇಶ್. ಕತ್ತಿನ ಬಾಗಕ್ಕೆ ಇರಿದಿದ್ದಾನೆ.
ಕೂಡಲೇ ಕೃಷ್ಣಪ್ಪಗೌಢ ರನ್ನ ಕೋಲಾರದ ಆರ್,ಎಲ್ ಜಾಲಪ್ಪ ಆಸ್ಪತ್ರೆಗೆ ಅಣ್ಣ ರಾಮಚಂದ್ರ ತಮ್ಮ ಕಾರಲ್ಲಿಯೇ ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ, ಜಾಲಪ್ಪ ಆಸ್ಪತ್ರೆಯ ಶವಾಗಾರದಲ್ಲೆ ಮರಣೋತ್ತರ ಪರೀಕ್ಷೆ ನಡೆದಿದ್ದು, ಹುಟ್ಟೂರು ತಮ್ಮೇನಹಳ್ಲಿ ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿದೆ,
ಗ್ರಾಮದಲ್ಲಿ ಹೆಚ್ಚಾಯ್ತು ರೌಡಿಸಂ
ಆರೋಪಿಗಳಾದ ವೆಂಕಟೇಶ್, ಬೋಸ್ ಕೃಷ್ಣಪ್ಪ ಹಾಗು ಪಾಣ ಅಲಿಯಾಸ್ ವೆಂಕಿ ಹಾಗು ಮತ್ತೊಬ್ಬ ವ್ಯಕ್ತಿ, ಇವರದ್ದು ಒಂದು ಗುಂಪಿದೆಯಂತೆ, ಸುಖಾ ಸುಮ್ಮನೆ ಜಮೀನುಗಳ ಮೇಲೆ ಕೇಸ್ ಹಾಕೋದು, ಮತ್ತೊಬ್ಬರಿಗೆ ತಲೆನೋವು ಕೊಡೊದೆ ಇವರ ಕಾಯಕ ಎಂಬುದು ಗ್ರಾಮಸ್ತರ ಮಾತಾಗಿದೆ, ಕೊಲೆಯ ಮೊದಲ ಆರೋಪಿ ವೆಂಕಟೇಶ್ ಸಹ ಪುಂಡನೆಂದು ಎಂದು ಕರೆಸಿಕೊಂಡಿದ್ದ.
ಇದನ್ನೂ ಓದಿ: Mandya Murder: ಅಯ್ಯೋ ಪಾಪಿಗಳ.. ಆಸ್ತಿ, ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ ಮಕ್ಕಳು..!
ಆರೋಪಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ
ಈ ಹಿಂದೆ ಗ್ರಾಮದ ಮಹಿಳೆಯೊಬ್ಬರ ಜೊತೆಗೆ ಗಲಾಟೆ ಮಾಡಿದ್ದು ಅಲ್ಲದೆ, ಮಚ್ಚಿನಿಂದ ಕುತ್ತಿಗೆಗೆ ಹೊಡಿದು ಆಪ್ ಮರ್ಡರ್ ಕೇಸಲ್ಲಿ, ಬಂಗಾರಪೇಟೆ ಪೊಲೀಸರು ಬಂದಿಸಿ, ಜೈಲಿಗೆ ಕಳಿಸಿದ್ದರು, ಇನ್ನೂ ಆ ಕೇಸ್ ವಿಚಾರಣೆಯಲ್ಲಿ ಇರೊವಾಗಲೇ ವೆಂಕಟೇಶ್ ಮತ್ತೊಮ್ಮೆ ಕೊಲೆ ಮಾಡಿದ್ದು, ಪೊಲೀಸರು ಇಂತಹ ಕಟುಕರಿಗೆ ತಕ್ಕಾ ಪಾಠ ಕಲಿಸಬೇಕಿದೆ ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ