ಆನೇಕಲ್​​ನಲ್ಲಿ ಸಿನಿಮೀಯ ರೀತಿಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಕೊಲೆ

ರಸ್ತೆಯ ಪುಟ್​​ಬಾತ್ನಲ್ಲಿ ಬಿದ್ದಿರುವ ಬೈಕ್​​. ಗೋಡೆಯ ಮೇಲೆ ಬಿದ್ದಿರುವ ರಕ್ತದ ಕಲೆಗಳು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿ, ಆತಂಕದಿಂದ ನೋಡುತ್ತಿರುವ ಅಲ್ಲಿನ ಜನರು, ಸ್ಥಳವನ್ನು ಪರಿಶೀಲಿಸುತ್ತಿರುವ ಡಾಗ್ ಸ್ಕ್ವಾಡ್. ಹುಡುಕಾಟ ನಡೆಸುತ್ತಿರುವ ಪೊಲೀಸರು. ಇದನ್ನೆಲ್ಲ ನೋಡುತ್ತಿದ್ದರೆ ಏನೋ ಒಂದು ನಡೆಯಬಾರದ ಘಟನೆ ನಡೆದು ಹೋಗಿದೆ ಅನ್ಸುತ್ತೆ, ಇಲ್ಲಿ ಹಾಗಿದ್ದೂ ಕೂಡ ಅದೇ.

news18-kannada
Updated:February 14, 2020, 10:10 PM IST
ಆನೇಕಲ್​​ನಲ್ಲಿ ಸಿನಿಮೀಯ ರೀತಿಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಕೊಲೆ
ಪ್ರಾತಿನಿಧಿಕ ಚಿತ್ರ
  • Share this:
ಆನೇಕಲ್(ಫೆ.14): ಆತ ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಜೊತೆಗೆ ಕುಡಿತ ಹಾಗೂ ಶೋಕಿಯ ಚಟ ಇತ್ತು. ಆದರೆ ಅಂಥ ವ್ಯಕ್ತಿಯನ್ನು ಕಳೆದ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಭೀಕರತೆಗೆ ಇಡೀ ಊರೇ ಬೆಚ್ಚಿ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿ ಒಮ್ಮೆ ಓದಿ.

ರಸ್ತೆಯ ಪುಟ್​​ಬಾತ್ನಲ್ಲಿ ಬಿದ್ದಿರುವ ಬೈಕ್​​. ಗೋಡೆಯ ಮೇಲೆ ಬಿದ್ದಿರುವ ರಕ್ತದ ಕಲೆಗಳು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿ, ಆತಂಕದಿಂದ ನೋಡುತ್ತಿರುವ ಅಲ್ಲಿನ ಜನರು, ಸ್ಥಳವನ್ನು ಪರಿಶೀಲಿಸುತ್ತಿರುವ ಡಾಗ್ ಸ್ಕ್ವಾಡ್. ಹುಡುಕಾಟ ನಡೆಸುತ್ತಿರುವ ಪೊಲೀಸರು. ಇದನ್ನೆಲ್ಲ ನೋಡುತ್ತಿದ್ದರೆ ಏನೋ ಒಂದು ನಡೆಯಬಾರದ ಘಟನೆ ನಡೆದು ಹೋಗಿದೆ ಅನ್ಸುತ್ತೆ, ಇಲ್ಲಿ ಹಾಗಿದ್ದೂ ಕೂಡ ಅದೇ.

ಕಳೆದ ರಾತ್ರಿ ದುಷ್ಕರ್ಮಿಗಳು ಮನಸೋ ಇಚ್ಛೆ ಮನಬಂದಂತೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಇದರಿಂದಾಗಿ ಇಡೀ ಏರಿಯಾದ ಜನ ಬೆಚ್ಚಿಬಿದ್ದಿದ್ದಾರೆ. ಅಂದ್ಹಾಗೆ ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿಯ ಹೆಸರು ರವಿ ಅಂತ ಮೂಲತಃ ಆನೇಕಲ್ ತಾಲೂಕಿನ ಮರಸೂರು ಮಡಿವಾಳದ ನಿವಾಸಿ. ಈತನಿಗೆ ಮದುವೆಯಾಗಿ ಎರಡು‌ ಮಕ್ಕಳು ಸಹ ಇದ್ದರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪನವರ ಮಗ.

ಹೌದು ಕಳೆದ ಎರಡು ಮೂರು ದಿನಗಳಿಂದ ಮನೆಗೆ ಹೋಗದೆ ಇದ್ನಂತೆ. ಕುಟುಂಬದವರು ಕೂಡ ಮನೆಗೆ ಬರದೇ ಇದ್ದಾಗ ಸಂಬಂಧಿಕರ ಮನೆಯಲ್ಲಿ ಇರಬಹುದು ಅಂತ ತಿಳಿದು ಸುಮ್ಮನಾಗಿ ಬಿಟ್ಟಿದ್ದಾರೆ. ಆದರೆ ಇಂದು ಬೆಳಗ್ಗೆ ಬೀದಿ ಹೆಣವಾಗಿ ಪತ್ತೆಯಾಗಿದ್ದಾನೆ. ಕಳೆದ ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ಬಳಿ ಬರುವಾಗ ಹಂತಕರು ರವಿ ಮೇಲೆ ಗ್ಯಾಂಗ್ ಒಂದು ಅಟ್ಯಾಕ್ ಮಾಡಿದೆ. ಹಂತಕರಿಂದ ತಪ್ಪಿಸಿಕೊಳ್ಳಲು ಮನೆಯೊಂದರ ಬಳಿ ಓಡಿದ್ದಾನೆ. ಆದರೆ, ಹಿಂಬದಿಯಿಂದ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದ ಪರಿಣಾಮ ಒಡಲು ಸಾಧ್ಯವಾಗದೆ, ಮನೆಯ ಮುಂದೆ ಬಿದ್ದು ಮೃತಪಟ್ಟಿದ್ದಾನೆ . ಆದರೆ ಮನೆಯ ಮಾಲೀಕರು ಬೆಳಗ್ಗೆ ಎದ್ದು ಹೊರಗಡೆ ಬರುವಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿತ್ತು ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿರುವುದಾಗಿ ಸ್ಥಳೀಯ ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಚಾಟಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ: ಮಧ್ಯರಾತ್ರಿ 12 ಗಂಟೆಯೊಳಗೆ ಬಾಕಿ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ನೋಟಿಸ್​​​​

ಇನ್ನು ಸ್ಥಳಕ್ಕೆ ಬಂದಿದ್ದ ಹೆಬ್ಬಗೋಡಿ ಪೊಲೀಸರು ಅಪಾರ್ಟ್ಮೆಂಟ್ ಸುತ್ತಮುತ್ತ ಇರುವ ಜಾಗದಲ್ಲಿ ಡಾಗ್‌ ಸ್ಕಾರ್ಡ್ ಪರಿಶೀಲನೆ ಮಾಡಿದರು.. ಇನ್ನು ಮೃತಪಟ್ಟಿರುವ ಜಾಗದ ಅಕ್ಕಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದು , ಇನ್ನು ಮೇಲ್ನೋಟಕ್ಕೆ ಮೃತಪಟ್ಟ ರವಿಗೆ ಸ್ವಲ್ಪ ಕುಡಿತದ ಚಟ ಇತ್ತು ಜತಗೆ ಅನೈತಿಕ ಸಂಬಂಧದ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಇದೇ ಊರಿನ ಬಾರ್ ಮಾಲೀಕನ ಕೈವಾಡವಿದೆ ಎಬ ಮಾತು ಕೇಳಿ ಬರುತ್ತಿದೆ. ಇನ್ನು ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.. ಇನ್ನು ಮೃತದೇಹವನ್ನು ಅತ್ತಿಬೆಲೆಯ ಆಕ್ಸ್‌ಫರ್ಡ್ ಕಾಲೇಜಿನ ಶವಾಗಾರಕ್ಕೆ ಪೊಲೀಸರು ಕೊಂಡೊಯ್ದರು ಎಂದು ಸ್ಥಳೀಯ ವಾಸಿ ಸಂತೋಷ್ ತಿಳಿಸಿದ್ದಾರೆ.

ಸದ್ಯ ಸ್ಥಳ ಪರಿಶೀಲನೆ ನಡೆಸಿರುವ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಅಯಾಮದಲ್ಲಿಯು ಶೋಧ ನಡೆಸುತ್ತಿದ್ದು, ಸ್ಥಳದಲ್ಲಿ ಸಿಕ್ಕಿರುವ ಬೈಕನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

(ವರದಿ : ಆದೂರು ಚಂದ್ರು)
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ