Muthappa Rai Death: ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ ಜಯರಾಜ್ ಮಗ ಅಜಿತ್

Muthappa Rai: ಮುತ್ತಪ್ಪ ರೈ ಸಾವಿನ ಕುರಿತು ಇಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅಜಿತ್ ಜಯರಾಜ್, “Sometimes the king has to remind the fools y he s King Love you appa” ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೈ ಸಾವನ್ನು ಸಂಭ್ರಮಿಸುತ್ತಿರುವ ಜಯರಾಜ್‌ ಬೆಂಬಲಿಗರು.

ಸಾಮಾಜಿಕ ಜಾಲತಾಣದಲ್ಲಿ ರೈ ಸಾವನ್ನು ಸಂಭ್ರಮಿಸುತ್ತಿರುವ ಜಯರಾಜ್‌ ಬೆಂಬಲಿಗರು.

  • Share this:
ಬೆಂಗಳೂರು (ಮೇ 15); ಬಹಳ ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಡಾನ್ ಮುತ್ತಪ್ಪ ರೈ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ, ಮುತ್ತಪ್ಪ ರೈ ಸಾವಿನ ಬೆನ್ನಿಗೆ ಜಯರಾಜ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದರೆ, ಜಯರಾಜ್ ಮಗ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ರೈ ಸಾವಿನ ಕುರಿತು ವ್ಯಂಗ್ಯ ಭರಿತ ಪೋಸ್ಟ್ ಹಾಕುವ ಮೂಲಕ ತನ್ನ ತಂದೆಯನ್ನು ನೆನೆದಿದ್ದಾರೆ.

ಮುತ್ತಪ್ಪ ರೈ ಸಾವಿನ ಕುರಿತು ಇಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅಜಿತ್ ಜಯರಾಜ್, “Sometimes the king has to remind the fools y he s King Love you appa” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಜಯರಾಜ್‌ನ ಬೆಂಬಲಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದಾರೆ.1989ರ ವಿಧಾನ ಸಭಾ ಚುನಾವಣೆಯಲ್ಲಿ ಅಂದಿನ ಬೆಂಗಳೂರು ಡಾನ್ ಜಯರಾಜ್ ಜಯನಗರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ, ಈ ಸಂದರ್ಭದಲ್ಲಿ ಮುತ್ತಪ್ಪ ರೈ ಹಾಗೂ ಅವರ 10 ಜನ ಸಹಚರರು ಡಾನ್ ಜಯರಾಜ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಜಯರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲಿಗೆ ಬೆಂಗಳೂರು ಭೂಗತ ಲೋಕದಲ್ಲಿ ಒಂದು ಅಧ್ಯಾಯ ಮುಗಿದು ಮುತ್ತಪ್ಪ ರೈ ಯುಗ ಆರಂಭವಾಗಿತ್ತು.

ಇದನ್ನೂ ಓದಿ : Muthappa Rai Death: ಡಾನ್ ಜಯರಾಜನ ಕೊಲೆಯಿಂದ ಮೋಹನ್‌ ಆಳ್ವಾ ಮರ್ಡರ್‌ ವರೆಗೆ ಮುತ್ತಪ್ಪ ರೈ ರಕ್ತಸಿಕ್ತ ಇತಿಹಾಸ!
First published: