ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಕಾರು ಅಪಘಾತವಾಗಿದೆ. ಕಾರು ಅಪಘಾತದಲ್ಲಿ (Car Accident) ಲಕ್ಷ್ಮಣ ಸವದಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ಇಲ್ಲಿನ ಜತ್ ಜಾಂಬೋಟಿ ಅಂತಾರಾಜ್ಯ ಹೆದ್ದಾರಿಯ ಹಾರೂಗೇರಿ ಪಟ್ಟಣದ ಬಳಿ ಆಕ್ಸಿಡೆಂಟ್ ಆಗಿದೆ. ಲಕ್ಷ್ಮಣ ಸವದಿಯವರ ಕಾರು ಅಥಣಿಯಿಂದ ಬೆಳಗಾವಿ ಕಡೆಗೆ ಹೊರಟಿತ್ತು. ಕಾರು ಅಪಘಾತವಾಗುತ್ತಿದಂತೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಪಘಾತದಲ್ಲಿ ಲಕ್ಷ್ಮಣ ಸವದಿ ಪ್ರಾಣಾಪಾಯದಿಂದ (Great Escape) ಪಾರಾಗಿದ್ದಾರೆ. ಬೈಕ್ ಸವಾರ (Bike Rider) ಸವದಿ ಕಾರಿಗೆ ಅಡ್ಡ ಬಂದಿದ್ದು, ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.
ಬೆಳಗಾವಿಯ ಹಾರೂಗೇರಿ ಪಟ್ಟಣದ ಬಳಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಕಾರು ಅಪಘಾತಕ್ಕೀಡಾಗಿದೆ. ಸವದಿಯವರ ಕಾರಿಗೆ ಬೈಕ್ ಅಡ್ಡ ಬಂದಿದ್ದು, ತಪ್ಪಿಸೋಕೆ ಹೋದಾಗ ಆಕ್ಸಿಡೆಂಟ್ ಆಗಿದೆ. ಅದೃಷ್ಟವಶಾತ್ ಸವದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಲೆಗೆ ಪಲ್ಟಿಯಾಗಿರುವ ಸವದಿ ಕಾರು
ಅಪಘಾತದ ರಭಸಕ್ಕೆ ತಿರುವಿನ ಅಂಚಿನಲ್ಲಿನ ರಸ್ತೆ ಪಕ್ಕದ ನಾಲೆಗೆ ಸವದಿಯವರ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಾರಲ್ಲಿದ್ದ ಎಲ್ಲರೂ ಸೇಫ್ ಆಗಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ರಭಸಕ್ಕೆ ಸವದಿಯವರ ಎಡಗೈಗೆ ಸಣ್ಣ ಗಾಯವಾಗಿದೆ.
ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ, ಅಟ್ರಾಸಿಟಿ ಪ್ರಕರಣವೂ ದಾಖಲು!
ದೇವರ ದಯೆಯಿಂದ ಆರಾಮಾಗಿದ್ದಾರೆ- ಸವದಿ ಪುತ್ರ
ಲಕ್ಷ್ಮಣ ಸವದಿ ಅವರು ಬೆಳಗಾವಿ ಕಡೆ ಹೋಗುವಾಗ ದಾರಿ ಮಧ್ಯದಲ್ಲಿ ಅಪಘಾತವಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಅಂತಾ ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಸವದಿ ಹೇಳಿದ್ದಾರೆ. ಲಕ್ಷ್ಮಣ ಸವದಿಗೆ ಹಾಗೂ ಚಾಲಕ, ಗನ್‌ಮ್ಯಾನ್ ಮತ್ತು ಪಿಎ ಅವರಿಗೂ ಯಾವುದೇ ತೊಂದರೆ ಆಗಿಲ್ಲ ಅಂತ ಹೇಳಿದ್ರು.
ದೇವರ ದಯೆಯಿಂದ ಆರಾಮಾಗಿದ್ದು ಯಾರು ಗಾಬರಿಪಡುವ ಅವಶ್ಯಕತೆ ಇಲ್ಲ. ಎಲ್ಲರ ಆಶೀರ್ವಾದ ಅಭಿಮಾನಕ್ಕೆ ಸವದಿಯವರು ಹುಷಾರಾಗಿದ್ದಾರೆ. ಇದೊಂದು ಕೆಟ್ಟ ಗಳಿಗೆ. ದೇವರ ದಯೆಯಿಂದ ಆರಾಮಾಗಿದ್ದಾರೆ. ಹಾರುಗೇರಿ ಆಸ್ಪತ್ರೆಯಿಂದ ಮನೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಯಾರು ಕಾರ್ಯಕರ್ತರು ಅಥಣಿಗೆ ಬರುವ ಅವಶ್ಯಕತೆ ಇಲ್ಲಾ ಎಂದು ಚಿದಾನಂದ ಸವದಿ ಹೇಳಿದರು.
ಪೊಲೀಸ್ ದಾಳಿಗೆ ಓಡಿಹೋದಾಗ ಕುಸಿದು ಯುವಕ ಸಾವು!
ಕಲಬುರಗಿಯಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸ್ ದಾಳಿಯಾಗಿದೆ. ಪೊಲೀಸ್ ದಾಳಿ ವೇಳೆ ಯುವಕನೊಬ್ಬ ಓಡಿ ಹೋಗುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಿದ್ದಪ್ಪ ಕೊಂಡಾ 20 ಕುಸಿದು ಬಿದ್ದು ಸಾವನ್ನಪ್ಪಿದ ಯುವಕ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ
ಹಾಜಿ ಸರ್ವರ್ ದರ್ಗಾದಲ್ಲಿ 10 ರಿಂದ 15 ಜನರ ತಂಡ ಇಸ್ಪಿಟ್ ಆಡುತ್ತಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿದ್ದು ಎಲ್ಲರೂ ಓಡಿದ್ದಾರೆ. ಆ ವೇಳೆ ಯುವಕ ಸಾವನ್ನಪ್ಪಿದ್ದಾನೆ. ಸಿದ್ದಪ್ಪಾ ಕೊಂಡ ಸಾವನ್ನಪ್ಪಿದ ಹಿನ್ನಲೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೆಜಿಎಫ್ ಬಾಬು ಚೆಕ್ ವಿತರಣೆ
ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಟೌನ್ ಹಾಲ್ನಲ್ಲಿ ಚಿಕ್ಕಪೇಟೆಯ ಜನತೆಗೆ ಚೆಕ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೆಜಿಎಫ್ ಬಾಬು ಅವರು ನೀಡುತ್ತಿರುವ 5 ಸಾವಿರ ರೂಪಾಯಿ ಚೆಕ್ ಪಡೆಯಲು ಟೌನ್ ಹಾಲ್ನಲ್ಲಿ ಚಿಕ್ಕಪೇಟೆಯ ಜನ ಸೇರಿದ್ದರು. ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಂದ ಟೌನ್ ಹಾಲ್ ತುಂಬಿ ತುಳುಕುತ್ತಿತ್ತು.
ಇದನ್ನೂ ಓದಿ: ಮೋದಿ ಕಾರ್ಯಕ್ರಮದಲ್ಲಿ ನಳಿನ್ ಕಟೀಲ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ!
ಕಾಂಗ್ರೆಸ್ನಲ್ಲಿ ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದರೂ ಕೆಜಿಎಫ್ ಬಾಬು ಚೆಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ವಿರೋಧದ ನಡುವೆಯೇ ಚೆಕ್ ವಿತರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ