• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajyasabha ಟಿಕೆಟ್ ಘೋಷಣೆ ಬೆನ್ನಲ್ಲೇ ಕೈ ಅಂಗಳದಲ್ಲಿ ಅಸಮಾಧಾನ ಸ್ಫೋಟ; ನನ್ನ ನಿರೀಕ್ಷೆ ಸುಳ್ಳಾಯ್ತು ಅಂದ್ರು ಮುದ್ದಹನುಮೇಗೌಡರು

Rajyasabha ಟಿಕೆಟ್ ಘೋಷಣೆ ಬೆನ್ನಲ್ಲೇ ಕೈ ಅಂಗಳದಲ್ಲಿ ಅಸಮಾಧಾನ ಸ್ಫೋಟ; ನನ್ನ ನಿರೀಕ್ಷೆ ಸುಳ್ಳಾಯ್ತು ಅಂದ್ರು ಮುದ್ದಹನುಮೇಗೌಡರು

ಎಸ್ ಪಿ ಮುದ್ದಹನುಮೇಗೌಡ

ಎಸ್ ಪಿ ಮುದ್ದಹನುಮೇಗೌಡ

ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಟಿಕೆಟ್ ನೀಡಲಿಲ್ಲ. ಈಗ ರಾಜ್ಯಸಭೆಗೂ ಅವಕಾಶ ನೀಡದೇ ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

  • Share this:

ರಾಜ್ಯಸಭಾ ಟಿಕೆಟ್ (Rajyasabha Ticket) ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ (Congress) ಅಸಮಾಧಾನ ಸ್ಫೋಟವಾಗಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು (SP Muddahanumegowda) ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಟಿಕೆಟ್ ಸಿಗದಕ್ಕೆ ಕೈ ನಾಯಕರ (Congress Leaders) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಜೈರಾಮ್ ರಮೇಶ್ (Jairam Ramesh) ಅವರಿಗೆ ಟಿಕೆಟ್ ನೀಡಿದೆ. ಕಳೆದ ಲೋಕಸಭಾ ಚುನಾವಣೆ (Loksabha Election) ವೇಳೆಯೂ ಮುದ್ದಹನುಮೇಗೌಡರು ಟಿಕೆಟ್ ವಂಚಿತರಾಗಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ (Congress-JDS) ಸರ್ಕಾರ ಅಧಿಕಾರದಲ್ಲಿತ್ತು. ತಮ್ಮ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಬಿಟ್ಟುಕೊಟ್ಟಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (Former PM HD Devegowda) ಮೈತ್ರಿ ಅಭ್ಯರ್ಥಿಯಾಗಿ ತುಮಕೂರು (Tumakuru) ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದ್ದರಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತ್ತು.


ರಾಜ್ಯಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಮುದ್ದಹನುಮೇಗೌಡರು, ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಟಿಕೆಟ್ ನೀಡಲಿಲ್ಲ. ಈಗ ರಾಜ್ಯಸಭೆಗೂ ಅವಕಾಶ ನೀಡದೇ ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.


ಗೆಲ್ಲುವ ನಾಯಕರಿಗೆ ಟಿಕೆಟ್ ನೀಡುತ್ತಿಲ್ಯಾಕೆ?


2023ರ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಎಂದೂ ಗೆಲ್ಲದ ಸ್ವಯಂ ಘೋಷಿಯ ನಾಯಕರಿಗೆ ಟಿಕೆಟ್ ನೀಡುತ್ತಿರೋದು ಯಾಕೆ? ಗೆಲ್ಲುವ ಸಾಮಾರ್ಥ್ಯ ಇರೋ ನಮ್ಮಂತಹ ನಾಯಕರಿಗೆ ಟಿಕೆಟ್ ನೀಡದಿರೋದಕ್ಕೆ ಕಾರಣವನ್ನಾದರೂ ಹೇಳಬೇಕಲ್ಲವಾ ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ:   Siddaramaiah: ಶಾಲು, ದೋತಿ, ಪೇಟ ಹಾಕೋದು ನನ್ನ ಸಂಪ್ರದಾಯ, ಇದನ್ನ ಕೇಳಲು ನೀನ್ ಯಾರು? ಸಿದ್ದರಾಮಯ್ಯ


ವೇಣುಗೋಪಾಲ್ ಅವರೇ ಬಹಿರಂಗಪಡಿಸಲಿ


ಸಂಸತ್ ಚುನಾವಣೆಯಲ್ಲಿ ರಾಜ್ಯದ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ನನಗೆ ಅವರು ಏನು ಭರವಸೆ ನೀಡಿದ್ದರು ಮತ್ತು ಅದರಂತೆ ಯಾಕೆ ನಡೆದುಕೊಳ್ಳಲಿಲ್ಲ ಎಂಬುದನ್ನು ವೇಣುಗೋಪಾಲ್ ಅವರೇ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.


ಅಂದು ಇಬ್ಬರು ನಾಯಕರು ಭರವಸೆ ನೀಡಿದ್ರು


ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅವರು ಭರವಸೆ ನೀಡಿದ್ದರು. ರಾಜ್ಯಸಭಾ ಅಭ್ಯರ್ಥಿಯ ಆಯ್ಕೆಯ ಅವಕಾಶ ಬಂದಾಗ ನಿಮಗೆ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. 2020ರಲ್ಲಿಯೂ ಈ ಅವಕಾಶ ಬಂದಿತ್ತು. ಆದ್ರೆ ನನಗೆ ಅವಕಾಶ ಸಿಗಲಿಲ್ಲ. ಈಗ ಮತ್ತೆ ನಾನು ಆ ಅವಕಾಶದಿಂದ ವಂಚಿತನಾಗಿದ್ದೇನೆ.


ಪಕ್ಷದ ಸರ್ವೋಚ್ಚ ನಾಯಕ ನೀಡಿದ್ದ ಭರವಸೆ ನಂಬಿದ್ದೆ


ನಾನು ಎಂದೂ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದವನಲ್ಲ. ಹಿಂಬಾಗಿಲಿನಿಂದ ಹೋಗಿ ಟಿಕೆಟ್ ಗಾಗಿ ಲಾಬಿ ಮಾಡಿದವನಲ್ಲ. ಪಕ್ಷದ ಸರ್ವೋಚ್ಛ ನಾಯಕರಾಗಿರುವ ರಾಹುಲ್ ಗಾಂಧಿ ಅವರು ನೀಡಿದ ಭರವಸೆಯನ್ನು ನಾನು ನಂಬಿದ್ದೆ ಎಂದು ಮುದ್ದಹನುಮೇಗೌಡರು ಹೇಳುತ್ತಾರೆ.


ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೆ


ಯಾರಿಗೂ ನಾನು ಬಿ ಫಾರಂ ನೀಡಿ ಎಂದು ಮನವಿ ಮಾಡಿಕೊಂಡಿರಲಿಲ್ಲ. ರಾಹುಲ್ ಗಾಂಧಿ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ. ಅವರೇ ಹೇಳಿದ್ರಿಂದ ನನಗೆ ಅವಕಾಶ ಸಿಗುತ್ತೆ ಅಂತ ನಿರೀಕ್ಷೆ ಮಾಡಿದ್ದೆ. ಬಹುಶಃ ಪಕ್ಷಕ್ಕೆ ನನ್ನ ಅನಿವಾರ್ಯತೇ ಇಲ್ಲವೇನೋ ಅನ್ನಿಸುತ್ತಿದೆ ಎಂದು ಕಾಂಗ್ರೆಸ್ ತೊರಡಯುವ ಬಗ್ಗೆ ಮಾತನಾಡಿದರು.


ಇದನ್ನೂ ಓದಿ:  Ayodhya Bus Accident: ಅಯೋಧ್ಯೆ ಬಸ್ ಅಪಘಾತದಲ್ಲಿ ಕನ್ನಡಿಗರ ಸಾವು; ಗಾಯಾಳುಗಳ ನೆರವಿಗೆ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ


ದೇವೇಗೌಡರ ಹೇಳಿಕೆಗೆ ನೀವೇ ಉತ್ತರ ಕೊಡಿ


ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರ ಬಗ್ಗೆ ಮಾಜಿ ಪ್ರಧಾನಿಗಳು ಹೇಳಿದ್ದರು. ದೇವೇಗೌಡರ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಉತ್ತರ ನೀಡಲಿ ಎಂದು ಆಗ್ರಹಿಸಿದರು.

top videos
    First published: