Karnataka Elections: 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದಕ್ಕೆ ಬಿಜೆಪಿ (Karnataka BJP) ವಲಯದಿಂದ ಹೆಸರೊಂದು ಕೇಳಿ ಬಂದಿದೆ. ಈ ಹಿಂದೆ ಸಚಿವ ಶ್ರೀರಾಮುಲು (Minister Sriramulu) ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದ್ರೆ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆಗೆ ಮುಂದಾಗಿರೋದಕ್ಕೆ ಯಾರು ಎದುರಾಳಿ ಅನ್ನೋ ಪ್ರಶ್ನೆ ಬಿಜೆಪಿ ಅಂಗಳದಲ್ಲಿಯೇ ಕೇಳಿ ಬಂದಿತ್ತು. ಒಂದು ವೇಳೆ ಬಾದಾಮಿಯಿಂದ (Badami) ಸ್ಪರ್ಧೆ ಮಾಡಿದ್ರೆ ಮತ್ತೆ ಶ್ರೀರಾಮುಲು ಅವರನ್ನ ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿತ್ತು. ಇದಕ್ಕೆ ಕಾರಣ 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರಿಂದ ಕೆಲ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು.
ಇದೀಗ ಮೂಲ ಕ್ಷೇತ್ರ ವರುಣಾದತ್ತ ಸಿದ್ದರಾಮಯ್ಯ ಮುಖ ಮಾಡಿದ್ದು, ಪುತ್ರ ಯತೀಂದ್ರ ಕ್ಷೇತ್ರ ತ್ಯಾಗ ಮಾಡಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ಈ ಹಿನ್ನೆಲೆ ವರುಣಾ ತಮಗೆ ಸೇಫ್ ಎಂದು ಲೆಕ್ಕಾಚಾರ ಹಾಕಿರುವ ಸಿದ್ದರಾಮಯ್ಯ ಇಲ್ಲಿಂದಲೇ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗುತ್ತಿದೆ.
ವರುಣಾದಲ್ಲಿ ವಿಜಯೇಂದ್ರ ಸುತ್ತಾಟ
ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ವರುಣಾಗೆ ಭೇಟಿ ನೀಡಿರೋದು ಹಲವು ಚರ್ಚೆಗಳಿಗೆ ಮುನ್ನುಡಿ ಬರೆದಿದೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ.ವಿಜಯೇಂದ್ರ,, ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ, ಅದನ್ನ ನಿಭಾಯಿಸುತ್ತೇನೆ. ಎಲ್ಲಾ ಸವಾಲುಗಳನ್ನು ಎದುರಿಸುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ವರುಣ ಕ್ಷೇತ್ರದಲ್ಲಿ ಸ್ಪರ್ಧೆಸೋ ಆಸೆ ವ್ಯಕ್ತಪಡಿಸಿದ್ರು.
ಗುಜರಾತ್ ಫಲಿತಾಂಶ ಪ್ರಭಾವ
ಕಾಂಗ್ರೆಸ್ ನಾಯಕರು ಯಾವುದೋ ಭ್ರಮೆಯಲ್ಲಿದ್ದಾರೆ. ಗುಜರಾತಿನ ಜನರು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ವಿಶ್ವನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ನಮ್ಮ ರಾಜ್ಯದ ಚುನಾವಣೆ ಮೇಲೆಯೂ ಬೀರಲಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ
ಮೋದಿ ಒಂದು ಅಲೆಯಲ್ಲ, ಅದೊಂದು ಸುನಾಮಿ. ಭಾರತೀಯ ಜನತಾ ಪಕ್ಷ ಯಾವುದೇ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಲ್ಲ. ಪಕ್ಷದ ಹಿರಿಯ ನಾಯಕರು, ಹೈಕಮಾಂಡ್ ಹಾಗೂ ಎಲ್ಲರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ. ಇದೆಲ್ಲದರ ಪರಿಣಾಮ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ವರುಣಾ ಚುನಾವಣೆಗೆ ಸಂಬಂಧಿಸಿದಂತೆ ನಾವು ಯಾವುದೇ ಹೇಳಿಕೆ ನೀಡಲ್ಲ. ವರುಣಾ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ಈ ಭಾಗದಿಂದ ಹೆಚ್ಚು ಶಾಸಕರು ಗೆಲ್ಲಬೇಕು ಎಂಬುವುದು ನಮ್ಮ ಗುರಿ ಎಂದರು.
ಇದನ್ನೂ ಓದಿ: Hassan: ಪ್ರಶಾಂತ್ ನಾಗರಾಜ್ ಹತ್ಯೆ: ಐಜಿಪಿ ಹೇಳಿದ್ದೇನು? ಇತ್ತ ಪ್ರೀತಂಗೌಡ, ಗೋಪಾಲಯ್ಯ ಸುದ್ದಿಗೋಷ್ಠಿ
2018ರಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಮಿಸ್
2018ರ ಚುನಾವಣೆಯಲ್ಲಿ ವರುಣಾದಿಂದ ಯತೀಂದ್ರ ಸಿದ್ದರಾಮಯ್ಯ ಕಣಕ್ಕೆ ಇಳಿಯುತ್ತಿದ್ದಂತೆ ಬಿ.ವೈ.ವಿಜಯೇಂದ್ರ ಈ ಭಾಗದಲ್ಲಿ ಸಕ್ರಿಯರಾಗಿದ್ದರು. ಟಿಕೆಟ್ ಘೋಷಣೆಗೂ ಮುನ್ನವೇ ವರುಣಾದಲ್ಲಿ ವಿಜಯೇಂದ್ರ ಬಿರುಸಿನ ಪ್ರಚಾರ ನಡೆಸಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ವಿಜಯೇಂದ್ರರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು.
ವಿಜಯೇಂದ್ರ ಮುಂದಿದೆ ಶಿಕಾರಿಪುರ
ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚುನಾವಣೆ ನಿವೃತ್ತಿ ಘೋಷಣೆ ಮಾಡಿರೋ ಕಾರಣ ಶಿಕಾರಿಪುರದಿಂದಲೂ ವಿಜಯೇಂದ್ರ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ. ಚುನಾವಣೆ ನಿವೃತ್ತಿ ಹೇಳಿದ್ದ ಯಡಿಯೂರಪ್ಪ ತಮ್ಮ ಮಗನೇ ಮುಂದಿನ ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಈ ಘೋಷಣೆ ಬೆನ್ನಲ್ಲೇ ತಂದೆ ಬಳಿದಿದ್ದ ವಿಜಯೇಂದ್ರ ಆಶೀರ್ವಾದ ಪಡೆದುಕೊಂಡಿದ್ದರು.
ಈ ಘೋಷಣೆಗೆ ಹೈಕಮಾಂಡ್ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಯಡಿಯೂರಪ್ಪ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ