ಕಾಂಗ್ರೆಸ್ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ; ಮಾಜಿ ಸಿಎಂ ಎಸ್.​ಎಂ. ಕೃಷ್ಣ

ಅವರ ಅವರ ಮನೆ ಅವರೇ ಸರಿ ಮಾಡಬೇಕು. ಆದರೆ ದೇಶದಲ್ಲಿ ಗಟ್ಟಿ ಪ್ರತಿಪಕ್ಷ ಇರಬೇಕು. ನಾನು ಕಾಂಗ್ರೆಸ್ ಬಿಟ್ಟಿದ್ದಕ್ಕೆ ಹಾಗೆ ಆಗಿದೆ ಎನ್ನಲ್ಲ. ಅದು ಕಾಕತಾಳೀಯ ಇರಬೇಕು. ನಾನು ಕಾಂಗ್ರೆಸ್ ಬಿಟ್ಟಿದ್ದಕ್ಕೆ ಅಲ್ಲಿ ಆ ರೀತಿಯ ಬೆಳವಣಿಗೆ ಆಗ್ತಿಲ್ಲ ಎಂದರು.

ಎಸ್​ಎಂ ಕೃಷ್ಣ

ಎಸ್​ಎಂ ಕೃಷ್ಣ

 • Share this:
  ಬೆಂಗಳೂರು(ನ.11): ಆರ್​ ಆರ್​​ ನಗರ ಚುನಾವಣೆ ಫಲಿತಾಂಶ ಬಂದ ಬಳಿಕ ನೂತನ ಬಿಜೆಪಿ ಶಾಸಕ ಮುನಿರತ್ನ ಇಂದು ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಎಸ್​.ಎಂ.ಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಸದಾಶಿವನಗರದ ಎಸ್​ಎಂಕೆ ಮನೆಗೆ ತೆರಳಿದ ಮುನಿರತ್ನ, ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಪರಸ್ಪರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ ಎಂ ಕೃಷ್ಣ,  ಉಪಚುನಾವಣೆ ಗೆಲುವಿನ ಬಗ್ಗೆ ವಿಮರ್ಶೆ ಮಾಡಿದರು. ದೇಶದಲ್ಲಿ ಬದಲಾವಣೆ ಆಗ್ತಿದೆ. ಕಾಂಗ್ರೆಸ್ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ. ಬಿಜೆಪಿ ತನ್ನ ಪ್ರಖರತೆಯ ವಿಸ್ತಾರ ಮಾಡಿಕೊಳ್ಳುತ್ತಿದೆ. ಬಿಜೆಪಿ ವ್ಯಾಪಕವಾಗ್ತಿದೆ‌‌. ಮೋದಿ ರಾಜ ಋಷಿ ಎಂದು ಶ್ಲಾಘಿಸಿದರು.

  ಮುಂದುವರೆದ ಅವರು, ಮೋದಿಯವರಿಗೆ ಯಾವ ಪ್ರಲೋಭಗಳು ಇಲ್ಲ. ಅವರಿಗೆ ದೇಶವೇ ದೇವರು. ಅವರು ಈ ದೇಶಕ್ಕೆ ಪ್ರಧಾನಿ ಆಗಿದ್ದು ನಮ್ಮೆಲ್ಲರ ಸೌಭಾಗ್ಯ. ಪ್ರಧಾನಿ ಮೋದಿಯವರು ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

  ಎಡಪಕ್ಷಗಳ ಎಡಬಿಡಂಗಿತನ ಎಷ್ಟು ದಿನ ನಡೆಯುತ್ತೆ?; ಸಿ.ಟಿ.ರವಿ ವ್ಯಂಗ್ಯ

  ಇನ್ನು,  ರಾಜ್ಯದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪನವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದಾರೆ ಎಂದರು.  ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬ ಚರ್ಚೆ ಬಗ್ಗೆ, ತೆಲುಗು ಗಾದೆ ಮಾತು ಹೇಳಿ ಎಸ್​​ಎಂ ಕೃಷ್ಣ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಅಡೆ ಇಲ್ಲದಕೆ ಅವಳೆ ಇಲ್ಲ ಮಗುಗೆ ಹೆಸರು ಇಟ್ರು ಎನ್ನುವ ಹಾಗೆ.  ಕಾಂಗ್ರೆಸ್ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ ಎಂದರು.

  ಅವರ ಅವರ ಮನೆ ಅವರೇ ಸರಿ ಮಾಡಬೇಕು. ಆದರೆ ದೇಶದಲ್ಲಿ ಗಟ್ಟಿ ಪ್ರತಿಪಕ್ಷ ಇರಬೇಕು. ನಾನು ಕಾಂಗ್ರೆಸ್ ಬಿಟ್ಟಿದ್ದಕ್ಕೆ ಹಾಗೆ ಆಗಿದೆ ಎನ್ನಲ್ಲ. ಅದು ಕಾಕತಾಳೀಯ ಇರಬೇಕು. ನಾನು ಕಾಂಗ್ರೆಸ್ ಬಿಟ್ಟಿದ್ದಕ್ಕೆ ಅಲ್ಲಿ ಆ ರೀತಿಯ ಬೆಳವಣಿಗೆ ಆಗ್ತಿಲ್ಲ ಎಂದರು.

  ಉಪಚುನಾವಣೆ ಸೋಲಿನ ಬಳಿಕ ಸಿದ್ದರಾಮಯ್ಯ ವಿಮರ್ಶೆ ಮಾಡಿದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸೋತ ಮೇಲೆ ವಿವಿಧ ದೃಷ್ಟಿಕೋನಗಳಲ್ಲಿ ವಿಮರ್ಶೆ ಮಾಡ್ತಾರೆ ಎಂದು ಹೇಳಿದರು.
  Published by:Latha CG
  First published: