ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ; ಹಾಗಾಗಿ ಬಿಜೆಪಿಗೆ ವೋಟ್​​ ಹಾಕಲಿದ್ದಾರೆ; ಎಸ್​​.ಎಂ ಕೃಷ್ಣಾ

ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ಧಾರೆ. ಹೀಗೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ ಮಾತಿಗೆ ಕಿಮ್ಮತ್ತು ಇರಬೇಕಲ್ಲವೇ ಎಂದರು.

news18-kannada
Updated:December 4, 2019, 8:30 PM IST
ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ; ಹಾಗಾಗಿ ಬಿಜೆಪಿಗೆ ವೋಟ್​​ ಹಾಕಲಿದ್ದಾರೆ; ಎಸ್​​.ಎಂ ಕೃಷ್ಣಾ
ಎಸ್​ ಎಂ ಕೃಷ್ಣ
  • Share this:
ಬೆಂಗಳೂರು(ಡಿ.04): ಹಿಂದಿನ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್​​ ಮೈತ್ರಿ ಸರ್ಕಾರವೂ ಜನರಿಗೆ ಹೇಸಿಗೆ ತರಿಸಿದೆ. ತಮ್ಮ 14 ತಿಂಗಳ ಆಡಳಿತಾವಧಿಯಲ್ಲಿ ಕೇವಲ ಕೆಸರೆರಚಾಟದಲ್ಲಿ ತೊಡಗಿಡ್ಡ ಕಾಂಗ್ರೆಸ್​​-ಜೆಡಿಎಸ್​​ ನಾಯಕರು ಜನರಲ್ಲಿ ಅಸಹ್ಯ ಹುಟ್ಟಿಸಿದ್ದರು. ಆದ್ದರಿಂದ ಜನರಿಗೆ ಭಾರತೀಯ ಜನತಾ ಪಕ್ಷದ ಸರ್ಕಾರವೇ ಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ ಎಸ್​​.ಎಂ ಕೃಷ್ಣಾ ಅಭಿಪ್ರಾಯಪಟ್ಟಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಿಎಂ ಎಸ್​​. ಎಂ ಕೃಷ್ಣಾ, ಡಿಸೆಂಬರ್​​ 9ನೇ ತಾರೀಕಿನ ಬಳಿಕ ಮತ್ತೆ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಮಾತುಗಳು ಕೇಳಿ ಬರುತ್ತಿವೆ. ಇದು ಕೇವಲ ಕನಸು ಮಾತ್ರ. ಬಿಜೆಪಿ ಗೆಲ್ಲಿಸಲು ನಮ್ಮ ಕಾರ್ಯಕರ್ತರು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಹಾಗಾಗಿ ರಾಜ್ಯದ 15 ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ಧಾರೆ. ಹೀಗೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ ಮಾತಿಗೆ ಕಿಮ್ಮತ್ತು ಇರಬೇಕಲ್ಲವೇ ಎಂದರು.

ಇದನ್ನೂ ಓದಿ: ಸುಡಾನ್​​ ಸೆರಾಮಿಕ್​​ ಕಾರ್ಖಾನೆಯಲ್ಲಿ ಸ್ಪೋಟ: 18 ಮಂದಿ ಭಾರತೀಯರು ಸೇರಿದಂತೆ 23 ಮಂದಿ ಸಾವು

ಕಾಂಗ್ರೆಸ್​-ಜೆಡಿಎಸ್​​ನಿಂದ ಬಂದ ಅನರ್ಹ ಶಾಸಕರ ಸಂಸ್ಕೃತಿ ಭಿನ್ನವಾಗಿದೆ. ಬಿಜೆಪಿ ಸಂಸ್ಕೃತಿಯೇ ಬೇರೆ ಇದೆ. ಹೀಗಾಗಿ ಬಿಜೆಪಿ ಅನರ್ಹ ಶಾಸಕರು ಒಗ್ಗಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗೂ ಎಸ್​​.ಎಂ ಕೃಷ್ಣಾ ಉತ್ತರಿಸಿದರು. ನಾನು ಕಾಂಗ್ರೆಸ್​ನಿಂದ ಬಂದು ಬಿಜೆಪಿ ಜೊತೆಯಲ್ಲಿದ್ದೇನೆ. ಹಾಗೆಯೇ ಅನರ್ಹ ಶಾಸಕರು ಒಗ್ಗಿಕೊಳ್ಳಲಿದ್ಧಾರೆ ಎಂದು ಹೇಳಿದರು.

ನಾಳೆ ರಾಜ್ಯದ ಗೋಕಾಕ್​, ಅಥಣಿ, ರಾಣೇಬೆನ್ನೂರು, ಕಾಗವಾಡ, ಹಿರೇಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆ.ಆರ್​ ಪೇಟೆ, ಮಹಾಲಕ್ಷ್ಮೀ ಲೇಔಟ್​ , ಕೆ.ಆರ್​ ಪುರಂ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈಗಾಗಲೇ ರಾಜ್ಯ ಚುನಾವಣೆ ಆಯೋಗವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಗುರುವಾರ(ಡಿ.05) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಬಳಿಕ ಡಿಸೆಂಬರ್​​ 9ನೇ ತಾರೀಕಿನಂದು ಫಲಿತಾಂಶ ಹೊರಬೀಳಲಿದೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ