ಮಾನ ಮರ್ಯಾದೆ ಇರೋರು ಬಿಜೆಪಿಗೆ ಹೋಗೋದಿಲ್ಲ: ಎಸ್​​.ಟಿ ಸೋಮಶೇಖರ್​​ಗೆ ಸಿದ್ದರಾಮಯ್ಯ ಟಾಂಗ್​​

ಇನ್ನು, ಕಾಂಗ್ರೆಸ್ಸಿಗರು ಮನೆಗೆ ಹೋಗುವಂತ ಫಲಿತಾಂಶ ಬರುತ್ತದೆ ಎಂಬ ಆರ್​​. ಅಶೋಕ್​​ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಮಂಡರಾದರು. ಜಗದೀಶ್​​ ಶೆಟ್ಟರ್​​​ ಸಿಎಂ ಆಗಿದ್ದಾಗ ಸೋತರಲ್ಲ, ಆಗ ಬಿಜೆಪಿಯವ್ರು ಎಲ್ಲಿಗೆ ಹೋಗಿದ್ರು? ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.

news18-kannada
Updated:December 8, 2019, 5:26 PM IST
ಮಾನ ಮರ್ಯಾದೆ ಇರೋರು ಬಿಜೆಪಿಗೆ ಹೋಗೋದಿಲ್ಲ: ಎಸ್​​.ಟಿ ಸೋಮಶೇಖರ್​​ಗೆ ಸಿದ್ದರಾಮಯ್ಯ ಟಾಂಗ್​​
ಇನ್ನು, ಕಾಂಗ್ರೆಸ್ಸಿಗರು ಮನೆಗೆ ಹೋಗುವಂತ ಫಲಿತಾಂಶ ಬರುತ್ತದೆ ಎಂಬ ಆರ್​​. ಅಶೋಕ್​​ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಮಂಡರಾದರು. ಜಗದೀಶ್​​ ಶೆಟ್ಟರ್​​​ ಸಿಎಂ ಆಗಿದ್ದಾಗ ಸೋತರಲ್ಲ, ಆಗ ಬಿಜೆಪಿಯವ್ರು ಎಲ್ಲಿಗೆ ಹೋಗಿದ್ರು? ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.
  • Share this:
ಬಾಗಲಕೋಟೆ(ಡಿ.08): ಕಾಂಗ್ರೆಸ್​​ ಮತ್ತು ಜೆಡಿಎಸ್​​ನ ಶಾಸಕರು ನಮ್ಮೊಂದಿಗೆ ಸಂಪರ್ಕದಲಿದ್ದಾರೆ ಎಂಬ ಅನರ್ಹ ಶಾಸಕ ಎಸ್​​.ಟಿ ಸೋಮಶೇಖರ್​​ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್​​ ನೀಡಿದ್ದಾರೆ. ಎಸ್​​​. ಟಿ ಸೋಮಶೇಖರ್​​ ಕಾಂಗ್ರೆಸ್​​ನ 4 ಮತ್ತು ಜೆಡಿಎಸ್​​ನ 9 ಶಾಸಕರು ಬರಲು ಸಿದ್ದರಿದ್ದಾರೆ ಎಂದಿದ್ದಾರೆ. ಮಾನ ಮರ್ಯಾದೆ ಇರೋರು ಯಾರು ಬಿಜೆಪಿಗೆ ಹೋಗುವುದಿಲ್ಲ ಎನ್ನುವ ಮೂಲಕ ಎಸ್​​.ಟಿ ಸೋಮಶೇಖರ್​​ ಹೇಳಿಕೆಗೆ ಸಿದ್ದರಾಮಯ್ಯ ತಪರಾಕಿ ಬಾರಿಸಿದರು.

ಇಂದು ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ಕರ್ನಾಟಕ ಉಪಚುನಾವಣೆ ಫಲಿತಾಂಶ ಬರೋವರೆಗೂ ಕಾಯೋಣ. ವೋಟಿಂಗ್​​ ಈಸ್​​ ಎ ಸಿಕ್ರೇಟ್​​ ಬ್ಯಾಲೇಟ್​​​, ಸಮೀಕ್ಷೆ ಫಲಿತಾಂಶವೇನು ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್​​ 8 ರಿಂದ 10 ಗೆದ್ದೇ ಗೆಲ್ಲುತ್ತೇ ಅಂದುಕೊಂಡಿದ್ದೇನೆ. ನಾನು ಪ್ರಚಾರಕ್ಕೋದ ಕಡೆಯೆಲ್ಲಾ ಪಕ್ಷಾಂತರಿಗಳ ವಿರುದ್ಧದ ವಾತಾವರಣವಿತ್ತು" ಎಂದರು.

ಇನ್ನು, ಕಾಂಗ್ರೆಸ್ಸಿಗರು ಮನೆಗೆ ಹೋಗುವಂತ ಫಲಿತಾಂಶ ಬರುತ್ತದೆ ಎಂಬ ಆರ್​​. ಅಶೋಕ್​​ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಮಂಡರಾದರು. ಜಗದೀಶ್​​ ಶೆಟ್ಟರ್​​​ ಸಿಎಂ ಆಗಿದ್ದಾಗ ಸೋತರಲ್ಲ, ಆಗ ಬಿಜೆಪಿಯವ್ರು ಎಲ್ಲಿಗೆ ಹೋಗಿದ್ರು? ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ; ‘ಕಾಂಗ್ರೆಸ್​​​-ಜೆಡಿಎಸ್​​ಗೆ ತಲಾ ಒಂದು ಸ್ಥಾನ, ಬಿಜೆಪಿ 13 ಕ್ಷೇತ್ರ ಗೆಲ್ಲಲಿದೆ‘ ಎಂದ ಸಿಎಂ ಬಿಎಸ್​​ವೈ

ಈ ಮುನ್ನ ಕಾಂಗ್ರೆಸ್ ಪಕ್ಷದ 3 -4, ಜೆಡಿಎಸ್ ಪಕ್ಷದ 9 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಎಸ್​​.ಟಿ ಸೋಮಶೇಖರ್​​ ಹೇಳಿದ್ದರು. ನಾವು ಅನುಭವಿಸಿದ ನೋವು ಸಾಕು ಎಂದ ಎಸ್​​.ಟಿ ಸೋಮಶೇಖರ್​​ ರಾಜೀನಾಮೆ ನೀಡಿದರೆ ಇಷ್ಟೆಲ್ಲಾ ನಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದಿದ್ದರು.

ನಮ್ಮೊಂದಿಗೆ ಬರಬೇಕೆಂದು ಬಯಿಸಿದ ಕಾಂಗ್ರೆಸ್​-ಜೆಡಿಎಸ್​​ ಶಾಸಕರಿಗೆ ಈ ವಿಚಾರಗಳನ್ನು ತಿಳಿಸಿದ್ದೇವೆ. ಇದಕ್ಕೆಲ್ಲಾ ರೆಡಿ ಇದ್ದರೆ ಬನ್ನಿ ಎಂದು ಹೇಳಿದ್ದೇನೆ. ಬಿಜೆಪಿಗೆ ಬಂದಿರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ. ಆದರೆ ರಾಜೀನಾಮೆ ನೀಡಿದ ಬಳಿಕ ನಾವು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಸಚಿವ ಸ್ಥಾನ ಕೇಳಿಲ್ಲ. ಶಾಸಕನಾಗಿಯೂ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳಿದರು.
First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading