‘ನಾನೇನಾದ್ರು ಸಿಎಂ ಆಗಿದ್ರೆ ಮೋದಿ ಮನೆ ಮುಂದೆ ನೆರೆ ಪರಿಹಾರಕ್ಕಾಗಿ ಧರಣಿ ಕೂರುತ್ತಿದ್ದೆ‘: ಸಿದ್ದರಾಮಯ್ಯ

ಇದು ಮಿಸ್ಟರ್ ಮೋದಿ ಪರಿಹಾರ. ರಾಜ್ಯದಲ್ಲಿ ನೆರೆ, ಮಳೆಯಿಂದ 1 ಲಕ್ಷ ಕೋಟಿ ರೂ. ಹಾನಿಯಾಗಿದೆ. ರಾಜ್ಯದಿಂದ ಸಂಸತ್ತಿಗೆ 25 ಮಂದಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಒಂದು ದಿನವೂ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ಪರಿಹಾರ ನೀಡುವಂತೆ ಕೇಳಲಿಲ್ಲ- ಸಿದ್ದರಾಮಯ್ಯ

news18-kannada
Updated:January 9, 2020, 7:38 PM IST
‘ನಾನೇನಾದ್ರು ಸಿಎಂ ಆಗಿದ್ರೆ ಮೋದಿ ಮನೆ ಮುಂದೆ ನೆರೆ ಪರಿಹಾರಕ್ಕಾಗಿ ಧರಣಿ ಕೂರುತ್ತಿದ್ದೆ‘: ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬಾಗಲಕೋಟೆ(ಜ.09): "ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಕೇಂದ್ರ ಸರ್ಕಾರ ಪರಿಹಾರ ನೀಡಿದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂದು ಬಾದಾಮಿ ತಾಲೂಕಿನ ಗೋವನಕೊಪ್ಪದಲ್ಲಿ ನಡೆದ ಭೂಮಿ ಪೂಜೆ ಸಮಾರಂಭವನ್ನುದ್ದೇಶಿಸಿ ಮಾತಾಡುವ ವೇಳೆ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನೆರೆ ಪರಿಹಾರದ ಬಗ್ಗೆ ಹೀಗೆ ಕುಟುಕಿದ್ದರು.

ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ 36 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಳಿದೆ. ಈ ಹಿಂದೆ ಮೊದಲ ಕಂತಿನಲ್ಲಿ 1200 ಕೋಟಿ ರೂ ನೀಡಿದ್ದರು. ಈಗ ಎರಡನೇ ಕಂತಿನಲ್ಲಿ 669 ಕೋಟಿ ರೂ. ಪರಿಹಾರ ನೀಡುವುದಕ್ಕೆ ತೀರ್ಮಾನಿಸಿದ್ದಾರೆ. ಒಟ್ಟು ಕೇಂದ್ರ ಸರ್ಕಾರದಿಂದ 1869ಕೋಟಿ ಪರಿಹಾರ ಘೋಷಿಸಿದೆ. ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಕೇಂದ್ರ ಸರ್ಕಾರ ಪರಿಹಾರ ನೀಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದು ಮಿಸ್ಟರ್ ಮೋದಿ ಪರಿಹಾರ. ರಾಜ್ಯದಲ್ಲಿ ನೆರೆ, ಮಳೆಯಿಂದ 1 ಲಕ್ಷ ಕೋಟಿ ರೂ. ಹಾನಿಯಾಗಿದೆ. ರಾಜ್ಯದಿಂದ ಸಂಸತ್ತಿಗೆ 25 ಮಂದಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಒಂದು ದಿನವೂ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ಪರಿಹಾರ ನೀಡುವಂತೆ ಕೇಳಲಿಲ್ಲ. ಸಿಎಂ ಯಡಿಯೂರಪ್ಪ ಕೂಡ ಮೋದಿ ಬಳಿಕ ಪರಿಹಾರ ಕೇಳುವ ತಾಕತ್ತಿಲ್ಲ. ನಾನೇನು ಸಿಎಂ ಆಗಿದ್ದರೆ, ಮೋದಿ ಮನೆ ಮುಂದೆ ಧರಣಿ ಕೂರುತ್ತಿದ್ದೆ ಎಂದರು.

ಇದನ್ನೂ ಓದಿ: ಸರ್ಕಾರದ ಜತೆಗಿನ ಮಾತುಕತೆ ಯಶಸ್ವಿಯಾಗದ ಕಾರಣ ರಾಷ್ಟ್ರಪತಿ ಭವನದ ಕಡೆಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ಜನವರಿ 6ನೇ ತಾರಿಕು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೆ 1,869.85 ಕೋಟಿ ಪರಿಹಾರ ಘೋಷಣೆ ಮಾಡಿತ್ತು. ಕರ್ನಾಟಕ ಸೇರಿದಂತೆ ಪ್ರವಾಹಕ್ಕೆ ಈಡಾಗಿರುವ ಏಳು ರಾಜ್ಯಗಳಿಗೆ ಒಟ್ಟು 5,908 ಕೋಟಿ ಹಣ ಘೋಷಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

2019ರಂದು ಕರ್ನಾಟಕದಲ್ಲಿ ಆಗಸ್ಟ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸುಮಾರು 38 ಸಾವಿರ ಕೋಟಿ ರೂಪಾಯಿ ಹಾನಿ ಸಂಭವಿಸಿತ್ತು. 2019ರ ಅಕ್ಟೋಬರ್​ನಲ್ಲಿ ಎನ್​ಡಿಆರ್​ಎಫ್​ ರಾಜ್ಯಕ್ಕೆ ತುರ್ತು ಪರಿಹಾರವಾಗಿ 1,200 ಕೋಟಿ ಪರಿಹಾರ ಮಂಜೂರು ಮಾಡಿತ್ತು. ಇದೀಗ ಎರಡನೇ ಬಾರಿ 1,869.95 ಕೋಟಿ ರೂ. ಹಣ ಘೋಷಣೆ ಮಾಡಿದೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ