ಏಯ್​ ಯಾಕಮ್ಮ ಹೋಗ್ತಿದ್ದೀಯಾ? ನನ್ನ ಭಾಷಣ ಕೇಳಿಯೇ ಹೋಗ್ಬೇಕು: ಮಹಿಳೆಗೆ ಸಿದ್ದರಾಮಯ್ಯ ತಾಕೀತು

ಸಿದ್ದರಾಮಯ್ಯ ಮಾತಿಗೆ ಕಿವಿಕೊಡದ ಕೆಲವು ಮಹಿಳೆಯರನ್ನು ಸಂಘಟಕರು ಬಲವಂತವಾಗಿ ಕೂರಿಸುತ್ತಿದ್ದರು. ಆಗ ಯಾರನ್ನೂ ಬಲವಂತವಾಗಿ ಕೂರಿಸಬೇಡಿ. ಆಸಕ್ತಿ ಇದ್ದರೆ ಕೂರಿ, ಇಲ್ಲವೇ ಹೊರಡಿ ಎಂದು ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರೆಸಿದರು.

news18-kannada
Updated:January 22, 2020, 10:00 PM IST
ಏಯ್​ ಯಾಕಮ್ಮ ಹೋಗ್ತಿದ್ದೀಯಾ? ನನ್ನ ಭಾಷಣ ಕೇಳಿಯೇ ಹೋಗ್ಬೇಕು: ಮಹಿಳೆಗೆ ಸಿದ್ದರಾಮಯ್ಯ ತಾಕೀತು
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಮೈಸೂರು(ಜ.22): ಏಯ್​ ಯಾಕಮ್ಮ ಹೋಗ್ತಿದ್ದೀಯಾ? ನನ್ನ ಭಾಷಣ ಕೇಳಿಯೇ ಹೋಗ್ಬೇಕು ಎಂದು ಮಹಿಯೊಬ್ಬರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿರುವ ಘಟನೆ ನಡೆದಿದೆ. ಇಂದು ನಗರದ ಜಗನ್ಮೋಹನ ಅರಮನೆಯಲ್ಲಿ ಅಸಂಘಟಿತ ಮಹಿಳಾ ಕಾರ್ಮಿಕರ ಬೃಹತ್ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡುವ ವೇಳೆ ತನ್ನ ಭಾಷಣ ಪೂರ್ತಿ ಕೇಳಿಸಿಕೊಂಡು ಹೋಗುವಂತೆ ಮಹಿಳಿಯರಿಗೆ ಸಿದ್ದರಾಮಯ್ಯ ಏರು ದನಿಯಲ್ಲೇ ಗದರಿದ್ದಾರೆ.

ನಾನು ಜಾರಿಗೊಳಿಸಿದ ಕಾರ್ಯಕ್ರಮಗಳನ್ನ ಯಡಿಯೂರಪ್ಪ ಕಸದ ಬುಟ್ಟಿಗೆ ಹಾಕಿದ್ದಾರೆ. ಆದರೂ, ಮಹಿಳೆಯರಿಗೆ ಮಾತ್ರ ಬಿಜೆಪಿ ಮೇಲೆಯೇ ಒಲವು. ನೀವು ಪೂಜೆ ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ, ಪೂಜಾರಿಗಳ ಮೌಢ್ಯಕ್ಕೆ ಯಾವತ್ತು ಒಳಗಾಗಬೇಡಿ ಮಹಿಳೆಯರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಇನ್ನು ಸಿದ್ದರಾಮಯ್ಯ ತಮ್ಮ ಭಾಷಣ ಕೇಳಿಕೊಂಡು ಹೋಗುವಂತೆ ಮಹಿಳೆಯರಿಗೆ ಮನವಿ ಮಾಡಿದ ಪ್ರಸಂಗವೂ ನಡೆದುಹೋಯ್ತು. ಭಾಷಣದ ಮಧ್ಯೆ ಮಹಿಳೆಯರು ಎದ್ದು ಹೋಗುತ್ತಿದ್ದರು. ಆಗ ಸಿದ್ದರಾಮಯ್ಯ, ಯಾಕೆ ಎಲ್ಲರು ಹೋಗುತ್ತಿದ್ದೀರಾ? ನಿಮಗೆ ಅರಿವು ಮೂಡಿಸುವ ಸಲುವಾಗಿ ನಾನು ಭಾಷಣ ಮಾಡಲಿಕ್ಕೆ ಬಂದಿದ್ದೇನೆ. ನೀವೇ ಭಾಷಣ ಕೇಳದಿದ್ದರೆ ಹೇಗೆ? ಎಂದು ಗದರಿದರು.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಸಿದ್ದರಾಮಯ್ಯ ಮಾತಿಗೆ ಕಿವಿಕೊಡದ ಕೆಲವು ಮಹಿಳೆಯರನ್ನು ಸಂಘಟಕರು ಬಲವಂತವಾಗಿ ಕೂರಿಸುತ್ತಿದ್ದರು. ಆಗ ಯಾರನ್ನೂ ಬಲವಂತವಾಗಿ ಕೂರಿಸಬೇಡಿ. ಆಸಕ್ತಿ ಇದ್ದರೆ ಕೂರಿ, ಇಲ್ಲವೇ ಹೊರಡಿ ಎಂದು ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರೆಸಿದರು.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ