HOME » NEWS » State » FORMER CM SIDDARAMAIH DEMANDED PROBE INTO PARAMESHWAR AID RAMESH SUICIDE CASE GNR

ಪರಮೇಶ್ವರ್ ಆಪ್ತ ಸಹಾಯಕ ರಮೇಶ್​ ಆತ್ಮಹತ್ಯೆ ಪ್ರಕರಣ; ಸೂಕ್ತ ತನಿಖೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಪರಮೇಶ್ವರ್ ಮನೆ ಹಾಗೂ ಅವರ ಆಪ್ತರ ಮನೆಗಳ ಮೇಲೆ ಕಳೆದ ಮೂರು ದಿನಗಳಿಂದ ಐಟಿ ದಾಳಿ ಮುಂದುವರೆದಿದೆ. ಇದರಿಂದ ಕಂಗೆಟ್ಟು ಇಂದು ಆತ್ಮಹತ್ಯೆಗೆ ಶರಣಾಗಿರುವ ರಮೇಶ್​ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

news18-kannada
Updated:October 12, 2019, 9:39 PM IST
  • Share this:
ಬೆಂಗಳೂರು(ಅ.12): ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಇಂದು ಚಿಕ್ಕಮಗಳೂರಿನಲ್ಲಿ ಮಾತಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಮೇಶ್​​ ಆತ್ಯಹತ್ಯೆ ಪ್ರಕರಣ ಸೂಕ್ತವಾಗಿ ತನಿಖೆಯಾಗಬೇಕಿದೆ. ಆಗ ಮಾತ್ರ ಸಾವಿನ ಸತ್ಯಾಸತ್ಯತೆ ಹೊರಬಲಿದೆ ಎಂದಿದ್ದಾರೆ. ಅಲ್ಲದೇ ರಮೇಶ್ ಆತ್ಮಹತ್ಯೆಗೂ ಮುನ್ನ ಐಟಿಯವರು ನನಗೆ ಕಿರುಕುಳ ನೀಡಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಐಟಿಯವರ ಕಿರುಕಳಕ್ಕೆ ಬೇಸತ್ತು ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೊದಲೇ ಹೇಳಿದ್ದರಂತೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲವಾದರೂ, ರಮೇಶ್​​ ಕುಟುಂಬಸ್ಥರು ಹೀಗೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದರು ಸಿದ್ದರಾಮಯ್ಯ.

ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಬೇಕು. ಆಗ ಮಾತ್ರ ರಮೇಶ್​​ ಐಟಿಯವರ ಕಿರುಳದಿಂದ ಆತ್ಮಹತೆ ಮಾಡಿಕೊಂಡರೋ ಅಥವಾ ಈ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬ ಸತ್ಯ ಹೊರಬರಲಿದೆ ಎಂದು ಹೇಳಿದರು.

ತೆರಿಗೆ ಇಲಾಖೆಯವರು ಹೇಳಿದ್ದನ್ನೆಲ್ಲಾ ನಂಬಲಿಕ್ಕೆ ಆಗೋದಿಲ್ಲ. ರಮೇಶ್​​​ ಪರಮೇಶ್ವರ್​​​​ ಮಹಜರ್​​ ಆಗುವವರೆಗೂ ಇದ್ದರು. ಬಳಿಕ ದಿಢೀರ್​​ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಪರಮೇಶ್ವರ್ ಆಪ್ತ ಸಹಾಯಕ ರಮೇಶ್​ ಆತ್ಮಹತ್ಯೆ ಸಂಬಂಧ ಆದಾಯ ತೆರಿಗೆ ಇಲಾಖೆ ನೀಡಿದ ಸ್ಪಷ್ಟನೆ ಏನು?

ಪರಮೇಶ್ವರ್ ಮನೆ ಹಾಗೂ ಅವರ ಆಪ್ತರ ಮನೆಗಳ ಮೇಲೆ ಕಳೆದ ಮೂರು ದಿನಗಳಿಂದ ಐಟಿ ದಾಳಿ ಮುಂದುವರೆದಿದೆ. ಇದರಿಂದ ಕಂಗೆಟ್ಟು ಇಂದು ಆತ್ಮಹತ್ಯೆಗೆ ಶರಣಾಗಿರುವ ರಮೇಶ್​ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬೆನ್ನಲ್ಲೇ ನಾವು ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 131, 132ರ ಅಡಿಯಲ್ಲಿ ರಮೇಶ್ ಅವರಿಂದ ಯಾವುದೇ ಹೇಳಿಕೆಯನ್ನು ಪಡೆದಿಲ್ಲ. ಪರಮೇಶ್ವರ್ ಮನೆ ಪರಿಶೀಲನೆ ಮಾಡುವಾಗ ರಮೇಶ್ ಅಲ್ಲಿದ್ದರು. ಸಂಪೂರ್ಣ ತಪಾಸಣೆಗೂ ಸಹಕರಿಸಿದರು. ನಾವೇ ಅವರಿಂದ ಪಂಚನಾಮೆಗೆ ಹೇಳಿಕೆ ಪಡೆದುಕೊಂಡಿದ್ದೇವೆ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.----------
First published: October 12, 2019, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading