ನಾಳೆ ಬಾಗಲಕೋಟೆ, ಬೆಳಗಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಆಗಸ್ಟ್​ 27, 28ರಂದು ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್​ 28ರ ಸಂಜೆ ಬೆಂಗಳೂರಿಗೆ  ವಾಪಸ್ ಆಗಲಿದ್ದಾರೆ.

Latha CG | news18
Updated:August 25, 2019, 12:55 PM IST
ನಾಳೆ ಬಾಗಲಕೋಟೆ, ಬೆಳಗಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಸಿದ್ದರಾಮಯ್ಯ
  • News18
  • Last Updated: August 25, 2019, 12:55 PM IST
  • Share this:
ಬಾಗಲಕೋಟೆ(ಆ.25): ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ  ನಾಳೆಯಿಂದ ಮೂರು ದಿನಗಳ ಕಾಲ ಬಾಗಲಕೋಟೆ ಮತ್ತು ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ. ಹುಬ್ಬಳ್ಳಿಯುಂದ ರಸ್ತೆ ಮಾರ್ಗವಾಗಿ ಬಾಗಲಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ  ಬಾಗಲಕೋಟೆಯ ನೆರೆಪೀಡಿತ ಪ್ರದೇಶ ಮುಧೋಳಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಮುಧೋಳ ತಾಲೂಕಿನ ಚಿಚಖಂಡಿ, ಜಂಬಗಿ, ಮಳಲಿ ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಗೋಕುಲಾಷ್ಟಮಿ ವೇಳೆ ಮೊಸರಿನ ಮಡಕೆ ಒಡೆಯುವಾಗ ಅವಘಡ; 130 ಮಂದಿಗೆ ಗಾಯ

ಮಧ್ಯಾಹ್ನ 1:30ಕ್ಕೆ ತೇರದಾಳ ಮತಕ್ಷೇತ್ರದ ನಂದಗಾವ, ಡವಳೇಶ್ವರ,ಅಸಕಿ, ಹಿಪ್ಪರಗಿ ಮತ್ತಿತರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಜಮಖಂಡಿಯ ತುಬಚಿ, ಶೂರ್ಪಾಲಿ, ಟಕ್ಕಳಕಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ರಾತ್ರಿ ಜಮಖಂಡಿಯಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಆಗಸ್ಟ್​ 27, 28ರಂದು ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್​ 28ರ ಸಂಜೆ ಬೆಂಗಳೂರಿಗೆ  ವಾಪಸ್ ಆಗಲಿದ್ದಾರೆ.

First published: August 25, 2019, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading