Siddaramaiah: ನನ್ನನ್ನು ಸೋಲಿಸಲು ಕಾರಣಗಳೇನು ಹೇಳಿ: ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಕೇಳಿದ ಸಿದ್ದರಾಮಯ್ಯ

Siddaramaiah: ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದು ಕೊಂಡಿರಲಿಲ್ಲ. ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

  • Share this:
ಮೈಸೂರು (ಡಿ.18): ನನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಹಾಗೂ ಹೆಚ್ಚು ವೇದನೆ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯ.  ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದು ಕೊಂಡಿರಲಿಲ್ಲ. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನೀವು ಸೋಲಿಸಿದಂತೆ ಅವರು ನನ್ನನ್ನು ಸೋಲಿಸಿದ್ದರೆ, ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವಾನಾತ್ಮಕವಾಗಿ ಮಾತನಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಇದೇ ಮೊದಲಬಾರಿ ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಜನರು ತಮ್ಮನ್ನು ಸೋಲಿಸಲು ಕಾರಣ ಏನು ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ಮೂರು ವರ್ಷಗಳ ಬಳಿಕ ಆಗಮಿಸಿದ ಅವರು, ಗ್ರಾಮ ಜನಾಧಿಕಾರ ಸಭೆಯಲ್ಲಿ ಮಾತನಾಡಿದರು. ಇದೇ ವೇಳೆ ಕ್ಷೇತ್ರದಲ್ಲಿ ತಮ್ಮ ಸೋಲಿನ ಕುರಿತು ಆವಲೋಕನ ನಡೆಸಿದ ಅವರು, ನನ್ನ ಸೋಲಿಗೆ ಕಾರಣವನ್ನು ಪಟ್ಟಿ ಮಾಡಿ ತಿಳಿಸುವಂತೆ ಕೇಳಿದರು

ಸ್ವಪಕ್ಷೀಯರಿಂದಲೇ ಪಿತೂರಿ

ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನವರು ಕಾರಣ. ವಿರೋಧ ಪಕ್ಷಗಳ ಜೊತೆ ನಮ್ಮ ಪಕ್ಷದ ನಾಯಕರೂ ಕಾರಣ. ಅವರು ನನಗಲ್ಲ, ಪಕ್ಷಕ್ಕೆ ದ್ರೋಹ ಮಾಡಿದರು. ಈ ಬಗ್ಗೆ ಅವರೇ ಆತ್ಮವಲೋಕನ ಮಾಡಿಕೊಂಡು ಅವರೇ ಪಕ್ಷ ಬಿಟ್ಟುಬಿಡಬೇಕು. ಕ್ಷುಲಕ ಕಾರಣಕ್ಕಾಗಿ ಪಕ್ಷ ವಿರುದ್ದ ಕೆಲಸ ಮಾಡಬಾರದು.ನಾಯಕತ್ವ ಇಷ್ಟ ಇಲ್ಲ ಎಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷಕ್ಕೆ ಇಲ್ಲಿ ಯಾರು ಅನಿವಾರ್ಯ ಅಲ್ಲ. ವ್ಯಕ್ತಿಗೆ ಪಕ್ಷ ಅನಿವಾರ್ಯ ಎಂಬುದನ್ನು ಮರೆಯಬಾರದು. ನಮ್ಮವರಲ್ಲೆ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ಹೀಗಾಗಿ ನನ್ನನ್ನ ಸೋಲುವಂತೆ ಮಾಡಿದರು ಎಂದು ಸ್ವ ಪಕ್ಷ ನಾಯಕರ ವಿರುದ್ಧವೇ ಕಿಡಿಕಾರಿದರು. ಇದರ ಜೊತೆಗೆ ನನ್ನನ್ನ ಸೋಲಿಸಲು ಜೆಡಿಎಸ್- ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರು. ನನ್ನ ವಿರುದ್ದ ಬಿಜೆಪಿ ವೀಕ್ ಕ್ಯಾಂಡಿಡೇಟ್ ಹಾಕಿದರು ಸಂಚು ರೂಪಿಸಿದರು ಎಂದರು.

ಋಣ ತೀರಿಸಲು ಬಂದೆ

2006ರ ಉಪ ಚುನಾವಣೆ ಗೆಲುವಿನ ಋಣ ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಬಾದಾಮಿಗೆ ಹೋಗಲಿಲ್ಲ. ಆದರೂ, ಅಲ್ಲಿನ ಜನ ನನ್ನನ್ನ ಗೆಲ್ಲಿಸಿದರು. ನೀವು ಸೋಲಿಸಿದ ಹಾಗೇ ಅವರು ಸೋಲಿಸಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಇಲ್ಲಿ ಗೆದಿದ್ದರೆ ಮತ್ತೆ ಸಿಎಂ ಆಗುವಂತಾಹ ಅವಕಾಶವು ಇತ್ತು.ಅದು ನನ್ನ ಕೊನೆ ಚುನಾವಣೆ ಅಂದುಕೊಂಡೆ ಸ್ಪರ್ಧಿಸಿದ್ದೆ.ಆದರೆ ಜನರು ನನ್ನನ್ನ ತಿರಸ್ಕಾರ ಮಾಡಿದರು. ಯಾಕಾಗಿ ತಿರಸ್ಕರಿಸಿದರು ಅಂತ ನೀವೇ ಒಮ್ಮೆ ಯೋಚನೆ ಮಾಡಿ ಎಂದು ಮತ್ತೆ ತಮ್ಮ ಸೋಲಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ವೆಸ್ಟ್​ಎಂಡ್‌ನಲ್ಲಿ ಕುಳಿತು ಅಧಿಕಾರ ಮಾಡಿದರ ಪರಿಣಾಮ ಸರ್ಕಾರ ಪತನ

ಕುಮಾರಸ್ವಾಮಿ ನಾನು‌ ಸರ್ಕಾರ ಬೀಳಿಸಿದೆ ಎನ್ನುತ್ತಾರೆ. ನಾವು ಅವರಿಗೆ ಬೆಂಬಲಿಸದಿದ್ದರೆ ಅವರು ಸಿಎಂ ಆಗುತ್ತಿದ್ದರಾ? ನಾನು ಒಪ್ಪದೆ ಕುಳಿತಿದ್ದರೆ ಕಾಂಗ್ರೆಸ್​-ಜೆಡಿಎಸ್​ ಹೊಂದಾಣಿಕೆಯಾಗುತ್ತಿದ್ದ. ಇವರು ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ . ವೆಸ್ಟ್​ಎಂಡ್‌ನಲ್ಲಿ ಕುಳಿತು ಅಧಿಕಾರ ಮಾಡಿದರ ಪರಿಣಾಮ.ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ಕುಮಾರಸ್ವಾಮಿ.  ಯಾವುದೇ ಸಚಿವರು, ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಅಧಿಕಾರ ಕಳೆದುಕೊಂಡರು. ಯಾವ ಪತ್ರ ಕೊಟ್ಟರೂ ಒಂದಾ ಕ್ಷರ ಬರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಶಾಸಕರು ಹೊರಹೋದರು. ಇಲ್ಲದಿದ್ದರೆ 14 ಎಂಎಲ್‌ಎಗಳು ನಮ್ಮಲ್ಲೆ ಇರುತ್ತಿದ್ದರು. ನನ್ನ ವಿರುದ್ದ 5 ವರ್ಷ ಯಾವತ್ತು ಯಾವ ಎಂಎಲ್ಎಗಳು ಧ್ವನಿ ಎತ್ತಿರಲಿಲ್ಲ. ಸಚಿವ ಸ್ಥಾನದಿಂದ ಕೇಳಗಿಸಿದ್ದಕ್ಕೆ ಶ್ರೀನಿವಾಸ್ ಪ್ರಸಾದ್ ಹೋಗಿದ್ದು ಬಿಟ್ಟರೆ ಮತ್ಯಾರು ಮಾತನಾಡಿದ್ದರು ಹೇಳಿ. ಆದರೆ ಒಂದೂವರೆ ವರ್ಷ ಕುಮಾರಸ್ವಾಮಿ ವಿರುದ್ದ ಎಲ್ಲ ಎಂಎಲ್‌ಎಗಳು ಮಾತನಾಡಿದರು. ಈಗ ಸುಮ್ಮನೆ ನನ್ನ ಮೇಲೆ ಆರೋಪ‌ ಮಾಡುತ್ತಾರೆ ಎಂದು ಟೀಕಿಸಿದರು.
Published by:Seema R
First published: