ಶಾನುಬೋಗನ ಮಾತು ಕೇಳಿ ನಮ್ಮಪ್ಪ ಲಾಯರ್ ಓದಬೇಡ ಅಂದಿದ್ರು; ಮಾಜಿ ಸಿಎಂ ಸಿದ್ದರಾಮಯ್ಯ

ಮೊದಲು ರಾಜಕಾರಣದಲ್ಲಿ ನಿಮ್ಮ ಹಿತ ಕಾಯುವರು ಯಾರು. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯದ ವಿರುದ್ಧ ಇದ್ದವರಿಗೆ ಅಧಿಕಾರ ಕೊಟ್ಟು. ನಮಗೆ ನ್ಯಾಯ ಕೊಡಿ ಅಂದ್ರೆ ಕೊಟ್ಟರಾ? ದೇಶದ ರಾಜಕೀಯ ಹೇಗೆ ನಡೆಯುತ್ತಿದೆ ಗೊತ್ತಾ? ಇದನ್ನೆಲ್ಲ ತಿಳ್ಕೊಬೇಕು ಅಂದ್ರೆ ನೀವು ವಿದ್ಯೆ ಕಲಿಬೇಕು ಎಂದು ಕರೆ ನೀಡಿದರು.

HR Ramesh | news18-kannada
Updated:November 17, 2019, 3:28 PM IST
ಶಾನುಬೋಗನ ಮಾತು ಕೇಳಿ ನಮ್ಮಪ್ಪ ಲಾಯರ್ ಓದಬೇಡ ಅಂದಿದ್ರು; ಮಾಜಿ ಸಿಎಂ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
  • Share this:
ಮೈಸೂರು: ಹಿಂದುಳಿದ ಸಮುದಾಯಗಳು ಆರ್ಥಿಕವಾಗಿ ಪ್ರಬಲರಾಗಬೇಕು. ಅದಕ್ಕಾಗಿ ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಗಳಿಸಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ವ್ಯಾಪಾರೋದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭೋವಿ ಸಮುದಾಯದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನೀಗ ಈ ಕ್ಷೇತ್ರದ ಶಾಸಕನಲ್ಲ. ಹಾಗಾಗಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಹಣ ನೀಡಲಾಗುವುದಿಲ್ಲ.  ಆದರೂ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕನಾಗಿದ್ದೇನೆ. ಎಂಎಲ್​ಸಿ ಗಳ ಫಂಡ್​ನಿಂದ ಹಣ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬೋವಿ ಸಮಾಜದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಯಿತು. ಈ ವೇಳೆ ಯಾರು ಎಷ್ಟು ಹಣ ಕೊಡುತ್ತಾರೆ ಎಂಬುದನ್ನು ಮೈಕ್​ ಮೂಲಕ ಘೋಷಣೆ ಮಾಡಲಾಯಿತು. ಬಳಿಕ ಭಾಷಣ ಮಾಡಿದ ಸಿದ್ದರಾಮಯ್ಯ, ಕೇವಲ ಮೈಕ್​ನಲ್ಲಿ ಘೋಷಣೆ ಮಾಡುವುದಲ್ಲ. ಒಂದು ತಿಂಗಳಲ್ಲಿ ನೀವು ಘೋಷಣೆ ಮಾಡಿದ ಹಣ ಕೊಡಬೇಕು. ದೊಡ್ಡಸ್ತಿಕೆಗೆ ಮೈಕ್‌ನಲ್ಲಿ ಹೇಳೋದಲ್ಲ. ಒಂದು ಲಿಸ್ಟ್ ನನಗೆ ಕೊಡಿ‌ ನಾನು ಫಾಲೋಅಪ್ ಮಾಡ್ತಿನಿ ಎಂದು ಹೇಳಿದಾಗ ಕಾರ್ಯಕ್ರಮದಲ್ಲಿ ನಗೆ ಹೊನಲು ಎದಿತು.

ನಾವು ವರ್ಣಗಳಲ್ಕಿ ನಾಲ್ಕನೇ ವರ್ಗದವರು. ನಮ್ಮಲ್ಲಿ ನಾಲ್ಕು ವರ್ಣಗಳನ್ನ ಮಾಡಿಕೊಂಡಿದ್ರು. ಒಬ್ಬರು ರಕ್ಷಣೆ ಮಾಡೋರು, ಮತ್ತೊಬ್ಬರು ವೇದ ಮಂತ್ರ ಹೇಳೋರು. ಮಗದೊಬ್ಬರು ವ್ಯಾಪಾರ ಮಾಡೋರು, ನಾಲ್ಕನೇ ವರ್ಣದವರು ನಾವೆಲ್ಲ ಶೂದ್ರರು.  ನಾವು ಕುರಿ ಕಾಯ್ತಾ ಇದ್ವಿ, ನೀವು ಕಟ್ಟಡ ಕಟ್ಟೋ ಕೆಲಸ ಮಾಡಿದ್ರಿ. ನಾವೆಲ್ಲ ಅಪ್ಪ ಹಾಕಿದ್ ಮರಕ್ಕೆ ನೇತಾಕೋಬೇಕಾಗಿದೆ. ಇದನ್ನ ಬಿಟ್ಟು ನಾವು ವಿದ್ಯಾಭ್ಯಾಸದತ್ತ ಮುಖ ಮಾಡಬೇಕು. ನಾವು ಕೊಟ್ಟ ಕೊಡುಗೆ ಬಿಟ್ಟರೆ ಮತ್ಯಾರು ಮಾಡಿಲ್ಲ. ಯಡಿಯೂರಪ್ಪನ್ನು ಮಾಡಿಲ್ಲ, ಕುಮಾರಸ್ವಾಮಿನು ಮಾಡಿಲ್ಲ. ನೀವೆಲ್ಲ ಮುಂದೆ ಬರಬೇಕು ಅಂತ ಸಾಕಷ್ಟು ಕೊಡುಗೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೀನಿ. ಅದಕ್ಕೆ ನನ್ನ ಮೇಲೆ ಎಲ್ಲರು ಮುಗಿ ಬೀಳ್ತಿದ್ದಾರೆ. ಜೆಡಿಎಸ್‌ನವರು ಬೀಳ್ತಾರೆ, ಬಿಜೆಪಿಯವರು ಬೀಳ್ತಾರೆ. ಇವರಿಬ್ಬರ ಜೊತೆ 15 ಜನ ಅನರ್ಹರು ಸೇರಿಕೊಂಡಿದ್ದಾರೆ. ನನ್ನ ಜೊತೆ ಇದ್ದು ನನ್ನ ಬಗ್ಗೆ ಹೊಗಳುತ್ತಿದವರು,  ಇದೀಗಾ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ನೀವು ನನ್ನ ಮೇಲೆ‌ ಬಿದ್ರೆ ಕಷ್ಟ ಆಗುತ್ತೆ ಆಮೇಲೆ. ಮುಂದೆ ನಿಮ್ಮ ಪರವಾಗಿ ಯಾರು ಮಾತಾಡ್ತಾರೆ. ಅದಕ್ಕೆ ನೀವು ಯೋಚನೆ ಮಾಡಿ ಯಾರು ಬರಬೇಕು ಅಂತ ಹೇಳಿದರು.

ಮೊದಲು ರಾಜಕಾರಣದಲ್ಲಿ ನಿಮ್ಮ ಹಿತ ಕಾಯುವರು ಯಾರು. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯದ ವಿರುದ್ಧ ಇದ್ದವರಿಗೆ ಅಧಿಕಾರ ಕೊಟ್ಟು.
ನಮಗೆ ನ್ಯಾಯ ಕೊಡಿ ಅಂದ್ರೆ ಕೊಟ್ಟರಾ? ದೇಶದ ರಾಜಕೀಯ ಹೇಗೆ ನಡೆಯುತ್ತಿದೆ ಗೊತ್ತಾ? ಇದನ್ನೆಲ್ಲ ತಿಳ್ಕೊಬೇಕು ಅಂದ್ರೆ ನೀವು ವಿದ್ಯೆ ಕಲಿಬೇಕು ಎಂದು ಕರೆ ನೀಡಿದರು.ಇದನ್ನು ಓದಿ: ಮರ್ಯಾದೆ ಇಲ್ಲದ ಅನರ್ಹರು ಚುನಾವಣೆ ಗೆಲ್ಲಲು ಗಿಮಿಕ್ ಮಾಡುತ್ತಿದ್ದಾರೆ; ಸಿದ್ದರಾಮಯ್ಯ

ರಾಮಮಂದಿರ ಕಟ್ದೆ ಅಂತಾರೆ. ರಾಮಮಂದಿರ ಕಟ್ಟಿ ಬೇಡ ಅಂದೋರು ಯಾರು ಅದರಂತೆ ಹೊಟ್ಟೆಗೆ ಬಟ್ಟೆಗೆ ಬೇಕಲ್ವ? ನಮಗೆ ವಿದ್ಯಾಭ್ಯಾಸ ಕೊಡ್ತಾ ಇದೆಯಾ ಸರ್ಕಾರ.
ಇವೆಲ್ಲ ಈಗ ಏನು ಕೊಡ್ತಿಲ್ಲ. ನಾವೆಲ್ಲ ಏನ್ ಕೊಟ್ಟೆ ಎಂದು ಎಲ್ಲರಿಗು ಗೊತ್ತಿದೆ. ನಮ್ಮೂರಿನ ಶಾನೂಬೋಗ ಕುರುಬರು ಎಲ್ಲಾದರೂ ಲಾಯರ್ ಆಯ್ತಾರಾ ಅಂದಿದ್ದ.  ನಮ್ಮಪ್ಪ ಅವನ ಮಾತು ಕೇಳಿ ಲಾಯರ್ ಓದಬೇಡ ಅಂದಿದ್ದ. ಆದರೆ ಅವತ್ತು ನಾನು ಅವರ ಮಾತನ್ನ ಕೇಳಲಿಲ್ಲ. ಆವತ್ತು ನಾನು ಲಾಯರ್ ಮಾಡಲಿಲ್ಲ ಅಂದಿದ್ರೆ.
ಇವತ್ತು ನಾನು ಸಿಎಂ ಆಗಿ ಕೆಲಸ ಮಾಡೋಕೆ‌ ಆಗ್ತಿತ್ತಾ. ಹಾಗಾಗಿ ನೀವು ಮೊದಲು ವಿದ್ಯಾವಂತರಾಗಿ. ಇದು ಚುನಾವಣೆಗಾಗಿ ನಾನ್ ಹೇಳ್ತಿರೋ ಮಾತಲ್ಲ. ನೀವು ಚೆನ್ನಾಗಿರಬೇಕೆಂದು ಈ ಮಾತನ್ನು ಹೇಳ್ತಾ ಇದ್ದೀನಿ. ಯಾರು ನಿಮ್ಮ‌ ಹಿತೈಷಿಗಳು ಆಗಿರ್ತಾರೆ ಅನ್ನೋದು ತಿಳಿದುಕೊಳ್ಳಿ. ಯಾವ ಪಕ್ಷದವರಾದ್ರು ಸರಿ. ನಿಮ್ಮ‌ ಸಮಸ್ಯೆಗೆ ಸ್ಪಂದಿಸದಿದ್ದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಮ್ಮ‌ ಜೊತೆ ನೀವು ಸದಾ ಇರಿ.
ನಮ್ಮ‌ ನಿಮ್ಮ ಮಧ್ಯೆ ಈ ಒಪ್ಪಂದ ಹೀಗೆ ಇರಲಿ ಎಂದು ಹೇಳಿದರು.

First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ