ದಲಿತನ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರ ಅಡ್ಡಿ; ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ?; ಸಿದ್ದರಾಮಯ್ಯ ಕಿಡಿ

ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲದಲ್ಲಿ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ದಲಿತ ವ್ಯಕ್ತಿ ಶವವನ್ನು ಸುಡಲು ಸ್ಥಳೀಯ ಹಿಂದೂ ಮೇಲ್ಜಾತಿಯವರು ನಿನ್ನೆ ಅವಕಾಶ ಕಲ್ಪಿಸಿಕೊಡದೆ ಅಮಾನವೀಯವಾಗಿ ನಡೆದುಕೊಂಡಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದಿದ್ದ ದಲಿತರು ಕೊನೆಗೆ ಶವವನ್ನು ಉಚ್ಚಿಲ ಗ್ರಾಮ ಪಂಚಾಯಿತು ಎದುರೇ ಸುಡಲು ತಯಾರಿ ನಡೆಸಿದ್ದರು.

MAshok Kumar | news18-kannada
Updated:January 29, 2020, 11:10 AM IST
ದಲಿತನ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರ ಅಡ್ಡಿ; ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ?; ಸಿದ್ದರಾಮಯ್ಯ ಕಿಡಿ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜನವರಿ 29); ಹಿಂದುಗಳೆಲ್ಲಾ ಒಂದು ಎಂದು ಘೋಷಣೆ ಕೂಗುವ ಸಂಘ ಪರಿವಾರದ ಬಂದುತ್ವದ ವ್ಯಾಪ್ತಿಯಲ್ಲಿ ದಲಿತರು ಇಲ್ಲವೇ? ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲದಲ್ಲಿ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ದಲಿತ ವ್ಯಕ್ತಿ ಶವವನ್ನು ಸುಡಲು ಸ್ಥಳೀಯ ಹಿಂದೂ ಮೇಲ್ಜಾತಿಯವರು ನಿನ್ನೆ ಅವಕಾಶ ಕಲ್ಪಿಸಿಕೊಡದೆ ಅಮಾನವೀಯವಾಗಿ ನಡೆದುಕೊಂಡಿದ್ದರು. ಇಲ್ಲಿ ದಲಿತರ ಶವ ಅಂತ್ಯ ಸಂಸ್ಕಾರ ನೆರವೇರಿಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ. ಈ ಘಟನೆಯಿಂದ ರೊಚ್ಚಿಗೆದ್ದಿದ್ದ ದಲಿತರು ಕೊನೆಗೆ ಶವವನ್ನು ಉಚ್ಚಿಲ ಗ್ರಾಮ ಪಂಚಾಯಿತು ಎದುರೇ ಸುಡಲು ತಯಾರಿ ನಡೆಸಿದ್ದರು.

ಈ ಘಟನೆ ರಾಜ್ಯದಾದ್ಯಂತ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಇಂದು ಟ್ವಿಟರ್​ನಲ್ಲಿ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಉಡುಪಿ ಜಿಲ್ಲೆ ಕಾಪುವಿನ ದಲಿತ ಸಮಾಜದ ಮುಖಂಡ ಶಂಕರ್ ಅವರ ಸಾವಿನ ನಂತರ ಅಂತ್ಯಕ್ರಿಯೆಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನೀಡದಿರುವ ಅಮಾನವೀಯ ವರ್ತನೆ ಖಂಡನೀಯ.

'ಹಿಂದುಗಳೆಲ್ಲ ಒಂದು'ಎಂದು ಘೋಷಣೆ ಕೂಗುತ್ತಿರುವ ಸಂಘ ಪರಿವಾರದ ಬಂದುತ್ವದ ವ್ಯಾಪ್ತಿಯಲ್ಲಿ ದಲಿತರು ಇಲ್ಲವೇ? ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿದೆಯೇ?” ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಎಲ್ಲರನ್ನೊಳಗೊಂಡ ಭಾರತೀಯತೆಯನ್ನು ಕೊಲ್ಲಲಾಗದು; ಕೊಲೆ ಬೆದರಿಕೆ ಪತ್ರಕ್ಕೆ ಪ್ರಕಾಶ್ ರಾಜ್ ತಿರುಗೇಟು
First published:January 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ