ಜೆಡಿಎಸ್​ಗೆ ದ್ರೋಹ ಬಗೆದ ಗೋಪಾಲಯ್ಯಗೆ ಛೀಮಾರಿ ಹಾಕಿ: ಜನರಿಗೆ ಸಿದ್ದರಾಮಯ್ಯ ಕರೆ

Latha CG | news18-kannada
Updated:November 22, 2019, 9:20 PM IST
ಜೆಡಿಎಸ್​ಗೆ ದ್ರೋಹ ಬಗೆದ ಗೋಪಾಲಯ್ಯಗೆ ಛೀಮಾರಿ ಹಾಕಿ: ಜನರಿಗೆ ಸಿದ್ದರಾಮಯ್ಯ ಕರೆ
  • Share this:
ಬೆಂಗಳೂರು(ನ.22): ಉಪಚುನಾವಣೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಮಹಾಲಕ್ಷ್ಮಿ ಲೇಔಟ್​​​ನಲ್ಲಿ ಅಬ್ಬರದ ಪ್ರಚಾರಕ್ಕೆ ಇಳಿದಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಶಿವರಾಜು ಪರ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್​ ಮುಖಂಡರಾದ  ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ ಹಾಗೂ ಇತರೆ ಮುಖಂಡರು ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ.

ರೋಡ್​ ಷೋ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧ ಕಿಡಿಕಾರಿದರು. "ಅನರ್ಹ ಶಾಸಕ ಗೋಪಾಲಯ್ಯ ಜೆಡಿಎಸ್​​ಗೆ ದ್ರೋಹ ಮಾಡಿದ್ದಾರೆ. ಜೆಡಿಎಸ್​ ಮುಖಂಡರ ಬೆನ್ನಿಗೆ ಚೂರಿ ಹಾಕಿದ್ದಾರೆ. ದುಡ್ಡು ತಗೊಂಡು ಬಿಜೆಪಿಗೆ ಹೋಗಿದ್ದಾರೆ. ಇಂತಹವರಿಗೆ ಮತದಾರರು ಛೀಮಾರಿ ಹಾಕಬೇಕು," ಎಂದು ಜನರಿಗೆ ಕರೆ ನೀಡಿದರು.

ಹುಳಿಯಾರು ವಿವಾದವನ್ನು ಜೀವಂತವಾಗಿರಿಸಲು ಕುರುಬ ಸಮುದಾಯದ ಮುಖಂಡರ ಪ್ಲಾನ್​?

"ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಡಿ. ಯಾವ ಕಾರಣಕ್ಕೂ ಗೋಪಾಲಯ್ಯ ಗೆಲ್ಲಬಾರದು. ನಮ್ಮ ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ ಮಾಡಿ," ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಿಎಸ್​​ವೈ ಸರ್ಕಾರ ಕೆಲವೇ ತಿಂಗಳು ಮಾತ್ರ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. "ಯಡಿಯೂರಪ್ಪನವರೇ ಡಿ.9ರ ಬಳಿಕ ನಿಮ್ಮ ಸರ್ಕಾರ ಇರುವುದಿಲ್ಲ. 15ಕ್ಕೆ 15 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ನಮ್ಮ ಸರ್ಕಾರ ಬಂದಾಗ ಜನರಿಗೆ 10 ಕೆ.ಜಿ. ಅಕ್ಕಿ ನೀಡುತ್ತೇವೆ," ಎಂದು ಹೇಳಿದರು.

‘ಮಹಾ’ ಸರ್ಕಸ್ ಅಂತ್ಯ; ಉದ್ಧವ್ ಠಾಕ್ರೆ ಮುಂದಿನ ಸಿಎಂ; ಒಂದಾದ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್; ನಾಳೆ ಅಧಿಕೃತ ಘೋಷಣೆ

First published: November 22, 2019, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading