ರಾಜೀನಾಮೆ ವಾಪಸ್ಸು​​ ತೆಗೆದುಕೊಳ್ಳಿ: ಶಿಷ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಾಕೀತು

ಇನ್ನು ನಾಲ್ಕಾರು ಶಾಸಕರು ಹೇಳಿದಾಕ್ಷಣ ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ. ಆರಂಭದಿಂದಲೂ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ- ದೇವೇಗೌಡ

Ganesh Nachikethu | news18
Updated:July 7, 2019, 3:53 PM IST
ರಾಜೀನಾಮೆ ವಾಪಸ್ಸು​​ ತೆಗೆದುಕೊಳ್ಳಿ: ಶಿಷ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಾಕೀತು
ಮಾಜಿ ಸಿಎ ಸಿದ್ದರಾಮಯ್ಯ
  • News18
  • Last Updated: July 7, 2019, 3:53 PM IST
  • Share this:
ಬೆಂಗಳೂರು(ಜುಲೈ.07): ಒಂದೆಡೆ ಅತೃಪ್ತ ಶಾಸಕರ ಬಂಡಾಯದಿಂದ ಮೈತ್ರಿ ಸರ್ಕಾರ ಪಾರು ಮಾಡಲು ಸಿದ್ದರಾಮಯ್ಯರನ್ನು ಮತ್ತೊಮ್ಮೆ ಸಿಎಂ ಮಾಡಲೇಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇನ್ನೊಂದೆಡೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು, "ಮುಖ್ಯಮಂತ್ರಿ ಬದಲಾಗಬೇಕು ಎಂದಾದಲ್ಲಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಮಾಡೋಣ. ಸಿದ್ದರಾಮಯ್ಯ ಶಿಷ್ಯಂದಿರ ಒತ್ತಾಯಕ್ಕೆ ಮಣಿದು, ಅವರನ್ನು ಸಿಎಂ ಮಾಡಲು ಸಾಧ್ಯವಿಲ್ಲ" ಎಂದು ಖಡಕ್​​ ಸಂದೇಶ ರವಾನಿಸಿದ್ದಾರೆ.

ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಶಿಷ್ಯರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಶಾಸಕ ಭೈರತಿ ಬಸವರಾಜ್​​ಗೆ ಖುದ್ದು ಫೋನ್​​ ಮಾಡಿ , 15 ನಿಮಿಷ ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ವಾಪಸ್​​​ ಪಡೆಯುವಂತೆ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯನವರಿಗೆ, ಭೈರತಿ ಬಸವರಾಜ್ ಸಮವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಶಾಸಕ ಭೈರತಿ ಬಸವರಾಜ್​​ಗೆ ಸಿದ್ದರಾಮಯ್ಯ ಫೋನ್​​ ಮಾಡಿದ್ದರು ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರಿಗೆ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ಶಾಸಕ ಎಸ್​​.ಟಿ ಸೋಮಶೇಖರ್​​ ಮತ್ತು ಭೈರತಿ ಬಸವರಾಜ್​​ ಮೇಲೆ ಅಶ್ವಥ್ ನಾರಾಯಣ ಗರಂ ಆಗಿದ್ದಾರೆ. ಇದರಿಂದ ಬೇಸತ್ತ ಸಿದ್ದರಾಮಯ್ಯ ಶಿಷ್ಯಂದಿರು, ಬಿಜೆಪಿ ಶಾಸಕ ಅಶ್ವಥ್ ನಾರಾಯಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ನ್ಯೂಸ್​​-18 ಕನ್ನಡಕ್ಕೆ ತಿಳಿದು ಬಂದಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ?; ಸಾಧ್ಯತೆಯನ್ನು ಮುಂದಿಟ್ಟಿದೆ ಹೆಚ್​.ಡಿ. ದೇವೇಗೌಡರ ಈ ನಡೆ

ಈಗಾಗಲೇ ಸಿದ್ದರಾಮಯ್ಯನವರ ಆಪ್ತ ಶಾಸಕರ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರ ರಾಜೀನಾಮೆ ಹಿಂದೆ ಸಿದ್ದರಾಮಯ್ಯ ಕೈವಾಡ ಇರಬಹುದು ಎಂದು ಶಂಕಿಸಿದ್ಧಾರೆ.

ಇನ್ನು ನಾಲ್ಕಾರು ಶಾಸಕರು ಹೇಳಿದಾಕ್ಷಣ ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ. ಆರಂಭದಿಂದಲೂ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ ಎಂಬ ದೇವೇಗೌಡರ ಹೇಳಿಕೆ ಸಿದ್ದರಾಮಯ್ಯನವರ ವಿರುದ್ಧದ ಅಸಮಾಧಾನ ಎತ್ತಿ ತೋರುತ್ತಿದೆ.
-------------
Loading...

First published:July 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...