Siddaramaiah: ಶಾಲು, ದೋತಿ, ಪೇಟ ಹಾಕೋದು ನನ್ನ ಸಂಪ್ರದಾಯ, ಇದನ್ನ ಕೇಳಲು ನೀನ್ ಯಾರು? ಸಿದ್ದರಾಮಯ್ಯ

ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಹುಟ್ಟು ಹಾಕಿದವರೇ ಆರ್‌ಎಸ್‌ಎಸ್‌ನವರು, ನಾನು ಟವಲ್ ಹಾಕೋತಿನಿ, ದೋತಿ ಉಟ್ಕತಿನಿ ಅದು ನನ್ನ ಸಂಪ್ರದಾಯ. ಅವರು ಹಿಜಾಬ್ ಹಾಕೋತರೆ ಅದು ಅವರ ಸಂಪ್ರದಾಯ, ನಿಮಗೇನು ತೊಂದರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬಿಜೆಪಿಯವರು (BJP) ಆರ್.ಎಸ್.ಎಸ್ (RSS) ಬಗ್ಗೆ ಉತ್ತರ ಕೊಡಲಿ ಅಂತ ಹೇಳಿದ್ದೀನಿ ನಾನು ಪ್ರಶ್ನೆ ಕೇಳಿದ್ದೇನೆ. ನಾನು ಕೇಳಿದ್ದಕ್ಕೆ ಇವತ್ತಿನವರೆಗೂ ಉತ್ತರ ಕೊಟ್ಟಿಲ್ಲ. ಬಿಜೆಪಿಯವರಿಗೆ ಭಯ, ಏಕೆಂದರೆ ಸತ್ಯಕ್ಕೆ ಎಲ್ಲಿ ಉತ್ತರ ಕೊಡ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಟೀಕಿಸಿದ್ದಾರೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯಪ್ರಾಚ್ಯ ಪ್ರದೇಶದಿಂದ, ಮಧ್ಯ ಏಷ್ಯಾದಿಂದ ಬಂದು ಈಗ ಭಾರತೀಯರಾಗಿದ್ದಾರೆ. ಅದಕ್ಕೆ ನಮ್ಮದೇನು ತಕರಾರು ಇಲ್ಲ, ನಾವ್ಯಾರು ಕೂಡ ಬಿಜೆಪಿಯವರ ರೀತಿಯಲ್ಲಿ ಹೊರಗಡೆ ಹೋಗಿ ಅಂತ ಹೇಳಲು ಹೋಗಲ್ಲ. ಅವರು ನಮ್ಮ ದೇಶದ ಭಾರತೀಯರಾಗಿದ್ದಾರೆ. ಆದ್ದರಿಂದ ಅವರು ಇಲ್ಲೇ ಇರಬೇಕು ಎಂದರು.

RSS ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೀನಿ. ಸಿಎಂ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ನಾನು ದ್ರಾವಿಡ ಪಂಥಕ್ಕೆ ಸೇರಿದವನು ಅಂತ ಹೇಳಿದ್ದೀನಿ. ಇದರಲ್ಲಿ ತಪ್ಪೇನಿದೆ. ದ್ರಾವಿಡರು ಈ ದೇಶದ ಮೂಲ ನಿವಾಸಿಗಳು. ಇದು ಸತ್ಯ ಅಲ್ಲ ಎಂದು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ದೇಶ ಬಿಟ್ಟು ಓಡಿ ಹೋಗಬೇಕಾ?

ಕಾಂಗ್ರೆಸ್ ವರಿಷ್ಠರ ಮೂಲ ಎಲ್ಲಿಯದು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ಇಟಾಲಿಯನ್ ನವರು, ಇಲ್ಲಿ ಬಂದು ಸಿಟಿಜನ್ ಶಿಫ್ ತೆಗೆದುಕೊಂಡು ಈ ದೇಶದವರಾಗಿದ್ದಾರೆ. ಈ ದೇಶದವರನ್ನು ಮದುವೆಯಾಗಿದ್ದಾರೆ, ಈಗೇನು ದೇಶ ಬಿಟ್ಟು ಓಡಿ ಹೋಗಬೇಕಾ? ಈ ದೇಶದವರನ್ನು ಮದುವೆಯಾಗಿ ಇಲ್ಲಿ ಇರಬೇಕೋ, ಬೇಡವೋ, ನಮ್ಮ ದೇಶದವರು ಅಮೆರಿಕಾ, ಲಂಡನ್ ಬೇರೆ ದೇಶಗಳಿಗೆ ಹೋಗಿದ್ದಾರೆ. ಅವರೆಲ್ಲಾ ಅಲ್ಲಿ ಸಿಟಿಜನ್ ಆಗಿದ್ದಾರೆ, ಅವರನ್ನು ಏನಂತ ಕರಿಬೇಕು, ಅವರನ್ನೆಲ್ಲಾ ಅಲ್ಲಿಂದ ಓಡಿಸಬೇಕಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Ayodhya Bus Accident: ಅಯೋಧ್ಯೆ ಬಸ್ ಅಪಘಾತದಲ್ಲಿ ಕನ್ನಡಿಗರ ಸಾವು; ಗಾಯಾಳುಗಳ ನೆರವಿಗೆ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ

ಸೋಮಶೇಖರ್ ಏನು RSS ನವರಾ?

ಸೋನಿಯಾಗಾಂಧಿ ಇಟಲಿ ದೇಶದವರು, ಇಲ್ಲಿ ಬಂದು ಭಾರತದ ರಾಜೀವ್‌ ಗಾಂಧಿ ಅವರನ್ನು ಮದುವೆಯಾಗಿ ಈ ದೇಶದವರಾಗಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದರು. ಆರ್.ಎಸ್.ಎಸ್. ಬಗ್ಗೆ ಸಿದ್ದರಾಮಯ್ಯಗೆ ಏನು ಗೊತ್ತಿಲ್ಲ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು ಎಸ್.ಟಿ.ಸೋಮಶೇಖರ್ ಕಾಂಗ್ರೆಸ್‌ನಲ್ಲಿ, ನಮ್ಮ ಜೊತೆಯಲ್ಲಿದ್ದವರು. ಅಲ್ಲಿಗೆ ಹೋಗಿ RSS ಅವರನ್ನು ಹೊಗಳಲು ಶುರು ಮಾಡಿದ್ದಾರೆ‌. ಸೋಮಶೇಖರ್ ಏನು RSS ನವರಾ?

ಎಸ್.ಟಿ.ಸೋಮಶೇಖರ್ ಮೂಲತಃ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರ್ಪಡೆಗೊಂಡು ಮಿನಿಸ್ಟರ್ ಆಗಿದ್ದಾರೆ ಎಂದು ಕುಟುಕಿದರು.

ಈಶ್ವರಪ್ಪ ವಿರುದ್ಧ ವಾಗ್ದಾಳಿ

ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಸಂಸ್ಕೃತಿನೇ ಇಲ್ಲಾ, ಮೋಸ್ಟ್ ಅನ್‌ ಕಲ್ಚರ್ಡ್‌ ಮ್ಯಾನ್ ಇನ್ ಪಾಲಿಟಿಕ್ಸ್, ಒಂದು ಪಾರ್ಲಿಮೆಂಟರಿ ಲಾಂಗ್‌ವೇಜ್ ಇದೆ. ಪಾರ್ಲಿಮೆಂಟರಿ ಲಾಂಗ್‌ವೇಜ್ ಪ್ರಕಾರ ಮಾತನಾಡಬೇಕು. ಅದು ಇಲ್ಲದೇ ಹೋದರೆ ಅವನು ಪ್ರಾಣಿಗಳಿಗೆ ಸಮಾನ ಎಂದು ಕಿಡಿಕಾರಿದರು.

ನಾನು ಸಿಎಂ ಆಗಿದ್ದಾಗ ಕುರುಬ ಸಮಾಜದವರು ನಮ್ಮನ್ನು ಎಸ್ ಟಿಗೆ  ಸೇರಿಸಿ ಎಂದು ಅರ್ಜಿ ಕೊಟ್ಟಿದ್ದರು. ನಾನು ಅದನ್ನು ಕುಲಶಾಸ್ತ್ರ ಅಧ್ಯಯನ ಮಾಡಿ ಕೊಡಿ ಅಂತ ಹೇಳಿದ್ದೆ. ಎಸ್ ಟಿಗೆ ಸೇರಿಸಲು ಆಧಾರ ಬೇಕು. ಅದಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಲು ಮೈಸೂರಿನಲ್ಲಿರುವ ಇನ್ಸ್ಟಿಟ್ಯೂಟ್‌ಗೆ ಕಳುಹಿಸಿಕೊಟ್ಟಿದ್ದೆ. ಅವರು ಇನ್ನೂ ವರದಿ ಕೊಟ್ಟಿಲ್ಲ.

ನಿಮ್ಮದೇ ಸರ್ಕಾರ ಇದೆ STಗೆ ಸೇರಿಸಿ

ಈಶ್ವರಪ್ಪ ಕುರುಬರನ್ನು STಗೆ ಸೇರಿಸಿ ಅಂತ ಪಾದಯಾತ್ರೆ ಮಾಡಿದ್ರು, ನಾನು ಅದಕ್ಕೆ ಈಶ್ವರಪ್ಪನಿಗೆ ಹೇಳಿದೆ ಎಂಟು ವರ್ಷದಿಂದ ದೆಹಲಿಯಲ್ಲಿ ನಿಮ್ಮ ಸರ್ಕಾರನೇ ಇದೆ. ಕರ್ನಾಟಕದಲ್ಲೂ ನಿಮ್ಮದೇ ಸರ್ಕಾರ ಇದೇ ಕೂಡಲೇ ಮಾಡ್ಸಿ ಅಂತ ಒತ್ತಾಯ ಮಾಡಿದ್ದೀನಿ ಎಂದರು.

ಇದು ನನ್ನ ಸಂಪ್ರದಾಯ,ನಿಮಗೇನು ತೊಂದರೆ?

ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಹುಟ್ಟು ಹಾಕಿದವರೇ ಆರ್‌ಎಸ್‌ಎಸ್‌ನವರು, ನಾನು ಟವಲ್ ಹಾಕೋತಿನಿ, ದೋತಿ ಉಟ್ಕತಿನಿ ಅದು ನನ್ನ ಸಂಪ್ರದಾಯ. ಅವರು ಹಿಜಾಬ್ ಹಾಕೋತರೆ ಅದು ಅವರ ಸಂಪ್ರದಾಯ, ನಿಮಗೇನು ತೊಂದರೆ.

ನಾನು ಟವಲ್ ಕಟ್ಕತಿನಿ, ಶಾಲು ಹಾಕೋತಿನಿ ಅದು ನನ್ನ ಸಂಪ್ರದಾಯ ಜುಬ್ಬ ಹಾಕೋತಿನಿ. ಇವರು ಪ್ಯಾಂಟ್, ಶರ್ಟ್ ಹಾಕೊತರೆ ಅದು ಇವರ ಸಂಪ್ರದಾಯ ನೀನ್ ಯಾವನು ಕೇಳೋಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Belagavi: ಬೆಳಗಾವಿಗೂ ಕಾಲಿಟ್ಟ ಮಸೀದಿ, ಮಂದಿರ ವಿವಾದ; ಕುಂದಾನಗರಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿಕೆಯ ಕಿಚ್ಚು

ಜೋಶಿಗೆ ಪಾಪ ಏನೂ ಗೊತ್ತಿಲ್ಲ

ಕಾಂಗ್ರೆಸ್‌ ನ ವರಿಷ್ಠರಿಗೆ ಹತ್ತಿರವಾಗಲು ಸಿದ್ದರಾಮಯ ಈ ರೀತಿ ಮಾಡುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಟಾಂಗ್ ಕೊಟ್ಟ ಸಿದ್ದರಾಮಯ್ಯ ಯಾರು ಹೇಳಿದ್ದು, ನಾನು ಹತ್ತಿರ ಇಲ್ಲದೇನೆ ಸಿಎಂ ಆಗಿದ್ದನಾ? ಪಾಪ ಆ ಜೋಶಿಗೆ ಗೊತ್ತಾಗಬೇಕು, ನಾನು ಕಾಂಗ್ರೆಸ್‌ ನಲ್ಲಿ ಹತ್ತಿರ ಇರೋದ್ರಿಂದಲೇ ನನ್ನ ಸಿಎಂ ಮಾಡಿದ್ದು, ಕಾಂಗ್ರೆಸ್‌ ನವರೆಲ್ಲ ಒಪ್ಕೊಂಡಿರದ್ರಿಂದಲೇ ನನ್ನನ್ನ ಚೀಫ್ ಮಿನಿಸ್ಟರ್ ಮಾಡಿದ್ದು. ಜೋಶಿಗೆ ಏನು ಗೊತ್ತಿಲ್ಲ ಪಾಪ, ಜನ ತೀರ್ಮಾನ ಮಾಡದು ಎಂದರು.
Published by:Mahmadrafik K
First published: