‘ಡಿಕೆಶಿ ಯಾವುದಕ್ಕೂ ಹೆದರಿಲ್ಲ, ಧೈರ್ಯ ಮೆಚ್ಚಲೇಬೇಕು‘: ಮಾಜಿ ಸಿಎಂ ಸಿದ್ದರಾಮಯ್ಯ

ಡಿ.ಕೆ ಶಿವಕುಮಾರ್​​ ಧೈರ್ಯ ಮೆಚ್ಚಲೇಬೇಕು. ಸದ್ಯ ಇವರ ಆರೋಗ್ಯ ಸ್ಥಿರವಾಗಿದೆ. ಯಾವುದಕ್ಕೂ ಹೆದರದೆ ಡಿಕೆಶಿ ಧೈರ್ಯವಾಗಿದ್ದಾರೆ. ಇನ್ನು ಕರ್ನಾಟಕ ಉಪಚುನಾವಣೆ ಸಂಬಂಧ ಚರ್ಚೆ ನಡೆಸಿಲ್ಲ. ಮುಂದೆ ಕಾಂಗ್ರೆಸ್​​ ಶಾಸಕರನ್ನು ಕರೆದು ಸಭೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

news18-kannada
Updated:October 27, 2019, 2:16 PM IST
‘ಡಿಕೆಶಿ ಯಾವುದಕ್ಕೂ ಹೆದರಿಲ್ಲ, ಧೈರ್ಯ ಮೆಚ್ಚಲೇಬೇಕು‘: ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ ಮತ್ತು ಸಿದ್ದರಾಮಯ್ಯ ಭೇಟಿ
  • Share this:
ಬೆಂಗಳೂರು(ಅ.27): ಇಡಿ ಪ್ರಕರಣವೊಂದರಲ್ಲಿ ತಿಹಾರ್​​ ಜೈಲಿಗೆ ಹೋಗಿ ಬಂದ ಮೇಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​​​​ ಮತ್ತಷ್ಟು ಸದೃಢರಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು ಡಿ.ಕೆ ಶಿವಕುಮಾರ್​​ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, "ಡಿಕೆಶಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಒಂದೂವರೆ ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಡಿಕೆಶಿಗೆ ರಕ್ತದೊತ್ತಡ ಹೆಚ್ಚಾಗಿತ್ತು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ" ಎಂದರು.

ಡಿ.ಕೆ ಶಿವಕುಮಾರ್​​ ಧೈರ್ಯ ಮೆಚ್ಚಲೇಬೇಕು. ಸದ್ಯ ಇವರ ಆರೋಗ್ಯ ಸ್ಥಿರವಾಗಿದೆ. ಯಾವುದಕ್ಕೂ ಹೆದರದೆ ಡಿಕೆಶಿ ಧೈರ್ಯವಾಗಿದ್ದಾರೆ. ಇನ್ನು ಕರ್ನಾಟಕ ಉಪಚುನಾವಣೆ ಸಂಬಂಧ ಚರ್ಚೆ ನಡೆಸಿಲ್ಲ. ಮುಂದೆ ಕಾಂಗ್ರೆಸ್​​ ಶಾಸಕರನ್ನು ಕರೆದು ಸಭೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಪಕ್ಷ ಭೇದ ಮರೆತು ಬೆಂಬಲ ನೀಡಿದ್ದೀರಿ; ಭಾವುಕರಾದ ಡಿಕೆಶಿ

ಇತ್ತೀಚೆಗಷ್ಟೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡು ತಿಂಗಳು ತಿಹಾರ್​​ ಜೈಲಿನಲ್ಲಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟ್​​ ಜಾಮೀನು ನೀಡಿತ್ತು. ಜಾಮೀನು ಸಿಕ್ಕ ಎರಡು ದಿನಗಳ ಬಳಿಕ ಡಿಕೆಶಿ ದೆಹಲಿಯಿಂದ  ನಿನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದರು. ಕಾಂಗ್ರೆಸ್​ ಹಿರಿಯ ನಾಯಕರು ಸೇರಿದಂತೆ ಅಭಿಮಾನಿಗಳು ಡಿಕೆಶಿಗೆ ಅದ್ದೂರಿ ಸ್ವಾಗತ ಮಾಡಿದರು. ಮಾಜಿ ಎಚ್​​.ಡಿ ಕುಮಾರಸ್ವಾಮಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೃಷ್ಣಭೈರೇಗೌಡ ಸೇರಿದಂತೆ ಹಲವು ನಾಯಕರು ಡಿಕೆಶಿಯನ್ನು ಸ್ವಾಗತಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅದ್ಧೂರಿ ಮೆರವಣಿಗೆ ಮೂಲಕ ಅಭಿಮಾನಿಗಳು ಡಿ.ಕೆ ಶಿವಕುಮಾರ್​ರನ್ನು ಕೆಪಿಸಿಸಿ ಕಚೇರಿಗೆ ಕರೆತಂದರು. ಮಧ್ಯ ರಾತ್ರಿವರೆಗೂ ಸಾಲುಗಟ್ಟಿ ಅಭಿಮಾನಿಗಳು ಡಿ.ಕೆ.ಶಿವಕುಮಾರ್​​ರನ್ನು ಭೇಟಿ ಮಾಡುತ್ತಿದ್ದರು. ಇಂದು ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಡಿಕೆಶಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
-------------
First published: October 27, 2019, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading