ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ 'ಹೌದು ಹುಲಿಯಾ' ಖ್ಯಾತಿಯ ಪೀರಪ್ಪ; ಈತನೇ ನಿಜವಾದ ಹುಲಿಯಾ ಎಂದ ಮಾಜಿ ಸಿಎಂ

ಕೆಲವು ದಿನಗಳಿಂದ  'ಹೌದು ಹುಲಿಯಾ' ಎಂಬ ಡೈಲಾಗ್​​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಇತ್ತೀಚೆಗೆ ಕಾಗವಾಡದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವ ವೇಳೆ, ಫಕೀರಪ್ಪ 'ಹೌದು ಹುಲಿಯಾ' ಎಂದು ಹೇಳಿದ್ದರು. ಬಳಿಕ ಈ ಡೈಲಾಗ್​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಹೌದು ಹುಲಿಯಾ ಖ್ಯಾತಿಯ ಪೀರಪ್ಪ

ಹೌದು ಹುಲಿಯಾ ಖ್ಯಾತಿಯ ಪೀರಪ್ಪ

  • Share this:
ಬೆಂಗಳೂರು(ಡಿ.16): ಇತ್ತೀಚೆಗೆ ಕಾಗವಾಡದ ಕಾಂಗ್ರೆಸ್ ಸಮಾವೇಶದಲ್ಲಿ ವೈರಲ್ ಆಗಿದ್ದ ‘ಹೌದು ಹುಲಿಯಾ’ ಡೈಲಾಗ್ ಖ್ಯಾತಿಯ ಪೀರಪ್ಪ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪೀರಪ್ಪ ತಮ್ಮ ಮೆಚ್ಚಿನ ನಾಯಕನ ಆರೋಗ್ಯ ವಿಚಾರಿಸಿದ್ದಾರೆ.

ಹೃದಯ ಶಸ್ತ್ರ ಚಿಕಿತ್ಸೆಯಾಗಿ ಆಸ್ಪ್ರತ್ರೆ ಸೇರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ,  ಡಿಸ್ಚಾರ್ಜ್​ ಆಗಿ ಮನೆ ಸೇರಿದ್ದಾರೆ. ಹೀಗಾಗಿ ಪೀರಪ್ಪ ತಮ್ಮ ನೆಚ್ಚಿನ ನಾಯಕನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಕುಶಲೋಪರಿ ವಿಚಾರಿಸಿದ್ಧಾರೆ.ಟ್ವಿಟರ್​ನಲ್ಲಿ ಹೌದೋ ಹುಲಿಯಾ ಪದ ಬಳಸಿಕೊಂಡು ಅನರ್ಹರು, ಬಿಜೆಪಿ ಟೀಕೆ ಮಾಡಿದ ಕಾಂಗ್ರೆಸ್

ಇನ್ನು, ತನ್ನ ಆರೋಗ್ಯ ವಿಚಾರಿಸಲು ಬಂದಿದ್ದ ಕಾಗವಾಡದ ಪೀರಪ್ಪ ಕಟ್ಟಿಮನಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ಧಾರೆ. ಟ್ವೀಟ್​ ಮಾಡಿರುವ ಅವರು, ಪೀರಪ್ಪನನ್ನು ನಿಜವಾದ ಹುಲಿಯಾ ಎಂದು ಹೊಗಳಿದ್ದಾರೆ. "ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ‌ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ'," ಎಂದು ಶ್ಲಾಘಿಸಿದ್ದಾರೆ.

ಕೆಲವು ದಿನಗಳಿಂದ  'ಹೌದು ಹುಲಿಯಾ' ಎಂಬ ಡೈಲಾಗ್​​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಇತ್ತೀಚೆಗೆ ಕಾಗವಾಡದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವ ವೇಳೆ, ಫಕೀರಪ್ಪ 'ಹೌದು ಹುಲಿಯಾ' ಎಂದು ಹೇಳಿದ್ದರು. ಬಳಿಕ ಈ ಡೈಲಾಗ್​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಕನ್ನಡ ‘ಅಸ್ಮಿತೆ’ಗೆ ಆಘಾತ; ಕಸಾಪ ಹೊಸ ಕಟ್ಟಡಕ್ಕೆ ಭೂಮಿ ಭಾಗ್ಯ ಇಲ್ಲ; ಬಿಬಿಎಂಪಿಯಿಂದ ಅನುಮೋದನೆ ರದ್ದು
Published by:Latha CG
First published: