Karnataka Politics: ಸಿದ್ದು 'ಕೈ' ಸೇರಿದ ‘40%’ ಅಸ್ತ್ರ; ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ಹೋರಾಟ

ಕಾಂಗ್ರೆಸ್​​ ರಥಯಾತ್ರೆ ಬಗ್ಗೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಕವರ್ ಮಾಡುತ್ತೇವೆ. ಭಾರತ್ ಜೋಡೋ ಯಾತ್ರೆ ಬಳಿಕ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

 • Share this:
  ಬಿಜೆಪಿ ಸರ್ಕಾರಕ್ಕೆ (Karnataka BJP Government) 40% ಕಮಿಷನ್ (Commission Allegation) ಕಪ್ಪು ಚುಕ್ಕೆ ಅಂಟಿಕೊಂಡಿದ್ರೆ. ಮತ್ತೊಂದೆಡೆ ಇದನ್ನೇ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ (Congress) ತಂತ್ರ ಹೆಣೆದಿದೆ. 2023ರ ಚುನಾವಣೆಗೆ (Assembly Election 2023) ಕಾಂಗ್ರೆಸ್‌ ಭಾರೀ ಸಿದ್ಧತೆ ಮಾಡಿಕೊಳ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ರಥಯಾತ್ರೆಗೆಂದೇ ಪ್ರತ್ಯೇಕ ಬಸ್​ ವ್ಯವಸ್ಥೆ ಮಾಡಲಾಗಿದೆ. 40% ಕಮಿಷನ್​ ಆರೋಪ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹೋರಾಡಲಿದ್ದು, ನವೆಂಬರ್ ಅಂತ್ಯಕ್ಕೆ ಸಿದ್ದರಾಮಯ್ಯ ಅವರ ರಥಯಾತ್ರೆ (Siddaramaiah Rathayatre) ಶುರುವಾಗುತ್ತೆ ಎನ್ನಲಾಗ್ತಿದೆ. ಈ ಹೋರಾಟ ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ನಡೆಯಲಿದೆ ಎನ್ನಲಾಗ್ತಿದೆ.

  ಕಾಂಗ್ರೆಸ್​​ ರಥಯಾತ್ರೆ ಬಗ್ಗೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಕವರ್ ಮಾಡುತ್ತೇವೆ. ಭಾರತ್ ಜೋಡೋ ಯಾತ್ರೆ ಬಳಿಕ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

  ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಡಿಕೆಶಿ ಪಾದಯಾತ್ರೆ ಮಾಡಿದ್ರು, ಈಗ ಡಿಕೆಶಿಗೆ ಗೊತ್ತಾಗದಂತೆ, ಸಿದ್ದರಾಮಯ್ಯ ಬಸ್ ಯಾತ್ರೆ ಮಾಡ್ತಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.

  ಆರ್.ವಿ ದೇಶಪಾಂಡೆಗೆ ಡಿಕೆಶಿ ಶಾಕ್!

  ರಾಜ್ಯ ಕಾಂಗ್ರೆಸ್‌ನಲ್ಲಿ ಕಿತ್ತಾಟ ಮತ್ತೆ ಜೋರಾಗಿದೆ. ಡಿಕೆಶಿ- ಸಿದ್ದು ಬಣಗಳ ನಡುವೆ ಮುಸುಕಿನ ಗುದ್ದಾಟ ದಿನೇ ದಿನೇ ಹೆಚ್ಚಾಗ್ತಿದ್ದು, ಇದಕ್ಕೆ ಪುಷ್ಠಿ ಎನ್ನುವಂತೆ ಕಾಂಗ್ರೆಸ್‌ ಹಿರಿಯ ನಾಯಕರ ಆರ್.ವಿ ದೇಶಪಾಂಡೆ ಅವರನ್ನು ‘ಭಾರತ್​ ಜೋಡೋ’ ಸಮಿತಿಯಿಂದ ಕೈ ಬಿಡಲಾಗಿದೆ.

  ‘ಭಾರತ್​ ಜೋಡೋ’ ಯಾತ್ರೆಯಲ್ಲಿ ದೇಶಪಾಂಡೆ ಅವರಿಗೆ ಯಾವುದೇ ಜವಬ್ದಾರಿಯನ್ನು ನೀಡಿಲ್ಲ. ಇನ್ನು ಇತ್ತೀಚೆಗಷ್ಟೇ ಭಾರತ್‌ ಜೋಡೋಗೆ ಜನ ಸೇರಿಸೋದಕ್ಕೆ ಆಗಲ್ಲ ಎಂದಿದ್ದ ದೇಶಪಾಂಡೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಹಿರಂಗವಾಗಿ ಗುಡುಗಿದ್ರು. ಈಗ ಅದಕ್ಕೆ ಪುಷ್ಟಿ ನೀಡುವಂತೆ ದೇಶಾಪಾಂಡೆ ಅವರನ್ನು ಸಮಿತಿಯಿಂದ ದೂರವಿಡಲಾಗಿದೆ.

  ಗುಂಡೂರಾವ್ V/S ಡಿ.ಕೆ. ಶಿವಕುಮಾರ್

  ಕಾಂಗ್ರೆಸ್ ಒಳಗೆ ಟಿಕೆಟ್ ಹಂಚಿಕೆ ಸಮರ ಜೋರಾಗಿದೆ. ಮತ್ತೊಂದು ಬಾರಿ ಡಿ.ಕೆ ಶಿವಕುಮಾರ್​​ಗೆ ದಿನೇಶ್​​ ಗುಂಡೂರಾವ್ ಪಂಚ್​ ಕೊಟ್ಟಿದ್ದಾರೆ. ಟಿಕೆಟ್ ಹಂಚಿಕೆ ಒಬ್ಬರ ಕೈಲೇ ಇಲ್ಲ ಎಂದು ಗುಡುಗಿದ್ದಾರೆ.

  ಇದನ್ನೂ ಓದಿ:  Bellary VIMS Case: ಸಾವನ್ನಪ್ಪಿದ್ದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ-ಸುಧಾಕರ್

  ಟಿಕೆಟ್ ನೀಡಲು ಚುನಾವಣೆ ಸಮಿತಿ ಇದೆ. ಟಿಕೆಟ್ ಹಂಚಿಕೆಗೆ ರಾಜ್ಯ, ಕೇಂದ್ರ ಸಮಿತಿಗಳಿವೆ. ಸ್ಕ್ರೀನಿಂಗ್ ಕಮಿಟಿ ಇದೆ. ಎಲ್ಲರ ಅಭಿಪ್ರಾಯ ‌ಪಡೆದು ಹೈಕಮಾಂಡ್ ಟಿಕೆಟ್ ಕೊಡುತ್ತೆ. ಯಾರೋ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಆಗುತ್ತೆ ಅಂತ ಹೇಳಬಾರದು ಎಂದು ಡಿಕೆ ಶಿವಕುಮಾರ್​ಗೆ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.

  ಪ್ರತಿಯೊಬ್ಬರು ಕೆಲವು ದಿ‌ನ ಕಷ್ಟಪಡಿ-ಡಿಕೆಶಿ

  ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಯವರಲ್ಲಿ ನಡುಕ ಹುಟ್ಟಿಸಲಿಲ್ಲವಾ? ಬಸ್‌ನಲ್ಲಿ ಜನರನ್ನು ಕರೆದುಕೊಂಡು ಬರಲಿಲ್ಲವಾ? ಯಾರಿಗೂ ನಾನು ನಿದ್ದೆ ಮಾಡಲು ಬಿಡುವುದಿಲ್ಲ. ಪ್ರತಿಯೊಬ್ಬರು ಕೆಲವು ದಿ‌ನ ಕಷ್ಟಪಡಿ. ದಾವಣಗೆರೆಗೆ ಹಿಂದಿನ ದಿನ ರಾತ್ರಿ ಹೊರಟಿದ್ದೀರಿ ಅಲ್ವಾ? ಅದೇ ರೀತಿ ಇಲ್ಲಿಗೂ ಬನ್ನಿ, ಮುಖ ತೋರಿಸಿ ತಿಂಡಿ ತಿಂದುಕೊಂಡು ಹೋಗುವುದಲ್ಲ. ಕೊನೆಯವರೆಗೂ ಎಲ್ಲರೂ ಇರಬೇಕು. ಯಾರು ಬಂದರೂ ಯಾರ ಬರಲಿಲ್ಲ ಎಲ್ಲಾ ಲೆಕ್ಕಾ ಹಾಕಿಸುತ್ತೇನೆ. ಎಲ್ಲದಕ್ಕೂ ಒಂದೊಂದು‌ ಕಮಿಟಿ ಮಾಡಲಾಗಿದೆ ಎಂದು ಭಾಷಣದಲ್ಲೇ ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ:  Basanagouda Patil Yatnal: ನಾನು ಸಿಎಂ ಆದರೆ ಒಬ್ಬರನ್ನು ಜೈಲಿಗೆ ಕಳಿಸ್ತೇನೆ ಎಂದ ಯತ್ನಾಳ್! ಹಾಗಿದ್ರೆ ಆ ವ್ಯಕ್ತಿ ಯಾರು?

  ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತನ್ನಿ

  ಈ ಜಿಲ್ಲೆಯವರು 10 ರಿಂದ 15 ಸಾವಿರ ಜನ ಕರೆದುಕೊಂಡು ಬರಬೇಕು. ಸಿದ್ದರಾಮಯ್ಯ 5 ಸಾವಿರ ಹೇಳಿದರು ಅದು ದೂರದ ಜಿಲ್ಲೆಯ ಶಾಸಕರಿಗೆ. ಒಬ್ಬೊಬ್ಬ ನಾಯಕ ನೂರು ಜನರನ್ನು ಕರೆದುಕೊಂಡು ಬನ್ನಿ. ವಾಹನವನ್ನು ನಾಯಕರು ಕೊಡುತ್ತಾರೆ. ನಮ್ಮ ಜಿಲ್ಲೆಯವರು ಬರುತ್ತಾರೆ ನೀವು ನಿಮ್ಮ ಮರ್ಯಾದೆ ಕಾಪಾಡಿಕೊಳ್ಳಿ. ನೀವು ಬರಲಿಲ್ಲ ಅಂದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತದೆ. ನನ್ನ ಮರ್ಯಾದೆ ಹೋಗುತ್ತದೆ, ನಿಮ್ಮ ಮರ್ಯಾದೆ ಹೋಗುತ್ತದೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದರೆ.
  Published by:Mahmadrafik K
  First published: