Siddaramaiah: ಶೂ ಧರಿಸಿಯೇ ಭೂಮಿ ಪೂಜೆ; ಪಕ್ಷಕ್ಕೆ ಬರೋರಿಗೆ Condition Apply ಅಂದ್ರು ಸಿದ್ದರಾಮಯ್ಯ

ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ಸರ್ಕಾರಿ ಪ್ರೌಢ ಶಾಲಾ ಕಟ್ಟಡದ ಭೂಮಿ ಪೂಜೆ (Bhoomi Pooja) ವೇಳೆ ಶೂ ಧರಿಸಿಯೇ ನಿಂತಿದ್ದರು. ಇದರ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲಿಗರು ಸಹ ಶೂ ಧರಿಸಿಯೇ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಭೂಮಿ ಪೂಜೆ

ಭೂಮಿ ಪೂಜೆ

  • Share this:
ಬಾಗಲಕೋಟೆ: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Former CM Siddaramaiah) ಸ್ವಕ್ಷೇತ್ರ ಬಾದಾಮಿ (Badami) ಪ್ರವಾಸದಲ್ಲಿದ್ದಾರೆ. ಸೋಮವಾರ ಜಿಲ್ಲೆಗೆ ಆಗಮಿಸಿರುವ ಸಿದ್ದರಾಮಯ್ಯ ಗುಳೇದಗುಡ್ಡ (Guledagudda) ಪುರಸಭೆಯಲ್ಲಿ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಜೆಡಿಎಸ್  (JDS) ಬೆಂಬಲ ನೀಡಿದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಇಂದು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ಸರ್ಕಾರಿ ಪ್ರೌಢ ಶಾಲಾ ಕಟ್ಟಡದ ಭೂಮಿ ಪೂಜೆ (Bhoomi Pooja) ವೇಳೆ ಶೂ ಧರಿಸಿಯೇ ನಿಂತಿದ್ದರು. ಇದರ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲಿಗರು ಸಹ ಶೂ ಧರಿಸಿಯೇ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಯವರು & ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಕಾಂಗ್ರೆಸ್ ಗೆ ಬತಾ೯ರ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕೈ ಪಕ್ಷ ಸೇರುವವರಿಗೆ ಸ್ವಾಗತ . ಆದ್ರೆ ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಬರಬೇಕು ಎಂದು ಕಂಡಿಷನ್ ಹಾಕಿದರು.

ಅನ್ ಕಂಡಿಷನಲ್ ಆಗಿ ಪಕ್ಷ ಬಂದ್ರೆ ಸ್ವಾಗತ

ಪಕ್ಷ ಸೇರುವವರು ಪಕ್ಷದ ಸಿದ್ದಾಂತ ಒಪ್ಪಿ ಬರುವಂತವರು ಇರಬೇಕು.  ಯಾವುದೇ ಕಂಡಿಷನ್ ಇರದೇ ಬರಬೇಕು. ಅಂದ್ರೆ ಅನ್ ಕಂಡಿಷನಲ್ ಆಗಿ ಬರಬೇಕು. ಪಕ್ಷದ ಸಿದ್ದಾಂತ ಮತ್ತು ನಾಯಕತ್ವ ಒಪ್ಪಿಕೊಳ್ಳಬೇಕು. ಇದನ್ನೆಲ್ಲಾ ಒಪ್ಪಿಕೊಂಡು ಬಂದವರಿಗೆ ಸ್ವಾಗತ ಎಂದು ಹೇಳಿದರು.

ಇದನ್ನೂ ಓದಿ:  Bagalkote: ಏ ನಾಗರಾಜ್, ಇದನ್ನ ಇಮ್ಮಿಡಿಯೇಟ್ ಮಾಡಿಕೊಡು: ಸಚಿವ MTBಗೆ ಸಿದ್ದರಾಮಯ್ಯ ಕರೆ 

ಚುನಾವಣೆಗೆ ಕಾಂಗ್ರೆಸ್ ಸಿದ್ಧ

ಈಗಲೂ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದ್ರೆ ಅವರ ಹೆಸರು ಮಾತ್ರ ನಾನು ಹೇಳಲ್ಲ. ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ.  ವಿಧಾನಸಭೆಗೂ ರೆಡಿ ಇದ್ದೇವೆ, ಜಿಲ್ಲಾ ಪಂಚಾಯಿತಿ ತಾಲೂಕಾ ಪಂಚಾಯತಿಗೂ ರೆಡಿ ಇದ್ದೀವಿ. ಯಾವುದೇ ಆದರೂ ಪಕ್ಷ ತಯಾರಿ ಇರುತ್ತೆ ಎಂದರು.ಬಾದಾಮಿ ಜನರು ಸಿದ್ದರಾಮಯ್ಯ ಇಲ್ಲೇ ಇದ್ದು ಸಿಎಂ ಆಗಬೇಕು ಎನ್ನುವ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಡೋಣ ಇನ್ನೂ ಒಂದೂಕಾಲ ವರ್ಷ ಇದೆ. ಎಷ್ಟು ಸಾರಿ ಕೇಳಿದ್ರೆ ಎನ್ ಪ್ರಯೋಜನ. ನಿನನ್ನೇ ಹೇಳಿದ್ದೀನಿ ಮತ್ತೆ ಕೇಳ್ತೀರಿ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇರಿಸಿದಂತೆ ಮಾತಾಡಿದರು.

ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಕುಟುಂಬ

ಪರಿಹಾರ ಚೆಕ್ ಪಡೆದ ಕುಟುಂಬವೊಂದು ಸಿದ್ದರಾಮಯ್ಯರ ಕಾಲಿಗೆ ನಮಸ್ಕರಿಸಿದರು. ಏಳಯ್ಯ, ಕಾಲಿಗೆ ಬೀಳಬೇಡ ಎಂದು ಹಿಂದೆ ಸರಿದರು. ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಕ್ಕೆ ಸಿದ್ದರಾಮಯ್ಯನವರು ಚೆಕ್ ವಿತರಿಸಿದರು.

ಕೆಲ ತಿಂಗಳ ಹಿಂದೆ ಮುಷ್ಟಿಗೇರಿ ಗ್ರಾಮದ ಸಿಡಿಲು ಬಡಿದು ಮಹೇಶ್ ಜುಂಜುನಗೌಡರ ಎಂಬವರು ಸಾವನ್ನಪ್ಪಿದ್ದರು. ಮೃತ ಮಹೇಶನ ತಾಯಿ ಸಿದ್ದವ್ವ ಅವರಿಗೆ 4 ಲಕ್ಷ ರೂಪಾಯಿ ಚೆಕ್ ವಿತರಿಸಲಾಯ್ತು.ಗುಳೇದಗುಡ್ಡದಲ್ಲಿ ಹೇಳಿದ್ದೇನು?

ನಾನೀಗ ಬಾದಾಮಿ ಶಾಸಕ, ಇನ್ನೂ ಒಂದುಕಾಲು ವರ್ಷ ಸಮಯ ಇದೆ. ಸುಮ್ನೆ ಚಚೆ೯ ಮಾಡ್ತಾರೆ. ನನಗೆ ಐದಾರು ಕ್ಷೇತ್ರಗಳ ಕಡೆಗೆ ಕರೀತಾ ಇದ್ದಾರೆ.

ಇದನ್ನೂ ಓದಿ:  ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಪರ್ವ:  ಸಿದ್ಧರಾಮಯ್ಯ ಮುನ್ಸೂಚನೆ

ನಾನು ಅಲ್ಟಿಮೇಟ್ ಲಿ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಲ್ಲುತ್ತೇನೆ. ಈಗಾಗಲೇ ಬಾದಾಮಿ, ಕೊಪ್ಪಳ, ಚಾಮರಾಜಪೇಟೆ ಸೇರಿ ಬೇರೆ ಬೇರೆ ಕಡೆಗೆ ಕರೆಯುತ್ತಿದ್ದಾರೆ. ಯಾಕೆಂದ್ರೆ ನಾನು ರಾಜ್ಯದ ತುಂಬೆಲ್ಲಾ ಓಡಾಡಿ ಕ್ಯಾಂಪೇನ್ ಮಾಡಬೇಕಲ್ವಾ. ಆದ್ರೂ ಬಾದಾಮಿಯಿಂದ ನೀವು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು.

ಮೇಕೆದಾಟು ಪಾದಯಾತ್ರೆ ತಡೆಗೆ ವೀಕೆಂಡ್​ ಕರ್ಫ್ಯೂ

ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯನ್ನ ಹತ್ತಿಕ್ಕಲೆಂದೇ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.  ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್​​, ಸೋಮಶೇಖರ್‌ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.
Published by:Mahmadrafik K
First published: