ಮಂಡ್ಯ (ನ.29): ಬಿಜೆಪಿ ಸರ್ಕಾರದ (BJP Government) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಕನಕ ಜಯಂತಿಯಲ್ಲಿ (Kanaka Jayanti) ಪಾಲ್ಗೊಂಡು ಮಾತನಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿಯವರ ಮನೆ ಹಾಳಾಗ, ಅವರು ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ. ಅಂಥವರು ಮತ್ತೆ ಅಧಿಕಾರಕ್ಕೆ (Power) ಬರಬೇಕಾ ಎಂದು ಕಿಡಿಕಾರಿದ್ದಾರೆ.
ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಕೊಡುತ್ತೇವೆ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಬಸವರಾಜ ಬೊಮ್ಮಾಯಿಗೆ ಬರುತ್ತದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಜಾರಿಗೊಳಿಸಿದ್ದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರು ನಿಲ್ಲಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ರು
ನಾನು ಸಿಎಂ ಆದ ಕೂಡಲೇ ಎಲ್ಲರಿಗೂ ಉಚಿತವಾಗಿ 7 ಕೆ.ಜಿ ಅಕ್ಕಿ ಕೊಟ್ಟೆ ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅದನ್ನ 5 KGಗೆ ಇಳಿಸಿದ್ದಾರೆ. ವಿದ್ಯಾಸಿರಿ ಕೊಟ್ಟೆ ಅದನ್ನು ಸಹ ಬಿಜೆಪಿಯವರು ನಿಲ್ಲಿಸಿದ್ರು. ಇಂದಿರಾ ಕ್ಯಾಂಟೀನ್ ಸಹ ನಿಲ್ಲಿಸಿದ್ರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಾನು ಹೇಳಿದವರಿಗೆ ಮತ ನೀಡಿ ಗೆಲ್ಲಿಸಿ
ಕೆ ಆರ್ ಪೇಟೆಯಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ರೂ ಗೆಲ್ಲಿಸಿ. ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿದ್ರೆ ನನಗೆ ಶಕ್ತಿ ಬರುತ್ತೆ. ಬಿಜೆಪಿಯರವನ್ನ ಗೆಲ್ಲಿಸಿದ್ರೆ ಬೊಮ್ಮಾಯಿಗೆ ಶಕ್ತಿ ಬರುತ್ತೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ನೀವೆಲ್ಲಾ ನನ್ನ ಮೇಲೆ ಪ್ರೀತಿ ಅಭಿಮಾನ ತೋರಿಸ್ತೀರಿ ಅದಕ್ಕೆ ಬೆಲೆ ಸಿಗಬೇಕಾದ್ರೆ ನಾನು ಹೇಳಿದವರಿಗೆ ಮತ ನೀಡಿ ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ರು.
ಅಮಿತ್ ಶಾ ವಿರುದ್ಧ ಕಿಡಿ
ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ನವರು ಜೈಲಿಗೆ ಹೋಗಿದ್ದರು ಎನ್ನುತ್ತಾರೆ. ಈ ದೇಶದ ಗೃಹ ಸಚಿವ ಅಮಿತ್ ಶಾ ಮಾವನ ಮನೆಗೆ ಹೋಗಿದ್ರಾ? ಅವರನ್ನು ಗಡಿಪಾರು ಮಾಡಲಾಗಿತ್ತು. ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಅವರು ಗೃಹ ಸಚಿವರಾಗಿಲ್ಲವೇ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿಯವರಿಗೆ Bengaluru Flyover: ಬೆಂಗಳೂರಿನ 2 ಫ್ಲೈಓವರ್ ಪಿಲ್ಲರ್ಗಳಲ್ಲಿ ಬಿರುಕು; ದೂರು ಕೊಟ್ರು ಕ್ಯಾರೆ ಎನ್ನದ ಬಿಬಿಎಂಪಿ!ಅಂಟು ರೋಗ
ಸೈಲೆಂಟ್ ಸುನೀಲ ಒಬ್ಬ ಕುಖ್ಯಾತ ರೌಡಿ, ಆತನ ವಿರುದ್ಧ ಸರ್ಚ್ ವಾರೆಂಟ್ ಇದೆ. ಇಬ್ಬರು ಎಂ.ಪಿ, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ. ಗೊತ್ತಿದ್ದೂ ಗೊತ್ತಿದ್ದೂ ವೇದಿಕೆ ಹಂಚಿಕೊಳ್ಳುವುದು ಸರಿಯಾ? ಅದನ್ನು ಪ್ರಶ್ನೆ ಮಾಡಿದರೆ ಕಾಂಗ್ರೆಸ್ನಲ್ಲೂ ರೌಡಿಶೀಟರ್ ಇದ್ದಾರೆ ಎನ್ನುತ್ತಾರೆ. ಬಿಜೆಪಿಯವರಿಗೆ ಅದು ಅಂಟು ರೋಗವಾಗಿಬಿಟ್ಟಿದೆ. ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿ ಇದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಸಿಎಂ ಆಗಲಿ- ಹೆಚ್ ಸಿ ಮಹಾದೇವಪ್ಪ
ಜೆ ಹೆಚ್ ಪಟೇಲರು ಸಿಎಂ ಆದ ಸಂದರ್ಭದಲ್ಲಿ ಆಗ ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದರು. ಆದ್ರೆ ಸಿದ್ದರಾಮಯ್ಯ ಹಿರಿಯರ ಮಾತಿಗೆ ಮನ್ನಣೆ ನೀಡಿ ಜೆ.ಹೆಚ್ ಪಟೇಲರನ್ನ ಸಿಎಂ ಮಾಡಿದ್ರು ಎಂದು ಕೆ ಆರ್ ಪೇಟೆಯಲ್ಲಿ ಸಿದ್ದು ಆಪ್ತ ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ