ಬಳ್ಳಾರಿ: ರಾಹುಲ್ ಗಾಂಧಿ (Rahul Gandhi) ಪಾದಯಾತ್ರೆ ಬಳ್ಳಾರಿ ತಲುಪಿದೆ. ಸಾರ್ವಜನಿಕ ಸಮಾವೇಶದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವೀರಾವೇಶದ ಭಾಷಣ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಅಷ್ಟೇ ಅಲ್ಲದೇ, ಸಚಿವ ರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಜಿಲ್ಲೆಯಲ್ಲಿ ಒಬ್ಬ ಶ್ರೀರಾಮುಲು (Sri Ramulu) ಅಂತಾ ಮಂತ್ರಿ ಇದ್ದಾನೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ಮಾಡಿಲ್ಲ ಎಂದು ರಾಮುಲು ಹೇಳಿದ್ದಾರೆ. ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶಕ್ಕೆ ಏನು ಮಾಡಿಲ್ಲ ಎಂದಿರೋ ರಾಮುಲು ನಿನಗೆ ದೇಶದ ಇತಿಹಾಸದ (History) ಬಗ್ಗೆ ಅರಿವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೆಹರೂ ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡಲು ರಾಮುಲುಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಸಚಿವ ಶ್ರೀರಾಮುಲುಗೆ ಸಿದ್ದರಾಮಯ್ಯ ಪ್ರಶ್ನೆ!
ವಿಜಯನಗರದ ಉಕ್ಕಿನ ಕಾರ್ಖಾನೆ ಪ್ರಾರಂಭ ಮಾಡಿದ್ದು ಯಾರಪ್ಪ ಶ್ರೀರಾಮುಲು.. ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ ಮಾಡಿದ್ದು ಯಾರಪ್ಪ ರಾಮುಲು..? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ 8 ವರ್ಷದಲ್ಲಿ ನಿಂದೇನಪ್ಪ ಬಳ್ಳಾರಿಗೆ ಕೊಡುಗೆ? ಎಂದು ಕೇಳಿದ್ದಾರೆ. ಎಂಟು ವರ್ಷದಲ್ಲಿ ಬಳ್ಳಾರಿ ಒಂದೇ ಒಂದು ರೂಪಾಯಿ ಅಭಿವೃದ್ಧಿ ಆಗಿಲ್ಲ.
ಸಚಿವ ಶ್ರೀರಾಮುಲು ಒಬ್ಬ ಪೆದ್ದ-ಸಿದ್ದರಾಮಯ್ಯ
ಸಚಿವ ಶ್ರೀರಾಮುಲು ಒಬ್ಬ ಪೆದ್ದ, ನಿನ್ನಂತ ಪೆದ್ದನ ಜೊತೆ ಚರ್ಚೆ ಮಾಡೋಕೆ ಯಾರು ತಯಾರಿಲ್ಲ. ನಿನ್ನ ಸಾಧನೆ ಬರೀ ಲೂಟಿ ಹೊಡೆದಿದ್ದು ಎಂದು ರಾಮುಲು ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು? ನಾವು ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದ ಮೇಲೆ ಜನಾರ್ದನ ರೆಡ್ಡಿ ಜೈಲಿಗೆ ಹೋದ್ರು. ಕಾಂಗ್ರೆಸ್ ನಾಯಕರ ಪ್ರಶ್ನೆ ಮಾಡಲು ಯಾವುದೇ ನೈತಿಕತೆ ಆಧಾರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: Sriramulu: ಬಳ್ಳಾರಿಗೆ ಬಂದಿರುವ ರಾಹುಲ್ ಗಾಂಧಿಯನ್ನು ಶ್ರೀರಾಮುಲು ಸ್ವಾಗತಿಸಿದ್ದು ಹೀಗೆ
ರಾಮುಲುಗೆ ಸವಾಲು ಹಾಕಿದ ಸಿದ್ದರಾಮಯ್ಯ
ಬಳ್ಳಾರಿ ಅಭಿವೃದ್ಧಿ ಕುರಿತ ನಿನ್ನ ಸಾಧನೆ ಬಗ್ಗೆ ಚರ್ಚೆ ಮಾಡೋಕೆ ರೆಡಿ ಇದ್ರೆ ಉಗ್ರಪ್ಪನನ್ನು ಕಳುಹಿಸಿ ಕೊಡ್ತೀನಿ ಬಾರಪ್ಪ ಚರ್ಚೆಗೆ ಎಂದು ಮೇಜು ಕುಟ್ಟಿ ರಾಮುಲುಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ವೀರವೇಷದ ಭಾಷಣ ನೋಡಿದ ರಾಹುಲ್ ಪಕ್ಕದಲ್ಲಿದ್ದ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಏನು ಮಾತಾಡ್ತಿದ್ದಾರೆ ಎಂದು ಕೇಳಿದ್ದಾರೆ.
ಎಲ್ಲಾ ಕಡೆ ದ್ವೇಷದ ರಾಜಕಾರಣ
ಇವತ್ತು ದೇಶವನ್ನು ಧರ್ಮ, ಜಾತಿ ಆಧಾರದ ಮೇಲೆ ಜನರ ಹೊಡೆಯುವ ಕೆಲಸ ಮಾಡ್ತಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಮಾನವ ವಿರೋಧಿ ಕೆಲಸ ಹೆಚ್ಚಾಗಿದೆ. ಎಲ್ಲಾ ಕಡೆ ದ್ವೇಷದ ರಾಜಕಾರಣ, ಎಲ್ಲಾ ಕಡೆ ಹಿಂಸೆಯ ರಾಜಕಾರಣ ಶುರುವಾಗಿದೆ. ಜನರು ಇವತ್ತು ಭಯದ ವಾತಾವರಣದಲ್ಲಿ ಬದುಕು ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಕೂಡ ಶಾಂತಿಯುತವಾಗಿ ಬದುಕೋಕೆ ಆಗ್ತಿಲ್ಲ. ಇಲ್ಲಿ ವಾಸ ಮಾಡುವ ಜನರು ಶಾಂತಿಯಿಂದ ಮಾನವರಂತೆ ಬದುಕುವ ಸನ್ನಿವೇಶ ನಿರ್ಮಾಣವಾಗ್ಬೇಕು.
ಇದನ್ನೂ ಓದಿ: BJP Tweet: ರಾಹುಲ್ ಗಾಂಧಿ ಅವರೇ, ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ; ಬಿಜೆಪಿ ವಾಗ್ದಾಳಿ
RSSನಿಂದ ದೇಶದಲ್ಲಿ ಅಶಾಂತಿ ನಿರ್ಮಾಣ
ಆರ್ ಎಸ್ ಎಸ್ ನಿಂದ ದೇಶದಲ್ಲಿ ಅಶಾಂತಿ ನಿರ್ಮಾಣ ಆಗಿದೆ.ಇದು ಕರ್ನಾಟಕದಲ್ಲಿ ಅಲ್ಲ. ಇಡೀ ದೇಶದಲ್ಲಿ ನಿರ್ಮಾಣ ಆಗಿದೆ. ರಾಹುಲ್ ಗಾಂಧಿ ಪಾದಯಾತ್ರೆಯನ್ನು ಲಘುವಾಗಿ ಟೀಕೆ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಅವರು ಐತಿಹಾಸಿಕ ಪಾದಯಾತ್ರೆ ಮಾಡಿದ್ದಾರೆ. ಅವರ ಕುಟುಂಬ ದೇಶಕ್ಕೆ ತ್ಯಾಗ ಬಲಿದಾನ ಮಾಡಿದ್ದಾರೆ. ನರೇಂದ್ರ ಮೋದಿ, ಅಮಿತ್ ಷಾ ಅವ್ರೇ ದೇಶಕ್ಕೆ ನಿಮ್ಮ ತ್ಯಾಗ ಏನು..? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ