ದೆಹಲಿ ಫಲಿತಾಂಶ ಏನಾಗುತ್ತೆ ಅಂತ ಮೊದಲೇ ಗೊತ್ತಿತ್ತು - ಜನರೇ ಬಿಜೆಪಿ ಮುಕ್ತ ಭಾರತ ಮಾಡ್ತಿದಾರೆ ; ಸಿದ್ಧರಾಮಯ್ಯ

ಸಿಎಂ ಆಗಿ ಅರವಿಂದ್​​ ಕೇಜ್ರೀವಾಲ್ ಒಳ್ಳೆಯ ಕೆಲಸ ಮಾಡಿದ್ದರು. ಜಿಡಿಪಿ‌ ಕುಸಿತದಿಂದ ಜನ ಬೇಸತ್ತು ಹೋಗಿದ್ದರು ಹೀಗಾಗಿ ಜನ ಅಲ್ಲಿ ಆಮ್​​ ಆದ್ಮಿ ಪಕ್ಷವನ್ನು ಕೈ ಹಿಡಿದಿದ್ದಾರೆ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು(ಫೆ.11) : ನಮಗೆ ಮೊದಲೇ ಗೊತ್ತಿತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ನಾಲ್ಕೈದು ಸೀಟುಗಳನ್ನು ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ, ಆಮ್​​​ ಆದ್ಮಿ ಪಕ್ಷವನ್ನು ತರಬೇಕು ಎಂದು ಅರವಿಂದ್​​ ಕೇಜ್ರಿವಾಲ್ ಬಯಸಿದ್ದರು ಅದರಂತೆ ಜನರು ಅವರನ್ನ ಕೈಹಿಡಿದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.  

ಬಿಜೆಪಿಯವರು ಎಲ್ಲ ಮೂಲಗಳನ್ನು ಇಟ್ಕೊಂಡಿದ್ದರು, ಕೇಂದ್ರ ಸರ್ಕಾರ, ಸಂಸದರು ಇದ್ದರೂ ಗೆಲ್ಲಲು ಆಗಲಿಲ್ಲ. ಕಳೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ.  ಸಿಎಂ ಆಗಿ ಅರವಿಂದ್​​ ಕೇಜ್ರೀವಾಲ್ ಒಳ್ಳೆಯ ಕೆಲಸ ಮಾಡಿದ್ದರು. ಜಿಡಿಪಿ‌ ಕುಸಿತದಿಂದ ಜನ ಬೇಸತ್ತು ಹೋಗಿದ್ದರು ಹೀಗಾಗಿ ಜನ ಅಲ್ಲಿ ಆಮ್​​ ಆದ್ಮಿ ಪಕ್ಷವನ್ನು ಕೈ ಹಿಡಿದಿದ್ದಾರೆ. ಆದರೆ ಒಂದಂತೂ ಸತ್ಯ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಎನ್ನುತ್ತಿದ್ದರು. ಈಗ ಜನರೇ ಬಿಜೆಪಿ ಮುಕ್ತ ಭಾರತ ಮಾಡುತ್ತಿದ್ದಾರೆ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,  ಸ್ಥಳೀಯ ಸಂಸ್ಥೆಗಳಲ್ಲಿ ನಾವೇ ಮುಂದಿದ್ದೇವೆ. ಸಿಂದಗಿ, ಸಿರಗುಪ್ಪ, ಚಿಕ್ಕಬಳ್ಳಾಪುರ, ಹುಣಸೂರಿನಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ 69 ಬಿಜೆಪಿ 58 ಅಭ್ಯರ್ಥಿಗಳು ಗೆದ್ದಿದ್ದಾರೆ. ನಿನ್ನೆ ಚಿಕ್ಕಬಳ್ಳಾಪುರದ ಶಾಸಕರೊಬ್ಬರು ಮಂತ್ರಿಯಾಗಿದ್ದಾರೆ. ಅವರು ಅಲ್ಲಿ ಏನು ಮಾಡಿದರೂ ಅಲ್ಲಿ ವರ್ಕೌಟ್ ಆಗಿಲ್ಲ. ಅಲ್ಲಿ ನಮಗೆ ಪೂರ್ಣ ಬಹುಮತ ಬಂದಿದೆ ಎಂದರು.

ಹೊಸಕೋಟೆಯಲ್ಲಿ ನಮ್ಮವರಿಗೆ ಖರ್ಚು ಮಾಡುವ ಶಕ್ತಿಯಿರಲಿಲ್ಲ. ಮಾಜಿ ಸಚಿವ ಎಂಟಿಬಿ ನಾಗರಾಜು ಹಣ ಖರ್ಚು ಮಾಡಿದ್ದಾರೆ. ಹಾಗಾಗಿ ಹೊಸಕೋಟೆಯಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಎಂಟಿಬಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಖಾತೆ ಮರುಹಂಚಿಕೆ; ಆನಂದ್ ಸಿಂಗ್​ಗೆ ಅರಣ್ಯ ಜೊತೆಗೆ ಪರಿಸರ ಖಾತೆ, ಗೋಪಾಲಯ್ಯಗೆ ಆಹಾರ ಇಲಾಖೆ ಜವಾಬ್ದಾರಿ

ದಾರಿದ್ರ್ಯ ಸರ್ಕಾರ ಎಂದಿದ್ದಕ್ಕೆ ಸದನದಲ್ಲಿ ಮಾತನಾಡುತ್ತೇವೆ ಎಂದಿದ್ದ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅದೇನು ಉತ್ತರ ಕೊಡುತ್ತಾರೋ ಕೊಡಲಿ ಅವರು ಸದನ ನಡೆಸುತ್ತಾರೋ ಇಲ್ಲವೋ ಅದೇ ಗೊತ್ತಿಲ್ಲ. ಹೆದರಿಕೊಂಡು ಬೆಳಗಾವಿಯಲ್ಲಿ ಸದನವನ್ನೇ ನಡೆಸಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

 
First published: