ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ; ಸಿದ್ದರಾಮ್ಯಯ ಲೇವಡಿ

ರೈತರ ಆದಾಯ ಕುಸಿಯುತ್ತಲೇ ಇದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಕಳೆದ ಮೂರು ತಿಂಗಳಿಂದ ಹೋರಾಟ ನಡೆದಿದೆ. ಇವಾಗ ಪಾಪ ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿಕೊಳ್ಳೋಕೆ‌ ಆಗ್ತಿಲ್ಲ. ಅದಕ್ಕಾಗಿ ಅವರು ಗಡ್ಡ ಬಿಟ್ಟು ಬಿಟ್ಟಿದ್ದಾರೆ‌ ಜನರಿಗೆ ತಮ್ಮ ಮುಖ ಕಾಣ ಬಾರದು ಎಂದು ಗಡ್ಡ ಬಿಟ್ಟಿದ್ದಾರೆ ಎಂದು ಪ್ರಧಾನಿ‌ ಮೋದಿ ಗಡ್ಡದ ಬಗ್ಗೆ ಸಿದ್ದರಾಮಯ್ಯ ಲೇವಡಿ ಮಾಡಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು(ಫೆ.21): ಕೇಂದ್ರದಲ್ಲಿ ಕೆಟ್ಟ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ.ಭಾರತದ ಇತಿಹಾಸದಲ್ಲೇ ಅತ್ಯಂತ ಸುಳ್ಳಿನ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ. ಗೋಮುಖ ವ್ಯಾಘ್ರ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಸುಳ್ಳುಗಾರನ ಬಣ್ಣ ಬಯಲು ಮಾಡುವ ಶಕ್ತಿ ಮಲ್ಲಿ ಕಾರ್ಜುನ್ ಖರ್ಗೆ ಇದೆ. ಹೀಗಾಗಿ ರಾಜ್ಯಸಭೆಯಲ್ಲಿ ಖರ್ಗೆ ಅವರು ಮೋದಿಯವರ ಬಣ್ಣ ಬಯಲು ಮಾಡಲಿ ಎಂದು ಸಿದ್ದರಾಮಯ್ಯ ಖರ್ಗೆಗೆ ಶುಭ ಹಾರೈಸಿದರು.

  ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ,  ಅಚ್ಚೇದಿನ್ ಆಯೇಗಾ. ನಾ ಕಾವೂಂಗಾ ನಾ ಕಾನೇ ದೂಂಗಾ ಅಂದ್ರಲ್ಲಪ್ಪಾ ಮೋದಿ. ಹೀಗೆ ಹೇಳಿ ಜನರಿಗೆ ಟೋಪಿ ಹಾಕಿಬಿಟ್ಯಲ್ಲಪ್ಪಾ. ಇವರು ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ಕುಸಿದಿದೆ. ಈ ವರ್ಷ ಮೈನಸ್, ಮುಂದಿನ ವರ್ಷವೂ ಮೈನಸ್. ಪಾಪ ಸೀತಾರಾಮನ್ ಹೆಣ್ಣುಮಗಳಿದ್ದಾರೆ. ಆ ಹೆಣ್ಣುಮಗಳ ಕೈಯಲ್ಲೂ ಸುಳ್ಳು‌ಹೇಳಿಸುತ್ತಿದ್ದಾರೆ. ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ 90 ಸಾವಿರ ಕೋಟಿ ಸಾಲ ಮಾಡ್ತಿದ್ದಾರೆ. ಇದೇನಾ ನಿಮ್ಮ ಅಚ್ಚೇದಿನ್? ಎಂದು ಪ್ರಶ್ನಿಸಿದರು.

  ದಿನೇ ದಿನೇ ಪೆಟ್ರೋಲ್,ಗ್ಯಾಸ್ ದಿನೇದಿನೇ ಹೆಚ್ಚುತ್ತಲೇ ಇದೆ.  380 ಇದ್ದ ಸಿಲಿಂಡರ್ ಬೆಲೆ 781 ರೂ ಆಗಿದೆ. ಪೆಟ್ರೋಲ್ ಬೆಲೆ 91.80 ಪೈಸೆ ಆಗಿದ್ದರೆ, ಡಿಸೇಲ್ ಬೆಲೆ ಲೀಟರ್ ಗೆ 80 ರೂ ಆಗಿದೆ ಇದೇನಾ ಮೋದಿಯವರೇ ನಿಮ್ಮದು ಅಚ್ಚೇದಿನ್ ? ಎಂದು ಕಿಡಿಕಾರಿದರು.

  ರೈತರ ಆದಾಯ ಕುಸಿಯುತ್ತಲೇ ಇದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಕಳೆದ ಮೂರು ತಿಂಗಳಿಂದ ಹೋರಾಟ ನಡೆದಿದೆ. ಇವಾಗ ಪಾಪ ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿಕೊಳ್ಳೋಕೆ‌ ಆಗ್ತಿಲ್ಲ. ಅದಕ್ಕಾಗಿ ಅವರು ಗಡ್ಡ ಬಿಟ್ಟು ಬಿಟ್ಟಿದ್ದಾರೆ‌ ಜನರಿಗೆ ತಮ್ಮ ಮುಖ ಕಾಣ ಬಾರದು ಎಂದು ಗಡ್ಡ ಬಿಟ್ಟಿದ್ದಾರೆ ಎಂದು ಪ್ರಧಾನಿ‌ ಮೋದಿ ಗಡ್ಡದ ಬಗ್ಗೆ ಸಿದ್ದರಾಮಯ್ಯ ಲೇವಡಿ ಮಾಡಿದರು.

  ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಿಬ್ಬಂದಿ ಕೊರತೆ

  ಇನ್ನು, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು. ಅನೈತಿಕ, ಭ್ರಷ್ಟ, ಸರ್ಕಾರ ಕರ್ನಾಟಕದಲ್ಲಿದೆ. ಇಂದಿನ ಬಿಜೆಪಿ ಸರ್ಕಾರದಷ್ಟು ಭ್ರಷ್ಟ ಸರ್ಕಾರವನ್ನು ನಾನು ರಾಜಕೀಯ ಜೀವನದಲ್ಲೇ ನೋಡಿಲ್ಲ. ಯಡಿಯೂರಪ್ಪ ಏನು ಜನರ ಆಶೀರ್ವಾದ ಪಡೆದು ಸಿಎಂ ಆಗಿದ್ದಲ್ಲ.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಜಾಸ್ತಿ ಜನರ ಬೆಂಬಲ ಇದ್ದಿದ್ದು. ಆದರೆ ಅಂಕಿಗಳು ಕಡಿಮೆ ಬಂತು ಅಷ್ಟೇ. ಆಮೇಲೆ ಸರ್ಕಾರ ರಚನೆ ಮಾಡೋಕೆ ಹೋಗಿ ಬಹುಮತ ಸಾಬೀತು ಮಾಡದೆ ರಾಜೀನಾಮೆ ಕೊಟ್ಟರು. ಆ ನಂತರ ಶಾಸಕರಿಗೆ‌ ಕೋಟ್ಯಾಂತರ ರೂಪಾಯಿ ಕೊಟ್ಟು ಅವರನ್ನು ಕೊಂಡುಕೊಂಡು ಅಧಿಕಾರ ಹಿಡಿದರು ಎಂದು ಟೀಕಿಸಿದರು.

  ಸಿಎಂ ಬಿಎಸ್​ವೈ ವಿರುದ್ಧ ವಾಗ್ದಾಳಿ

  ಕರ್ನಾಟಕದ ಇತಿಹಾಸದಲ್ಲಿ ನುಡಿದಂತೆ ನಡೆದವರು ಅಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಆದರೆ ಯಡಿಯೂರಪ್ಪ ಸರ್ಕಾರ ಟೋಟಲಿ ಆಫ್ ಆಗೋಗಿದೆ. ಕೆಟ್ಟೋಗಿ ನಿಂತ ಬಸ್ಸಿನ ರೀತಿ ಸರ್ಕಾರ ನಿಂತು ಹೋಗಿದೆ ಎಂದ ಅವರು ಬಿಎಸ್​ವೈ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. ನಿನಗೆ ಪಾಪ ಗೇರ್ ಹಾಕೋಕೆ ಬರಲ್ಲ. ಇನ್ನು ಬಸ್ಸು ಎಲ್ಲಿ ಮುಂದಕ್ಕೆ ಹೋಗುತ್ತೆ. ನೀನು ಮಾಡ್ತಿರೋದು ಸರ್ಕಾರದಲ್ಲಿ ಲೂಟಿ. ನೀನು ಮುಖ್ಯಮಂತ್ರಿ ಆಗಿ ಮುಂದುವರೆಯುವುದಕ್ಕೆ ಯಾವುದೇ ಕಾರಣಕ್ಕೂ ನೈತಿಕ ಹಕ್ಕು ಇಲ್ಲ ಎಂದು ಗುಡುಗಿದರು.

  ಯಾವುದಕ್ಕೆ ಕೇಳಿದ್ರೂ ಹಣ ಇಲ್ಲ ಅಂತಾರೆ ಯಡಿಯೂರಪ್ಪ. ಹಣ ಇಲ್ಲ ಅಂದ್ಮೇಲೆ ಯಡಿಯೂರಪ್ಪ ಯಾಕಿದೀಯಪ್ಪ..? ದುಡ್ಡಿಲ್ಲಾಂದ್ರೆ ಕುರ್ಚಿ ಬಿಟ್ಟು ಇಳಿ ಮತ್ತೆ, ಆಗ ನಾವ್ಯಾರಾದ್ರೂ ಬರ್ತೀವಿ,ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಬಗ್ಗೆ ಒಲವು ತೋರಿದರು.

  ನಾವು ಹಿಂದೆ 7 ಕೆ.ಜಿ ಅಕ್ಕಿ ಕೊಡ್ತಿದ್ದೆವು. ಅದನ್ನ ಇವರು ಈಗ 5 ಕೆಜಿಗೆ ತಂದಿದ್ದಾರೆ, ಮುಂದೆ 3 ಕೆಜಿಗೆ ಬರ್ತಾರೆ ಆ ನಂತರ ಅದನ್ನು ನಿಲ್ಲಿಸೇ ಬಿಡುತ್ತಾರೆ. ಅಕ್ಕಿಯನ್ನೇನು ಯಡಿಯೂರಪ್ಪ ಅವರ ಅಪ್ಪನ ಮನೆಯಿಂದ ತಂದು ಕೊಡ್ತಿದ್ದಾನಾ..? ಜನರ ದುಡ್ಡಿನಿಂದ ತಾನೇ ಕೊಡೋದು. ಕೊರೋನಾದಲ್ಲೂ ದುಡ್ಡು ಹೊಡೆದುಬಿಟ್ಟರು. ನಾವು ಸಂಕಲ್ಪ ಮಾಡಬೇಕಿದೆ. ಬಿಜೆಪಿಯನ್ನ ಕಿತ್ತೊಗೆಯಲೇಬೇಕಿದೆ. ಸಂಘರ್ಷ ಮಾಡಿ, ಜನರ ಬಳಿ ಹೊಗೋಣ. ಜನರ ಬಳಿ ಹೋಗಿ ಸರ್ಕಾರ ಕಿತ್ತೊಗೆಯೋಣ ಎಂದು ಕರೆ ನೀಡಿದರು.
  Published by:Latha CG
  First published: