ನಮ್ಮಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನಾ ಮಾಡಲಿಲ್ಲ - ನಿಮ್ಮ ಹಣದಿಂದ್ಲೇ ಸಾಲ ಮನ್ನಾ ಮಾಡಿದೆ; ಸಿದ್ಧರಾಮಯ್ಯ

ಅನೇಕ ಜಯಂತಿಗಳನ್ನು ನಾವು ಆರಂಭಿಸಿದೆವು. ಆದರೆ ಟಿಪ್ಪು ಜಯಂತಿ ಬಗ್ಗೆ ಏಕೆ ವಿರೋಧ? ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಇದು ಇಬ್ಬಗೆ ನೀತಿ ಅಲ್ಲವೇ? ಎಂದು ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

G Hareeshkumar | news18-kannada
Updated:November 26, 2019, 3:32 PM IST
ನಮ್ಮಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನಾ ಮಾಡಲಿಲ್ಲ - ನಿಮ್ಮ ಹಣದಿಂದ್ಲೇ ಸಾಲ ಮನ್ನಾ ಮಾಡಿದೆ; ಸಿದ್ಧರಾಮಯ್ಯ
ಸಿದ್ದರಾಮಯ್ಯ
  • Share this:
ಹಾವೇರಿ(ನ.26): ನಾನು ನಮ್ಮ ಅಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನ ಮಾಡಲಿಲ್ಲ. ನಿಮ್ಮ ಹಣ ನಿಮಗೆ ಖರ್ಚು ಮಾಡಿ ಸಾಲ ಮನ್ನಾ ಮಾಡಿದ್ದೇನೆ. ಜಗದೀಶ್ ಶೆಟ್ಟರ್ ಬಿಜೆಪಿ ಸರ್ಕಾರದಲ್ಲಿ 30 ಸಾವಿರ ಸಾಲ ಮನ್ನಾ ಮಾಡಿ ಹಾಗೇ ಹೋದರು. ನಾನು ಅಧಿಕಾರಕ್ಕೆ ಬಂದ್ಮೇಲೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪನವರೇ ನೀವು ಸಿಎಂ ಆಗಿದ್ದಾಗ ಹರಕಲ ಸೀರೆ-ಮುರುಕಲು ಸೈಕಲ್ ಕೊಟ್ಟಿದ್ರಿ. ಬೇರೇನು ಮಾಡಿದ್ದೀರಿ. ಆಪರೇಷನ್ ಕಮಲದ ಪಿತಾಮಹ ಸಿಎಂ ಯಡಿಯೂರಪ್ಪನವರು. 2008 ರಲ್ಲಿ 7 ಜನ ಈಗ 19 ಜನ ಆಪರೇಷನ್ ಕಮಲ ಮಾಡಿದ್ರಿ ಎಂದು ಬಿಎಸ್​ವೈ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪಗೆ ಬಂದ ಪರಿಸ್ಥಿತಿ ಫಡ್ನಾವಿಸ್ ಗೆ ಬರುತ್ತೆ

ರಾಜ್ಯದಲ್ಲಿ ಯಡಿಯೂರಪ್ಪಗೆ ಬಂದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ಫಡ್ನಾವಿಸ್ ಗೆ ಬರುತ್ತೆ. ಸುಪ್ರೀಂ ಕೋರ್ಟ್ ಫಡ್ನವಿಸ್ ಗೆ ಬಹುಮತ ಸಾಬೀತಿಗೆ 24 ಗಂಟೆ ಕಾಲಾವಕಾಶ ನೀಡಿದೆ ರಾಜ್ಯದಲ್ಲೂ ಬಿ.ಎಸ್.ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್ 24 ಗಂಟೆ ಕಾಲಾವಕಾಶ ನೀಡಿತ್ತು. ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಆಗದೆ ಫೇಲ್ಯೂರ್ ಆಗಿದ್ರು. ಮಹಾರಾಷ್ಟ್ರದಲ್ಲೂ ಫಡ್ನವಿಸ್ ಫೇಲ್ಯೂರ್ ಆಗುತ್ತಾರೆ ಎಂದು ತಿಳಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕೆ ಬಿ  ಕೊಳಿವಾಡ ಅವರು, ಅಲ್ಪ ಅಂತರದಿಂದ ಸೋತಿದ್ದರು. ಆದರೆ ನಾನು ಪ್ರಚಾರಕ್ಕೆ ಬರಲಿಲ್ಲ ಹೀಗಾಗಿ ಸೋಲಾಯಿತು ಅನ್ನೋ ಭಾವನೆ ಕೊಳಿವಾಡರಲ್ಲಿ ಇತ್ತು.  ಆದರೆ ನಾನು ವೈಯಕ್ತಿಕ ಕಾರಣದಿಂದ ಬರಲು ಆಗಲಿಲ್ಲ ಎಂದು ಹೇಳಿದರು.

ಕ್ರಿಮಿನಲ್ ಕೇಸ್ ಇರುವವರನ್ನು ಬಿಜೆಪಿ ಚುನಾವಣೆಯಲ್ಲಿ ನಿಲ್ಲಿಸಿದೆ

ಕ್ರಿಮಿನಲ್ ಕೇಸ್ ಇರುವವರನ್ನು ಬಿಜೆಪಿಯವರು ನಿಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ . ಸುಮಾರು 55 ಸಾವಿರ ಮತಗಳಿಂದ ಅಂತರದಿಂದ ನಮ್ಮ ಅಭ್ಯರ್ಥಿ ಕೆ. ಬಿ ಕೋಳಿವಾಡ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.ಕರ್ನಾಟಕದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯತ್ತಿದೆ. ಉಪಚುನಾವಣೆ ನಾವು ಯಾರು ಬಯಸಿರಲಿಲ್ಲ. 17 ಜನ ಶಾಸಕರು ರಾಜೀನಾಮೆ ಕೊಟ್ಟರು. ಇವರು ರಾಜೀನಾಮೆ ಕೊಡಲಿಕ್ಕೆ ಪ್ರಧಾನಿ ನರೇಂದ್ರ ಮೊದಿ, ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಅಮಿತ್ ಶಾ ಕಾರಣ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಎಂದರು.

ಎಲ್ಲಾ ಪಕ್ಷದವರು ಒಮ್ಮತದಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯ್ದೆ ತಂದರು. ಆಗ ಇದ್ದ ಸ್ಪೀಕರ್ ರಮೇಶ್ ಕುಮಾರ್ 17 ಜನ ಶಾಸಕರನ್ನು ಅನರ್ಹ ಮಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಸ್ಪೀಕರ್ ಆದೇಶ ಎತ್ತಿಹಿಡಿದರು ಎಂದು ತಿಳಿಸಿದರು.

ಇದನ್ನೂ ಓದಿ : ಸ್ವಾಭಿಮಾನಕ್ಕಾಗಿ ಸಿದ್ಧರಾಮಯ್ಯ ಜೆಡಿಎಸ್​​ಗೆ ರಾಜೀನಾಮೆ ನೀಡಿದ್ರು - ಅದೇ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ; ಎಚ್. ವಿಶ್ವನಾಥ್

ಅನೇಕ ಜಯಂತಿಗಳನ್ನು ನಾವು ಆರಂಭಿಸಿದೆವು. ಆದರೆ ಟಿಪ್ಪು ಜಯಂತಿ ಬಗ್ಗೆ ಏಕೆ ವಿರೋಧ? ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಇದು ಇಬ್ಬಗೆ ನೀತಿ ಅಲ್ಲವೇ? ಎಂದು ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ