ಮೈಸೂರು(ಫೆ.06): ಕಾಂಗ್ರೆಸ್ ತೊರೆದ ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲೂ ಮಂತ್ರಿಯಾದರೂ ಅನರ್ಹರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಎಚ್.ಡಿ ಕೋಟೆಯಲ್ಲಿ ಮಾತಾಡಿದ ಸಿದ್ದರಾಮಯ್ಯ, ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ನನಗೆ ಖುಷಿ ತಂದಿಲ್ಲ. ಅವರು ಬಿಜೆಪಿ ಸರ್ಕಾರದಲ್ಲಿ ನೂತನ ಮಂತ್ರಿಯಾದ ಮಾತ್ರಕ್ಕೆ ಅರ್ಹರಲ್ಲ, ಕಾನೂನಿನ ಪ್ರಕಾರ ಯಾವತ್ತಿದ್ದರೂ ಅನರ್ಹರೇ ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವ ಸರ್ಕಾರದ ಸಂಪುಟ ವಿಸ್ತರಣೆ ಪೂರ್ತಿಯಾಗಿಲ್ಲ. ಇನ್ನೂ ಆರು ಖಾತೆಗಳು ಬಾಕಿ ಇವೆ. ಯಡಿಯೂರಪ್ಪ ಕಳಿಸಿದ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಸಿಗ್ನಲ್ ನೀಡಿಲ್ಲ. ಮುಖ್ಯಮಂತ್ರಿಗಳನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ತಮಗೆ ಬೇಕಾದವರನ್ನ ಮಂತ್ರಿ ಮಾಡುವ ಸ್ವಾತಂತ್ರ್ಯ ಹೈಕಮಾಂಡ್ ಯಡಿಯೂರಪ್ಪಗೆ ನೀಡಿಲ್ಲ. ನೂತನ ಸಚಿವರು ಪಕ್ಷ ದ್ರೋಹಿಗಳು. ಅವರು ಮಂತ್ರಿಯಾಗಿ ಪ್ರಮಾಣ ವಚವ ಸ್ವೀಕರಿಸಿದ ಕಾರಣ ಶುಭಾಶಯ ಕೋರುತ್ತಿದ್ದೇನೆ. ಜನರಿಗೆ ಉತ್ತಮ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ಸಿಎಎ ವಿಚಾರದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನ್ ಭಾಷೆಯಲ್ಲಿ ಮಾತನಾಡುತ್ತಿವೆ; ಸಂಸತ್ನಲ್ಲಿ ಹರಿಹಾಯ್ದ ಮೋದಿ
ದೇವರು ಒಬ್ಬನೇ ಇರೋದು, ಅನೇಕರು ಇಲ್ಲ. ಆದರೆ ನಾವು ಮಾತ್ರ ಬೇರೆ ಬೇರೆ ಹೆಸರಲ್ಲಿ ದೇವರನ್ನು ಪೂಜಿಸುತ್ತೇವೆ. ದೇವನೊಬ್ಬ ನಾಮ ಹಲವು, ಆತ ಸರ್ವವ್ಯಾಪಿ. ಗುಡಿಯಲ್ಲೂ ಇದ್ದಾನೆ, ದೇವಸ್ಥಾನದ ಹೊರಗೂ ಇದ್ದಾನೆ. ಹಿರಣ್ಯ ಕಶಿಪು ನಾಟಕ ನೋಡಿಲ್ಲವೇ ಎಲ್ಲೆಲ್ಲೂ ದೇವರೇ ಎಂದು ಹೇಳಿದರು ಸಿದ್ದರಾಮಯ್ಯ.
ಇದನ್ನೂ ಓದಿ: 10 ಜನ ಮಂತ್ರಿಗಳಾದರೆ ಉಳಿದ ಬಿಜೆಪಿ ಶಾಸಕರೇನು ಕಡುಬು ತಿಂತಾರಾ?; ಕುಮಾರಸ್ವಾಮಿ ಕುಹಕ
ಇನ್ನು, ಉಳ್ಳವರು ದೇಗುಲ ಮಾಡುವರು ನಾನೇನು ಮಾಡಲ್ಲಯ್ಯ ಎಂದು ಸಾಮಾಜಿಕ ಹರಿಕಾರ ಬಸವಣ್ಣ ಹೇಳಿದ್ದಾರೆ. ಇದು ನಾನು ಹೇಳುತ್ತಿರುವುದಲ್ಲ. 900 ವರ್ಷಗಳ ಹಿಂದೆಯೇ ಬಸವಣ್ಣ ಹೇಳಿದ್ದ ಮಾತು. ಹೀಗೆಂದು ಶನೀಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ ಬಳಿಕ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ತಮ್ಮ ಮನದ ಮಾತುಗಳನ್ನಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ