ಬೀದರ್ ಪ್ರಕರಣ - ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ - ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದ್ರೆ ದೇಶದ್ರೋಹವಾಗಲ್ಲ; ಸಿದ್ಧರಾಮಯ್ಯ

ರಾಜ್ಯ ಸರಕಾರದ ಅಣತಿಯಂತೆ ಪೊಲೀಸರು ದೇಶದ್ರೋಹದ‌ ಕೇಸ್ ಹಾಕಿದ್ದಾರೆ. ಇದು ಖಂಡನೀಯವಾಗಿದ್ದು, ಇಲ್ಲಿ ಮಕ್ಕಳು ‌ಬಳಸಿದ ಪದ ಮಾನಹಾನಿ ಕೂಡಾ‌ ಆಗುವುದಿಲ್ಲವ ಎಂದಾದರೇ ದೇಶದ್ರೋಹ‌ ಹೇಗಾಗಲು ಸಾಧ್ಯ?

news18-kannada
Updated:February 14, 2020, 5:15 PM IST
ಬೀದರ್ ಪ್ರಕರಣ - ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ - ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದ್ರೆ ದೇಶದ್ರೋಹವಾಗಲ್ಲ; ಸಿದ್ಧರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೀದರ್​(ಫೆ.14) : ಶಾಹೀನ್ ಶಾಲೆಯಲ್ಲಿ ಮಕ್ಕಳು ಅವಾಚ್ಯ ಶಬ್ದ ಬಳಸಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗಲ್ಲ ದಾಖಲೆ ಕೇಳಲು ಬರುವವರಿಗೆ, ನಾಟಕದಲ್ಲಿ ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದರೆ ಅದು ದೇಶ ದ್ರೋಹವಾಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ರಾಜ್ಯ ಸರಕಾರದ ಅಣತಿಯಂತೆ ಪೊಲೀಸರು ದೇಶದ್ರೋಹದ‌ ಕೇಸ್ ಹಾಕಿದ್ದಾರೆ. ಇದು ಖಂಡನೀಯವಾಗಿದ್ದು, ಇಲ್ಲಿ ಮಕ್ಕಳು ‌ಬಳಸಿದ ಪದ ಮಾನಹಾನಿ ಕೂಡಾ‌ ಆಗುವುದಿಲ್ಲವ ಎಂದಾದರೇ ದೇಶದ್ರೋಹ‌ ಹೇಗಾಗಲು ಸಾಧ್ಯ?.ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಬಗ್ಗೆ ನಾಟಕ‌ ಮಾಡಿದರೆ ದೇಶ ದ್ರೋಹವಾಗಲಿಲ್ಲ.

ಸಿದ್ದರಾಮಯ್ಯ


ಶಾಹೀನ್ ‌ಶಾಲೆಯಲ್ಲಿ ನಾಟಕ ಮಾಡಿದರೆ ದೇಶ ದ್ರೋಹದ ಕೇಸ್ ಹಾಕುತ್ತಾರೆ ಇದು ಸಂವಿಧಾನ ವಿರೋಧಿ ಕೆಲಸ  ಶಾಹೀನ್ ಶಾಲೆಯ ಮೇಲೆ‌ ದೇಶ ದ್ರೋಹದ ‌ಪ್ರಕರಣ ಹಾಕಿದ್ದರೇ ಬಗ್ಗೆ‌ ಸದನದಲ್ಲಿ ಹೋರಾಟ ‌ಮಾಡಲಾಗುವುದು ಎಂದು ತಿಳಿಸಿದರು.

ಏನಿದು ಪ್ರಕರಣ ?

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಜನವರಿ 21ರಂದು ಬೀದರ್​ನ ಶಾಹೀನ್ ಶಾಲೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆದಿತ್ತು. ಅದರಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಡೈಲಾಗ್​ಗಳನ್ನ ಮಕ್ಕಳಿಂದ ಹೇಳಿಸಲಾಗಿತ್ತು. ಮಕ್ಕಳ ಪೋಷಕರೊಬ್ಬರು ಈ ನಾಟಕವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಪ್ರಸಾರ ಮಾಡಿದ್ದರು. ಐದು ದಿನಗಳ ನಂತರ ಎಬಿವಿಪಿ ಕಾರ್ಯಕರ್ತ ನೀಲೇಶ್ ರಕ್ಷಲಾ ಎಂಬುವವರು ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ದೂರು ದಾಖಲಿಸಿದರು.

ಈ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಮ್ ಮತ್ತು ವಿದ್ಯಾರ್ಥಿಯ ತಾಯಿ ನಜಬುನ್ನೀಸಾ ಎಂಬಿಬ್ಬರನ್ನು ಬಂಧಿಸಿದರು. ಸಮಾದಲ್ಲಿ ಹಿಂಸೆ ನಡೆಸಲು ಮತ್ತು ನರೇಂದ್ರ ಮೋದಿ ವಿರುದ್ಧ ಧ್ವೇಷ ಸಾಧಿಸಲು ಮಕ್ಕಳಿಗೆ ಪ್ರಚೋದನೆ ಕೊಡಲಾಯಿತು ಎಂದು ಪೊಲೀಸರು ಆರೋಪ ಮಾಡಿ ಪ್ರಕರಣ ದಾಖಲಿಸಿದ್ಧಾರೆ. ಈ ಇಬ್ಬರು ವ್ಯಕ್ತಿಗಳು ಈಗಲೂ ಬಂಧನದಲ್ಲಿದ್ದಾರೆ. ಬೀದರ್​ನ ಸ್ಥಳೀಯ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ.
First published: February 14, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading