ಕೇಂದ್ರದ ಬಳಿ ಜಿಎಸ್​ಟಿ, ನೆರೆ ಪರಿಹಾರ ಕೇಳುವ ಗುಂಡಿಗೆ ಸಿಎಂಗೂ ಇಲ್ಲ, ಸಂಸದರಿಗೂ ಇಲ್ಲ; ಸಿದ್ದರಾಮಯ್ಯ ಆಕ್ರೋಶ

ಮೋದಿ ಕನ್ನಡ ದಲ್ಲಿ ಟ್ವೀಟ್ ಮಾಡಿರುವ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಯಾರೋ ಬರೆದುಕೊಡ್ತಾರೆ, ಟ್ವೀಟ್ ಮಾಡ್ತಾರೆ ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕನ್ನಡಿಗರ ಪರ ಇದಾರೆ ಅಂತ ಅರ್ಥನಾ? ಎಂದು ಪ್ರಶ್ನಿಸಿದರು.

news18-kannada
Updated:October 17, 2020, 1:38 PM IST
ಕೇಂದ್ರದ ಬಳಿ ಜಿಎಸ್​ಟಿ, ನೆರೆ ಪರಿಹಾರ ಕೇಳುವ ಗುಂಡಿಗೆ ಸಿಎಂಗೂ ಇಲ್ಲ, ಸಂಸದರಿಗೂ ಇಲ್ಲ; ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ
  • Share this:
ಬೆಂಗಳೂರು(ಅ.17):  ಕೇಂದ್ರ ಮಲತಾಯಿ ಧೋರಣೆ ಮಾಡ್ತಿದೆ. ನೆರೆ ಹಾನಿಯಿಂದ ರಾಜ್ಯದಲ್ಲಿ 10 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಅಕ್ಟೋಬರ್ 14ರಂದೇ  ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೆ, ಎಚ್ಚರಿಕೆ ವಹಿಸಬೇಕು ಅಂತ.  50 ವರ್ಷಗಳಲ್ಲಿ ಬೀಳದ ಮಳೆ ಈ ಬಾರಿ ಬಿದ್ದಿದೆ. 7 ಲಕ್ಷ ತೊಗರಿ ಬೆಳೆ ಹಾಳಾಗಿದೆ. ನಾವು ಎಚ್ಚರಿಕೆ ಕೊಟ್ಟರೂ ಕೂಡ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ.  ಕರ್ನಾಟಕ ರಾಜ್ಯಕ್ಕೆ ಸಕಲ ನೆರವು ಅಂತಿದ್ದಾರೆ. ಏನ್ ನೆರವು ಕೊಟ್ಟಿದ್ದಾರೆ? ಕೇಂದ್ರಕ್ಕೆ ಮನವಿ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇಷ್ಟೊಂದು ದಪ್ಪ ಚರ್ಮದ ಸರ್ಕಾರ ನೋಡಿಯೇ ಇಲ್ಲ. ನಾವು ಏನೇ ಹೇಳಿದ್ರೂ ಕೇಳ್ತಿಲ್ಲ. ಪತ್ರಗಳಿಗೆ ಸ್ಪಂದಿಸ್ತಿಲ್ಲ. ದುಡ್ಡು ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ದುಡ್ಡಿದ್ರೆ, ಖರ್ಚು‌ ಮಾಡಿ ಗೆಲ್ಬೋದಲ್ವಾ? ಅವರಿಗೆ ಈ ಎಲೆಕ್ಷನ್ ಗೆದ್ವಿ ಅಂತ ಹೇಳ್ಕೋಬೇಕಲ್ವಾ? ಅದಕ್ಕೆ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಜನ ಇವರಿಗೆ ತಕ್ಕ ಪಾಠ ಕಲಿಸ್ತಾರೆ. ನಾನು ಅನೇಕ ಬಾರಿ ಹೇಳಿದ್ದೇನೆ. ಕೇಂದ್ರದ ಎದುರು ಒತ್ತಾಯ ಮಾಡೋ ಧಮ್ ಇಲ್ಲ ಇವರಿಗೆ. 25 ಜನ ಸಂಸದರು ಇದ್ದಾರೆ. ಇವರು ಯಾವತ್ತಾದರೂ ಕೇಳಿದ್ದಾರಾ? ಎಂದು ಪ್ರಶ್ನಿಸಿದರು. ಜಿಎಸ್ ಟಿ ಪರಿಹಾರ ಕೇಳಲಿಲ್ಲ, ಪ್ರವಾಹದ ಪರಿಹಾರ ಕೇಳಲಿಲ್ಲ. ಏನ್ಮಾಡ್ತಿದ್ದಾರೆ ಇವರು? ಮುಖ್ಯ ಮಂತ್ರಿಗಳಿಗೂ ಧೈರ್ಯ ಇಲ್ಲ. ಸಂಸದರಿಗೂ ಧೈರ್ಯ ಇಲ್ಲ ಎಂದು ಕಿಡಿಕಾರಿದರು.

ಮೋದಿ ಕನ್ನಡ ದಲ್ಲಿ ಟ್ವೀಟ್ ಮಾಡಿರುವ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಯಾರೋ ಬರೆದುಕೊಡ್ತಾರೆ, ಟ್ವೀಟ್ ಮಾಡ್ತಾರೆ ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕನ್ನಡಿಗರ ಪರ ಇದಾರೆ ಅಂತ ಅರ್ಥನಾ? ಅವನು ಸೂರ್ಯ ಬೆಂಗಾಳ್​ಗೆ ಹೋಗಿ, ಬೆಂಗಾಳಿಯಲ್ಲಿ ಮಾತನಾಡಿದ ತಕ್ಷಣ ಬೆಂಗಳಿಗರು ಇವನ ಮಾತು ಕೇಳ್ತಾರಾ? ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

10 ನೇ ತಾರೀಖಿಂದ 15ನೇ ತಾರೀಖಿನವರೆಗೆ ಸತತ ಮಳೆಯಾಗಿದೆ. ಆಯಾ ಜಿಲ್ಲೆ ಸಚಿವರು ಅಲ್ಲಲ್ಲೇ ಇದ್ಕೊಂಡು ಕೆಲಸ ಮಾಡಬೇಕು. ಜನಗಳಿಗೆ ಪರಿಹಾರ ಕೊಟ್ಟಿಲ್ಲ, ಮನೆಗಳು ಬಿದ್ದಿವೆ, ಕೆರೆಗಳು ತುಂಬಿ ಕಟ್ಟೆ ಒಡೆದೋಗಿದೆ. ಸಾಕಷ್ಟು ಜನರು ನಿರ್ಗತಿಕರಾಗಿದ್ದಾರೆ. ಸರ್ಕಾರ ಏನೂ ಮಾಡ್ತಿಲ್ಲ. ಕೇಂದ್ರ ಸರ್ಕಾರ ಕೂಡ ನೆರವಿಗೆ ಬರ್ತಿಲ್ಲ. ರಾಜ್ಯ ಸರ್ಕಾರ ಸಹ ಒತ್ತಾಯ ಮಾಡ್ತಿಲ್ಲ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡುದ್ರೆ ಉಪಯೋಗ ಆಗುತ್ತೆ. ಕಾರಜೋಳ ಅವರು ಉಸ್ತುವಾರಿ ವಹಿಸಿಕೊಂಡಿರುವ ಕಡೆ ಇರಬೇಕು. ಆದರೆ ಅವರು ಚುನಾವಣೆ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಫಲವಾದ ಕೊರೋನಾ ವಿರುದ್ಧದ ಹೋರಾಟ; ಏರ್​ಲಿಫ್ಟ್​​ ಮುನ್ನವೇ ಇಹಲೋಕ ತ್ಯಜಿಸಿದ ಮೂಡಬಿದ್ರೆ ಶಿಕ್ಷಕಿ

ಇದೇ ವೇಳೆ ಅಖಂಡ ಶ್ರೀನಿವಾಸ್ ವಿಚಾರವನ್ನು ಅಧ್ಯಕ್ಷರ ಜೊತೆ ಮಾತಾಡ್ತೀನಿ ಎಂದರು. ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆ ಕುರಿತಾಗಿ, ಬಿಜೆಪಿಯವರಿಂದ, ಪೊಲೀಸಿನವರ ತಪ್ಪಿನಿಂದ ಇದಾಗಿದೆ ಅಂತ ನಾನೂ ಹೇಳಿದ್ದೀನಿ. ಈಗಲೂ ಆ ಹೇಳಿಕೆಗೆ ಬದ್ಧ ಎಂದು ಹೇಳಿದರು. ತಮ್ಮ ಶಾಸಕರಿಗೆ ಭದ್ರತೆ ಕೊಡದ ಪಕ್ಷ ಎಂಬುದು ಬಿಜೆಪಿ ಚುನಾವಣಾ ಅಜೆಂಡಾ ಆಗಬಹುದಾದ ವಿಚಾರ. ಹಾವೇರಿಯಲ್ಲಿ ಗೋಲಿಬಾರ್ ಮಾಡಿದ್ಯಾರು, ಮಂಗಳೂರಲ್ಲಿ ಗೋಲಿಬಾರ್ ಮಾಡಿದ್ಯಾರು? ಜನರ ರಕ್ಷಣೆ ಇದೆಯಾ ಸರ್ಕಾರದಲ್ಲಿ? ಎಂದು ಪ್ರಶ್ನಿಸಿ ಕಿಡಿಕಾರಿದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪಡಿಯಲ್ಲಿ ಎಫ್ ಐಆರ್ ಹಾಕಿರುವ ವಿಚಾರವಾಗಿ,  ಇದು ಸುಳ್ಳು ಕೇಸ್.  ಎಫ್.ಐ.ಆರ್ ನಲ್ಲಿ 11.15 ಸಮಯ ಇದೆ. ನಾನು 11.45ಕ್ಕೆ ಹೋಗಿದ್ದು. ಅಲ್ಲಿ ನನ್ನ ಹೆಸರು ಹಾಕಿಲ್ಲ. ಅಪರಿಚಿತ ವ್ಯಕ್ತಿ ಅಂತ ಹಾಕಿದಾರೆ. ಹಾಗಾದ್ರೆ ನಾನು ಅಪರಿಚಿತ ವ್ಯಕ್ತಿನಾ? ಇದು ರಾಜಕೀಯ ಸುಳ್ಳು ಕೇಸ್ ಎಂದು ಆಕ್ರೋಶ ಹೊರಹಾಕಿದರು.ಇಂದಿರಾ ಕ್ಯಾಂಟಿನ್ ಮಾಡಿದ್ದು ಬಡವರಿಗೆ, ಕಾರ್ಮಿಕರಿಗೆ ಅಂತ. ಅವರಿಗೆ ಕಡಿಮೆ ರೇಟ್ ನಲ್ಲಿ ಊಟ ಕೊಡಬೇಕು ಅಂತ. ಇವರಿಗೆ ಬಡವರ ಮೇಲೆ, ಕಾರ್ಮಿಕರ ಮೇಲೆ ಕಾಳಜಿ ಇದ್ರೆ ಇಂದಿರಾ ಕ್ಯಾಂಟಿನ್ ಮುಚ್ಚೋದಿಲ್ಲ. 18 ಕೋಟಿಗೆ ಯಾರಾದರೂ ಇಂದಿರಾ ಕ್ಯಾಂಟಿನ್ ಮುಚ್ತಾರಾ? ಇವರ ಕೈಲಿ ಆಗಲಿಲ್ಲ ಅಂದ್ರೆ ಅಧಿಕಾರ ಬಿಟ್ಕೊಡ್ಲಿ ಎಂದರು.ಇವರೆಲ್ಲಾ ಆರ್.ಆರ್ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾಗೆ ಮಾನಸಿಕ ಹಿಂಸೆ ಕೊಡ್ತಿದ್ದಾರೆ.
ಎಲ್ಲರೂ ಕೊರೋನಾ ನೆಪ ಹೇಳ್ಕಂಡು ಓಡಾಡ್ತಾವ್ರೆ, ವಯಸ್ಸಾಗಿದೆ ಅಂತೇಳ್ತಾರೆ. ವಯಸ್ಸಾದವರು ರಾಜೀನಾಮೆ ಕೊಡಲಿ. ಜನ ಏನು ಇವರೇ ಬೇಕು ಅಂತಿದ್ದಾರಾ? ಎಂದು ವ್ಯಂಗ್ಯವಾಡಿದರು.

ಉಪಚುನಾವಣಾ ಕಣವಾದ ಶಿರಾದಲ್ಲಿ ವಿಜಯೇಂದ್ರ ವಾಸ್ತವ್ಯ ಹೂಡಿರುವ ವಿಚಾರವಾಗಿ,   ವಿಜಯೇಂದ್ರನ ಜೊತೆ ಯಡಿಯೂರಪ್ಪನೂ‌ ಹೋಗಿ ಇರಲಿ ಬಿಡಪ್ಪಾ. ನಮಗೇನು ಅವರು ಇದ್ರೆ ಭಯನಾ? ಯಡಿಯೂರಪ್ಪ ಅಲ್ಲೇ ಹೋಗಿ ಇರಲಿ ಬಿಡಿ. ನಮ್ಮ ಪಕ್ಷದ ಅಭ್ಯರ್ಥಿಯೇ ಅಲ್ಲಿ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published by: Latha CG
First published: October 17, 2020, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading