ಎಂಟಿಬಿ ದೊಡ್ಡ ಮನುಷ್ಯ ಇರಬಹುದು, ಆದರೆ ಇನ್ನೂ ಸಣ್ಣತನ ಹೋಗಿಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಎಂಟಿಬಿ ನಾಗರಾಜ್ ಎಂಬ ಹೆಸರು ಜನಗಳಿಗೆ ಗೊತ್ತಾಗಿದ್ದು, ಕಾಂಗ್ರೆಸ್ ಪಕ್ಷದಿಂದ.  ಕಾಂಗ್ರೆಸ್ ಪಕ್ಷದಿಂದ ಏನು ತೊಂದರೆ ಆಗಿತ್ತು. ಎಂಟಿಬಿ ನಾಗರಾಜ್​ಗೆ 4 ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. 3 ಬಾರಿ ಶಾಸಕರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು ವಸತಿ ಸಚಿವರನ್ನಾಗಿಯೂ ಮಾಡಲಾಗಿತ್ತು. ಇದಕ್ಕಿಂತ ಇನ್ನೇನು ಕೊಡಬೇಕಿತ್ತು? ಬಿಜೆಪಿಯಿಂದ ಮುಖ್ಯಮಂತ್ರಿ ಆಗ್ತಾನಾ? ಇಲ್ಲ ತಾನೇ. ಮತ್ತೆ ಯಾಕೆ ಬಿಜೆಪಿಗೆ ಹೋದ ಎಂದು ಪ್ರಶ್ನಿಸಬೇಕು ಎಂದರು.

Latha CG | news18-kannada
Updated:November 24, 2019, 5:27 PM IST
ಎಂಟಿಬಿ ದೊಡ್ಡ ಮನುಷ್ಯ ಇರಬಹುದು, ಆದರೆ ಇನ್ನೂ ಸಣ್ಣತನ ಹೋಗಿಲ್ಲ; ಸಿದ್ದರಾಮಯ್ಯ ವಾಗ್ದಾಳಿ
ಎಂಟಿಬಿ ನಾಗರಾಜ್​​​​​​​ ಹಾಗೂ ಸಿದ್ದರಾಮಯ್ಯ
  • Share this:
ಹೊಸಕೋಟೆ,(ನ.24): ಮಾಜಿ ಸಿಎಂ ಸಿದ್ದರಾಮಯ್ಯ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಸುರೇಶ್​ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.  ಈ ವೇಳೆ ಮಾತನಾಡಿದ ಅವರು, ಹೊಸಕೋಟೆ ಉಪಚುನಾವಣೆಯನ್ನು​ ಯಾರೂ ಬಯಸಿರಲಿಲ್ಲ. ಅನಾವಶ್ಯಕವಾಗಿ ಚುನಾವಣೆ ಬಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಓಡಿಹೋಗಲು ಆಗಲ್ಲ. ಹಾಗಾಗಿ ಕಾಂಗ್ರೆಸ್​​ನಿಂದ ಪದ್ಮಾವತಿ ಸ್ಪರ್ಧಿಸಿದ್ದಾರೆ.  2018ರಲ್ಲಿ ಎಂಟಿಬಿ ನಾಗರಾಜ್​ಗೆ ಆಶೀರ್ವಾದಿಸಿದ್ದೀರಿ. ಆದರೆ ಎಂಟಿಬಿ ಮತದಾರರಿಗೆ ಮತ್ತು ಟಿಕೆಟ್ ನೀಡಿದ ಪಕ್ಷಕ್ಕೆ ದ್ರೋಹ ಬಗೆದರು. ಈಗ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.  ಮತದಾರರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಎಂಟಿಬಿ ನಾಗರಾಜ್ ಎಂಬ ಹೆಸರು ಜನಗಳಿಗೆ ಗೊತ್ತಾಗಿದ್ದು, ಕಾಂಗ್ರೆಸ್ ಪಕ್ಷದಿಂದ.  ಕಾಂಗ್ರೆಸ್ ಪಕ್ಷದಿಂದ ಏನು ತೊಂದರೆ ಆಗಿತ್ತು. ಎಂಟಿಬಿ ನಾಗರಾಜ್​ಗೆ 4 ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. 3 ಬಾರಿ ಶಾಸಕರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು ವಸತಿ ಸಚಿವರನ್ನಾಗಿಯೂ ಮಾಡಲಾಗಿತ್ತು. ಇದಕ್ಕಿಂತ ಇನ್ನೇನು ಕೊಡಬೇಕಿತ್ತು? ಬಿಜೆಪಿಯಿಂದ ಮುಖ್ಯಮಂತ್ರಿ ಆಗ್ತಾನಾ? ಇಲ್ಲ ತಾನೇ. ಮತ್ತೆ ಯಾಕೆ ಬಿಜೆಪಿಗೆ ಹೋದ ಎಂದು ಪ್ರಶ್ನಿಸಬೇಕು ಎಂದರು.

ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​

ಎಂಟಿಬಿ ಬೆನ್ನಿಗೆ ಚೂರಿ ಹಾಕುವ ಗಿರಾಕಿ. ಯಾಕಪ್ಪ ಪಕ್ಷ ಬಿಟ್ಟು ಹೋಗ್ತಿದ್ದೀಯ ಅಂದರೆ,  ಸುಧಾಕರ್​​ನ ಕೇಳಬೇಕು ಅಂತ ಹೇಳ್ತಾನೆ. ಗೆಲ್ಲಿಸಿದ್ದು ನಾವು, ಮಂತ್ರಿ ಮಾಡಿದವರು ನಾವು. ಇಂತಹ ನೀಚ ರಾಜಕಾರಣ ಮಾಡುವವರನ್ನು ನಂಬಬೇಕಾ? ರಾತ್ರಿಯೆಲ್ಲಾ ನಮ್ಮ ಮನೆಯಲ್ಲಿ ಹೋಗಲ್ಲ ಅಂದ. ಬೆಳಗ್ಗೆ R.ಅಶೋಕ್ ಜೊತೆ ಬಾಂಬೆಗೆ ಹೊರಟ.  ಇಂತಹವರನ್ನು ಧಿಕ್ಕರಿಸಿ ಎಂದು ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.

ಹೊಸಕೋಟೆ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಆಗಿದೆ. ಆದರೆ ನಾನು ಮಾಡಿದೆ ಎಂದು ಎಂಟಿಬಿ ಹೇಳಿಕೊಂಡು ತಿರುಗಾಡುತ್ತಾನೆ. ಆತ ಏನಾದ್ರೂ ಸಿಎಂ ಅಥವಾ ಹಣಕಾಸು ಸಚಿವ ಆಗಿದ್ನಾ ಎಂದು ಪ್ರಶ್ನಿಸಿದರು.  ಒಂದು ಕಡೆ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೆನೆ ಅಂತಾನೆ. ಮತ್ತೊಂದು ಕಡೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ನಾನೇ, ನನಗೆ ಮತ ನೀಡಿ ಅಂತಾನೆ. ಜನರಿಗೆ ಭಾಗ್ಯಗಳ ಸರಮಾಲೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟ ಎಂಟಿಬಿ ವಿರುದ್ಧ ನಿಮಗೆ ಕೋಪ ಬರುವುದಿಲ್ಲವೇ? ಕೋಪ ಬರುವುದಾದರೆ ಡಿ. 5 ರಂದು ಅನರ್ಹನಿಗೆ ಬುದ್ಧಿ ಕಲಿಸಿ ಎಂದರು.

ನಾನು ಒಬ್ಬಂಟಿಯಲ್ಲ. ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಮುಖಂಡರು ನನ್ನ ಜೊತೆ ಇದ್ದಾರೆ. ಮಾಧ್ಯಮದವರಿಗೆ ನನ್ನ ವಿಚಾರ ಪ್ರಸ್ತಾಪ ಮಾಡದಿದ್ದರೆ ಟಿಆರ್​ಪಿ ಸಿಗಲ್ಲ ಎಂದು ಕಿಡಿಕಾರಿದರು.

ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆಹೊಸಕೋಟೆ ಯಾವತ್ತೂ ಕಾಂಗ್ರೆಸ್​​ ಭದ್ರಕೋಟೆ. ಹಲವು ಬಾರಿ ಕೈ ಅಭ್ಯರ್ಥಿಗಳು ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಬಿಜೆಪಿ ಸ್ವಾತಂತ್ರ್ಯಾನಂತರ ಬಂದದ್ದು. ಬಿಜೆಪಿ ದೇಶಕ್ಕಾಗಿ ಯಾವುದೇ ತ್ಯಾಗ ಬಲಿದಾನ ಮಾಡಿಲ್ಲ. ನಾವು ಮಹಾನ್ ದೇಶಭಕ್ತರು ಎನ್ನುವ ಮೋದಿ, ಅಮಿತ್​ ಶಾ ಅವರಿಬ್ಬರು ಹುಟ್ಟಿದ್ದು ಸ್ವಾತಂತ್ರ್ಯ ಬಂದ ಬಳಿಕ. ಸಮಾಜದಲ್ಲಿ ಜಾತಿ-ಧರ್ಮಗಳ ಮಧ್ಯೆ ಸಂಘರ್ಷ ತಂದು, ಅಧಿಕಾರ ಪಡೆಯುವುದು ಬಿಟ್ಟರೆ ಅವರ ಕೊಡುಗೆ ಏನು ಇಲ್ಲ. ಅಂತಹ ಪಕ್ಷಕ್ಕೆ ಸೇರಿರುವ ಎಂಟಿಬಿ ನಾಗರಾಜ್ ಕ್ಷೇತ್ರದ ಜನ, ಪಕ್ಷ, ನಾಯಕರಿಗೆ ದ್ರೋಹ ಮಾಡಿದ್ದಾರೆ. ಇಂಥವರಿಗೆ ನೀವು ಮತ ನೀಡಬಹುದಾ? ಎಂದು ಪ್ರಶ್ನಿಸಿದರು.

ಶ್ರೀರಾಮನಿಗೆ ಆಂಜನೇಯ ಹೇಳಿದ್ದ ಎದೆ ಬಗೆದರೆ ರಾಮ ಅಂತ. ಡೋಂಗಿ ಎಂಟಿಬಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಎಂದ. ನಾನು ಹೇಳಿದ್ನಾ ಬಗೆದರೆ ಸಿದ್ದರಾಮಯ್ಯ ಇದಾರೆ ಅಂತಾ. ಈಗ ಹೇಳ್ತಾರೆ ಸಿದ್ದರಾಮಯ್ಯನಿಗೆ ನಾನೇ ಸಾಲ‌ ಕೊಟ್ಟಿದ್ದಿನಿ ಅಂತಾ. ಅಧಿಕಾರಿ, ಆಸ್ತಿ ಸಂಪತ್ತು ಶಾಶ್ವತ ಅಲ್ಲ. ಕೆಲವೊಮ್ಮೆ ಸಾಲ ಪಡೆದುಕೊಳ್ಳಬೇಕು. ಎಲ್ಲರೂ ಎಂಟಿಬಿ ನಾಗರಾಜ್ ತರ ದುಡ್ಡು ಇರೋರಲ್ಲ. ಇವನು ದೊಡ್ಡ ಮನುಷ್ಯ ಇರಬಹುದು. ಆದರೆ ಇನ್ನೂ ಸಣ್ಣತನ ಹೋಗಿಲ್ಲ ಎಂದು ಎಂಟಿಬಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಎನ್​​ಸಿಪಿ ಶಾಸಕ ಕಾಣೆ; ಮಹಾರಾಷ್ಟ್ರ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲು

ನಾನು 4 ಕೋಟಿ ಮಂದಿಗೆ ಅನ್ನಭಾಗ್ಯ ಯೋಜನೆ ನೀಡಿದ್ದೆ. ಆದರೆ ಯಡಿಯೂರಪ್ಪ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಿದ್ದಾರೆ. ಅಕ್ಕಿ ಕೊಡುವುದು 7 ಕೆಜಿಗಿಂತ ಕಡಿಮೆ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಉಪ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಾನು ಮತ್ತೆ ಸಿಎಂ ಆಗುತ್ತೇನೆ. ಆಗ 10 ಕೆಜಿ ಅಕ್ಕಿ ಕೊಡುತ್ತೇನೆ. 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ.  ಬೈಎಲೆಕ್ಷನ್​ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ. ರೈತರಿಗೆ ಸಮಪರ್ಕವಾಗಿ ಸಹಾಯ ಧನ ನೀಡ್ತಿಲ್ಲ. ರಾಜ್ಯದ ರೈತರ ಸಾಲಮನ್ನಾ ಮಾಡಿದ್ದು, ಇಂದಿರಾ ಕ್ಯಾಂಟೀನ್ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದರು.

First published: November 24, 2019, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading