ಬಿಜೆಪಿ ಮತ್ತು ಜೆಡಿಎಸ್​​ಗೆ ನನ್ನ ಕಂಡರೆ ಭಯ; ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

ಪರಿಹಾರದ ಎರಡನೇ ಕಂತನ್ನೂ ಇನ್ನೂ ಕೊಟ್ಟಿಲ್ಲ, ಕೊಡುವುದು ಇಲ್ಲ. ತಮ್ಮ‌ ಹುಳುಕು ಮತ್ತು ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಕೊಡಲು ಈ ರೀತಿ ಮಾತನಾಡುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಳಗಾವಿ(ಡಿ.08): ಬಿಜೆಪಿ ಮತ್ತು ಜೆಡಿಎಸ್​ಗೆ ನನ್ನನ್ನು ಕಂಡರೆ ಭಯ. ಅದಕ್ಕೆ ಪದೇ ಪದೇ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ಕಥೆ ಮುಗಿಯಿತು ಎಂಬ ಈಶ್ವರಪ್ಪ ಮತ್ತು ಜಗದೀಶ್​ ಶೆಟ್ಟರ್​ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. "ಈಶ್ವರಪ್ಪ, ಜಗದೀಶ್​ ಶೆಟ್ಟರ್ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾರೆ. ಅದೂ ಸಹ ಭ್ರಮೆಯೇ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಹೇಳಿದರು.

ಇದೇ ವೇಳೆ, ಬಿಜೆಪಿ ಮತ್ತು ಜೆಡಿಎಸ್​​​​ಗೆ ನನ್ನ ಕಂಡರೆ ಭಯ. ಅದಕ್ಕೆ ಪದೇ ಪದೇ ನನ್ನ ಹೆಸರು ಪ್ರಸ್ತಾಪಿಸುತ್ತಾರೆ ಎಂದು ಲೇವಡಿ ಮಾಡಿದರು. ಚುನಾವಣೆ ಫಲಿತಾಂಶ ಸಮೀಕ್ಷೆಯನ್ನು ನಾನು ನಂಬಲ್ಲ. ಮಹಾರಾಷ್ಟ್ರ, ಹರಿಯಾಣದಲ್ಲಿ‌ ಏನಾಯ್ತು?  ಅಂದಾಜಿನ ಮೇಲೆ ಸಮೀಕ್ಷೆ ಮಾಡಿರುತ್ತಾರೆ. ಅದಕ್ಕೆ ನಾನು ನಂಬಲ್ಲ ಎಂದರು.

ಕ್ಯಾಂಟರ್​ ಪಲ್ಟಿಯಾಗಿ, ಈರುಳ್ಳಿಯನ್ನು ಜನ ಹೊತ್ತೊಯ್ದರು ಎಂದೇಳಿ 50 ಕ್ವಿಂಟಾಲ್​ ಈರುಳ್ಳಿ ಕದ್ದ ಚಾಲಕ

ಪರಿಹಾರದ ಬಗ್ಗೆ ಸರ್ಕಾರ ಇಂದಿನವರೆಗೂ ತಲೆಕೆಡಸಿಕೊಂಡಿಲ್ಲ. ಹತ್ತು ಸಾವಿರ ಮತ್ತು ಒಂದು ಲಕ್ಷ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಅನೇಕ‌ ಜನರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರಿ ನೌಕರರ ಸಂಬಳ ಆಗಿಲ್ಲ‌. ಸರ್ಕಾರದಲ್ಲಿ  ಹಣಕಾಸು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಆಗದೆ ತೊಂದರೆ ಆಗಿದೆ. ಕೇಂದ್ರ ಸರ್ಕಾರದಿಂದ‌ ರಾಜ್ಯಕ್ಕೆ ಜಿಎಸ್‌ಟಿ ಹಣ 5600ಕೋಟಿ ಬರಬೇಕು. ನಮ್ಮ ಪಾಲನ್ನು ಇನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ, ಅದರಿಂದ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಸರ್ಕಾರ ಉಳಿಸಲು ಭಜನೆ ಮಾಡಿಕೊಂಡು ಕುಳಿತಿದ್ದಾರೆ. ಹಣಕಾಸು ಸಚಿವರು ಮತ್ತು ಪ್ರಧಾನಿ ಮೋದಿ ಬಳಿ ಕುಳಿತು ಹಣ ತರಬೇಕು. ಪರಿಹಾರದ ಎರಡನೇ ಕಂತನ್ನೂ ಇನ್ನೂ ಕೊಟ್ಟಿಲ್ಲ, ಕೊಡುವುದು ಇಲ್ಲ. ತಮ್ಮ‌ ಹುಳುಕು ಮತ್ತು ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಕೊಡಲು ಈ ರೀತಿ ಮಾತನಾಡುತ್ತಿದ್ದಾರೆ. ಜಿಎಸ್​ಟಿ ಸಂಗ್ರಹ ಆಗಿಲ್ಲ ಎಂದು ರಾಜ್ಯಕ್ಕೆ ಕೇಂದ್ರ ಹಣ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಇದೇ ರೀತಿ ಆದರೆ ರಾಜ್ಯದ ಜನರದ್ದು ಅಧೋಗತಿ, ದೇವರೇ ಗತಿ ಎಂದರು.

ಬೆಂಗಳೂರಿಗೆ ಬಂತು ಈಜಿಪ್ಟ್‌ ಈರುಳ್ಳಿ; ಏನಿದರ ವಿಶೇಷತೆ? ಕೆ.ಜಿ. ಗೆ ಎಷ್ಟು ರೂ? ಇಲ್ಲಿದೆ ಮಾಹಿತಿ..!
First published: